ನವದೆಹಲಿ: ಕರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್​ಡೌನ್ ಸಮಯದಲ್ಲಿ ಸಾರ್ವಜನಿಕರು ತೋರಿಸುತ್ತಿರುವ ಪ್ರಬುದ್ಧತೆ ಮತ್ತು ಗಂಭೀರತೆ ಅಭೂತಪೂರ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಭಾರತೀಯ ಜನತಾ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಪಕ್ಷದ ಕಾರ್ಯಕರ್ತರು ಹಾಗೂ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಾದ್ಯಂತ ಎಲ್ಲ ಜನರು ಭಾನುವಾರ ರಾತ್ರಿ 9ಗಂಟೆಗೆ ಲೈಟ್​ಗಳನ್ನು ಆರಿಸಿ ತಂತಮ್ಮ ಮನೆಗಳು ಮತ್ತು ಬಾಲ್ಕನಿಯಲ್ಲಿ ದೀಪ ಹಾಗೂ ಕ್ಯಾಂಡಲ್​ಗಳನ್ನು ಬೆಳಗುವ ಮೂಲಕ ಕರೊನಾ ವಿರುದ್ಧದ ಹೋರಾಟದಲ್ಲಿ ದೇಶದ ಏಕತೆಯನ್ನು ತೋರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಕರೊನಾ ವಿರುದ್ಧದ ಹೋರಾಟ ಯುದ್ಧಕ್ಕಿಂತ ಕಡಿಮೆಯಲ್ಲ, ಇದು ದೀರ್ಘಾವಧಿ ಪಯಣ. ಇದರಲ್ಲಿ ನಾವು ಆಯಾಸ ಮಾಡಿಕೊಳ್ಳದೆ, ಜಯಶಾಲಿಯಾಗುವುದು ನಮ್ಮ ಸಂಕಲ್ಪ ಎಂದರು.
ಬಿಜೆಪಿಗೆ ರಕ್ತ ಮತ್ತು ಬೆವರಿನಿಂದ ನೀರುಣಿಸಿ ಬೆಳೆಸಿದ ಎಲ್ಲರಿಗೂ ಗೌರವ ಅರ್ಪಿಸುತ್ತೇನೆ. ಅವರ ಕಾರಣದಿಂದಾಗಿ ಇಂದು ಕೋಟ್ಯಂತರ ಭಾರತೀಯರಿಗೆ ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ಸಿಕ್ಕಿದೆ. ಪಕ್ಷದ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿ ನಮ್ಮ ಕಾರ್ಯಕರ್ತರು ದೇಶದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ ಹಾಗೂ ಸಾಮಾಜಿಕ ಬದಲಾವಣೆಯ ಹೊಸ ಉದಾಹರಣೆಗಳನ್ನು ನೀಡಿದ್ದಾರೆ ಎಂದು ಮೋದಿ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ದೇಶಾದ್ಯಂತ ಬಿಜೆಪಿಯ ಕಚೇರಿಗಳ ಮೇಲೆ ಹಾಗೂ ಕಾರ್ಯಕರ್ತರು ತಮ್ಮ ತಮ್ಮ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಿದ್ದಾರೆ.
ಪಾಕಿಸ್ತಾನದಲ್ಲೂ ಕರೊನಾ ವೈರಸ್​ ಸೋಂಕು ಹರಡಿದ ತಬ್ಲಿಘಿಗಳು: ಜಮಾತ್​ನಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮಂದಿ ಕ್ವಾರಂಟೈನ್​ನಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 10 =
Remember me
