ನವದೆಹಲಿ:ನೂತನ ಸಂಸತ್​ ಭವನದಲ್ಲಿ ಉಂಟಾದ ಭದ್ರತಾ ಲೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪ್ರಕರಣದ ಮಾಸ್ಟರ್​ಮೈಂಡ್​ ಲಲಿತ್​​ ಝಾ ಪೋಷಕರು ಈ ಕುರಿತು ಪ್ರತಿಕ್ರಿಯಿಸಿದ್ದು, ನಮ್ಮ ಮಗ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಲಲಿತ್​ ಝಾ ತಂದೆ ದೇವಾನಂದ್​ ನನ್ನ ಮಗನನ್ನು ಬಂಧಿಸಿರುವ ಬಗ್ಗೆ ನಾನು ಕೆಲವರಿಂದ ತಿಳಿದುಕೊಂಡೆ. ನಮ್ಮ ಮನೆಯಲ್ಲಿ ಟಿವಿ ಸಹ ಇಲ್ಲ ಆತ ಈ ರೀತಿ ಕೆಲಸ ಮಾಡಿದ್ದಾನೆ ಎಂದರೆ ಅದು ಸತ್ಯಕ್ಕೆ ದೂರವಾದ ಮಾತು. ಆತ ಜನರಿಗೆ ಸಹಾಯ ಮಾಡಲು ಇಷ್ಟಪಡುತ್ತಿದ್ದ ಹೊರತು ಈ ರೀತಿಯ ಕೆಲಸಗಳ ಬಗ್ಗೆ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ:ಲೋಕಸಭೆಯಲ್ಲಿ ಆದ ಭದ್ರತಾ ವೈಫಲ್ಯವನ್ನು ನಾವು ಒಪ್ಪುತ್ತೇವೆ: ಬಿಜೆಪಿ ಸಂಸದ ಮುನಿಸ್ವಾಮಿ
ನನ್ನ ಮಗ ರಾಕ್ಷಸ ಅಲ್ಲ. ಆತನ ಬಗ್ಗೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅವನೂ ಮೂರು ಬಾರಿ ರಕ್ತದಾನ ಮಾಡಿದ್ದು, ಈ ರೀತಿಯ ರಾಕ್ಷಸೀ ಕೆಲಗಳಲ್ಲಿ ಭಾಗಿಯಾಗಲು ಸಾಧ್ಯವೇ ಇಲ್ಲ. ನನ್ನ ಮಗ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ. ಆರ್ಥಿಕವಾಗಿ ಹಿಂದುಳಿದಿದ್ದ ವಿದ್ಯಾರ್ಥಿಗಳಿಗೆ ಟ್ಯೂಷನ್​ ಶುರು ಮಾಡಿ ಅವರಿಗೆ ಹಣ ಸಹಾಯ ಮಾಡುತ್ತಿದ್ದ.
ಕಳೆದ ವಾರ ಆತ ಕೊನೆಯದಾಗಿ ನಮ್ಮನ್ನು ಭೇಟಿ ಮಾಡಿದ್ದ. ದೆಹಲಿಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದ್ದ. ಈಗ ನೋಡಿದರೆ ಆತ ಸಂಸತ್​ ಭವನದ ಒಳಗಡೆ ದಾಳಿ ಮಾಡಿದ್ದಾನೆ ಎಂದೆಲ್ಲಾ ಹೇಳುತ್ತಿದ್ದಾರೆ. ನಮಗೆ ಕಾನೂನಿನಲ್ಲಿ ಸಂಪೂರ್ಣ ವಿಶ್ವಾಸವಿದ್ದು, ಆತ ದೋಷಮುಕ್ತನಾಗಿ ಹೊರಬರಲಿದ್ದಾನೆ ಎಂದು ಲಲಿತ್​ ಝಾ ಅವರ ತಂದೆ ದೇವಾನಂದ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 13 =
Remember me
