ನವದೆಹಲಿ:ನಮ್ಮ ರೈತರು ವಿಶಾಲ ಹೃದಯಿಗಳು ನೋಡಿ, ಮಾನವ ಹಕ್ಕುಗಳ ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ತಮ್ಮ ಪ್ರತಿಭಟನೆಯ ವೇಳೆ ಖಂಡಿಸಿದ್ದಾರೆ ಎಂಬರ್ಥದ ಅಭಿಪ್ರಾಯದೊಂದಿಗೆ ತ್ರಿಕ್ರಿ ಬಾರ್ಡರ್​ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಗುಂಪೊಂದು ನಕ್ಸಲ್ ಹಿತೈಷಿಗಳು, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ 11 ಸೆಕೆಂಡ್​ಗಳ ವಿಡಿಯೋವನ್ನು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.
ಅವರು ಟ್ವೀಟ್​ನಲ್ಲಿ ಹೇಳಿರುವುದಿಷ್ಟು – ತ್ರಿಕ್ರಿ ಬಾರ್ಡರ್​ನಲ್ಲಿ ನಡೆದ ಬೃಹತ್ ರೈತ ಪ್ರತಿಭಟನೆಯಲ್ಲಿ ರೈತರು ಕೂಡ ನಮ್ಮ ಮಾನವ ಹಕ್ಕು ಹೋರಾಟಗಾರರ ಅಕ್ರಮ ಬಂಧನವನ್ನು ಖಂಡಿಸಿದ್ದಾರೆ. ನಮ್ಮ ರೈತರು ವಿಶಾಲ ಹೃದಯದವರಾಗಿದ್ದು, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಉಳ್ಳವರಾಗಿದ್ದಾರೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇದನ್ನೂ ಓದಿ:ಯೂನಿಯನ್ ಲೀಡರ್​ಗಳ ಮೇಲೆ ನಂಬಿಕೆ ಇಡಿ, ಮುಷ್ಕರದಿಂದ ಹಿಂದೆ ಸರಿಯಿರಿ: ಡಿಸಿಎಂ ಸವದಿ
At the massive farmers protests at Tikri border, farmers also protest the illegal & malafide detention of our human rights defenders. Clearly, our farmers have large hearts & serious concerns about humanity & democracy 🙏🏾pic.twitter.com/duCBqZdZik
— Prashant Bhushan (@pbhushan1)December 11, 2020

ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಇದು ರೈತ ಪ್ರತಿಭಟನೆ ಅಲ್ಲ, ಸಿಎಎ ವಿರೋಧಿಸಿದ ಪ್ರತಿಭಟನೆಯ ಇನ್ನೊಂದು ರೂಪ ಎಂದೆಲ್ಲ ಟೀಕಿಸಿದ್ದಾರೆ. ಇಂದು ಬೆಳಗ್ಗೆ 9.52ಕ್ಕೆ ಮಾಡಿರುವ ಈ ಟ್ವೀಟ್ 950ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ರೈತ ಪ್ರತಿಭಟನೆಯ ವೇದಿಕೆ ಮೇಲೆ ಗೋಚರಿಸಿತು ನಕ್ಸಲ್ ಹಿತೈಷಿಗಳ ಬಿಡುಗಡೆಗೆ ಒತ್ತಾಯಿಸಿದ ಬ್ಯಾಕ್​ಡ್ರಾಪ್​ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
