ನವದೆಹಲಿ:ನಾವು ಸುಪ್ರೀಂಕೋರ್ಟನ್ನು ಗೌರವಿಸುತ್ತೇವೆ. ನಾವು ಸುಳ್ಳು ಜಾಹೀರಾತು ಅಥವಾ ಪ್ರಚಾರಗಳನ್ನು ಮಾಡಿರುವುದು ನಿಜವೇ ಆದರೆ ನ್ಯಾಯಾಲಯ ಕೋಟಿ ರೂಪಾಯಿಗಳ ದಂಡ ವಿಧಿಸಿ, ಮರಣದಂಡನೆ ವಿಧಿಸಿದರೂ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಪತಂಜಲಿ ಸಂಸ್ಥೆ ಹೇಳಿದೆ.
ದಂಡ ವಿಧಿಸುವ ಬಗ್ಗೆ ಸುಪ್ರೀಂಕೋರ್ಟ್‌ ನೀಡಿದ ಎಚ್ಚರಿಕೆ ಬಗ್ಗೆ ಪ್ರತಿಕ್ರಿಯಿಸಿದ ಪತಂಜಲಿ, ಯಾವುದೇ ಸುಳ್ಳು ಪ್ರಚಾರ ಮಾಡುತ್ತಿಲ್ಲ ಎಂದು ಒತ್ತಿ ಹೇಳುತ್ತೇವೆ. ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಪಂಚಕರ್ಮ, ಷಟ್ಕರ್ಮ, ಉಪವಾಸದ ನೂರಾರು ಚಿಕಿತ್ಸೆಗಳಿಂದ ಸಾವಿರಾರು ಜನರನ್ನು ಬಿಪಿ, ಶುಗರ್, ಥೈರಾಯ್ಡ್, ಅಸ್ತಮಾ, ಸಂಧಿವಾತ, ಬೊಜ್ಜು, ಯಕೃತ್ತು ಮತ್ತು ಮೂತ್ರಪಿಂಡ ವೈಫಲ್ಯ, ಕ್ಯಾನ್ಸರ್​​ನಂತಹ ಹಲವಾರು ಕಾಯಿಲೆಗಳಿಂದ ಮುಕ್ತಗೊಳಿಸಿದ್ದೇವೆ. ಇದಕ್ಕೆ ನಮ್ಮಲ್ಲಿ ಪೂರಕ ಸಾಕ್ಷ್ಯಗಳಿವೆ. ಕ್ಲಿನಿಕಲ್ ಪುರಾವೆಗಳೊಂದಿಗೆ ನಾವು ಒಂದು ಕೋಟಿಗೂ ಹೆಚ್ಚು ಜನರ ಬಗೆಗಿನ ಡೇಟಾಬೇಸ್ ಹೊಂದಿದ್ದೇವೆ ಎಂದು ಸಂಸ್ಥೆ ವಿವರಿಸಿದೆ.
ಇದನ್ನೂ ಓದಿ:ಜಾತಿಮುಕ್ತ ಸಿದ್ಧಾಂತ ಪತಂಜಲಿ ಆದ್ಯತೆ; ಜಾತಿಮುಕ್ತ ಸಮಾಜ ಸನಾತನ ಸಂಸ್ಕೃತಿಯ ಬಯಕೆ
ಸಾಂಪ್ರದಾಯಿಕ ಚಿಕಿತ್ಸೆ ಪದ್ಧತಿ ಬಗ್ಗೆ ಸಂಶೋಧನೆ ನಡೆಸುವ ಪತಂಜಲಿ ಸಂಶೋಧನಾ ಪ್ರತಿಷ್ಠಾನ ನಮ್ಮಲ್ಲಿದೆ. ನೂರಾರು ವಿಶ್ವಪ್ರಸಿದ್ಧ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಮತ್ತು 3 ಸಾವಿರಕ್ಕೂ ಹೆಚ್ಚು ಸಂಶೋಧನಾ ಶಿಷ್ಟಾಚಾರಗಳನ್ನು ಅನುಸರಿಸುವ ಮೂಲಕ, ಸುಮಾರು 500 ಸಂಶೋಧನಾ ಪ್ರಬಂಧಗಳನ್ನು ವಿಶ್ವದ ಅತ್ಯಂತ ಪ್ರಸಿದ್ಧ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದೇವೆ ಎಂದು ಸಂಸ್ಥೆ ಸಮರ್ಥಿಸಿಕೊಂಡಿದೆ.
ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ವಿರೋಧಿಸುವ ವೈದ್ಯಕೀಯ ವಲಯದ ಕೆಲ ಹತಾಶ ವೈದ್ಯರಿಗೆ ನಾವು ಸವಾಲಾಗಿದ್ದೇವೆ. ಸಿಂಥೆಟಿಕ್ ಔಷಧಗಳಿಂದ ರೋಗಗಳನ್ನು ನಿಯಂತ್ರಿಸಬಹುದು, ಆದರೆ ಗುಣಪಡಿಸಲು ಸಾಧ್ಯವಿಲ್ಲ ಎಂಬುದು ನಿಜ. ಆದರೆ ಅಲೋಪಥಿಯ ಈ ಸಮಸ್ಯೆ ಯೋಗ-ಆಯುರ್ವೇದದ ಸಮಸ್ಯೆಯಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ನಕಲಿ ಪೇಸ್‌ಮೇಕರ್‌ಗಳನ್ನು ಅಳವಡಿಸಿ, ಕಿಡ್ನಿ ಕದಿಯುವ, ಅನವಶ್ಯಕವಾಗಿ ಔಷಧಗಳನ್ನು ಸೇವಿಸುವಂತೆ ಮಾಡುವ, ಪರೀಕ್ಷೆಗಳನ್ನು ಅವ್ಯಾಹತವಾಗಿ ನಡೆಸುವ ಮೆಡಿಕಲ್ ಮಾಫಿಯಾ/ಡ್ರಗ್ ಮಾಫಿಯಾ ಅಪರಾಧ ಎಸಗುತ್ತಿವೆ. ಅಂಥವರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:‘ಎಕ್ಸ್’ ವಿಚಾರ: ಸಾರಾಸಗಟು ಇಲ್ಲವೆಂದ ತೆಂಡುಲ್ಕರ್ ಪುತ್ರಿ!
ವೈದ್ಯಕೀಯ ವಿಜ್ಞಾನದಲ್ಲಿ ಉತ್ತಮ ವೈದ್ಯರು ಮತ್ತು ಜೀವರಕ್ಷಕ ಔಷಧಗಳು, ತುರ್ತು ಚಿಕಿತ್ಸೆ ಮತ್ತು ಅಗತ್ಯ ಶಸ್ತ್ರಚಿಕಿತ್ಸೆ ಒದಗಿಸುವವರನ್ನು ಸದಾ ಗೌರವಿಸುತ್ತೇವೆ. ಮಹರ್ಷಿ ಚರಕ, ಮಹರ್ಷಿ ಸುಶ್ರುತ ಮತ್ತು ಪತಂಜಲಿ, ಮಹರ್ಷಿ ಧನ್ವಂತರಿ ಅವರಿಂದ ಪಡೆದ ಸುಧಾರಿತ ಚಿಕಿತ್ಸಾ ವಿಧಾನವನ್ನು ನಾವು ವೈಜ್ಞಾನಿಕ ರೀತಿಯಲ್ಲಿ ಮುನ್ನಡೆಸುತ್ತಿದ್ದೇವೆ. ವ್ಯಾಪಾರ ಮನೋಧರ್ಮ ನಮ್ಮದಲ್ಲ. ಅಗತ್ಯವಿದ್ದರೆ, ನ್ಯಾಯಾಲಯ ಮತ್ತು ಮಾಧ್ಯಮದ ಮುಂದೆ ಎಲ್ಲ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲು ಸಿದ್ಧ ಎಂದು ಪತಂಜಲಿ ಹೇಳಿದೆ.
ಭಾರಿ ಹೆಬ್ಬಾವನ್ನೇ ಹಿಡಿದ ‘ಮಗಧೀರ’; ವಿಡಿಯೋ ವೈರಲ್, ಜನರಿಂದ ಮೆಚ್ಚುಗೆಯ ಮಹಾಪೂರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
