ತಿರುವನಂತಪುರಂ:ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾದ ಕೇರಳ ಜೋಡಿ ಇದೀಗ ಟ್ರೋಲಿಗರ ದಾಳಕ್ಕೆ ಸಿಲುಕಿದ್ದಾರೆ.
ಹೌದು, ನವಜೋಡಿ ರಿಶಿ ಕಾರ್ತಿಕೇಯನ್​ ಮತ್ತು ಲಕ್ಷ್ಮೀ ಸೆ. 16ರಂದು ಮದುವೆಯಾಗಿದ್ದಾರೆ. ಕರೊನಾ ವೈರಸ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹ ಸಮಾರಂಭ ಜರುಗಿದೆ. ಅಲ್ಲದೆ, ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬೌಡಿಯರ್​ ಸೆಸನ್ಸ್​ (ಮಾದಕ ಫೋಟೊಶೂಟ್​) ಎಂಬ ವಿಭಿನ್ನ ಕಲ್ಪನೆಯೊಂದಿಗೆ ದಂಪತಿ ಪೋಸ್ಟ್​ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದಾರೆ. ಇದರಲ್ಲಿ ದಂಪತಿ ಅರ್ಧಂಬರ್ಧ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಇದೇ ಫೋಟೋಶೂಟ್ ಇದೀಗ​ ಟ್ರೋಲಿಗರಿಗೆ ಆಹಾರವಾಗಿದೆ.
ತಮ್ಮ ಫೋಟೋಗ್ರಾಫರ್​ ಸ್ನೇಹಿತ ಅಖಿಲ್​ ಕಾರ್ತಿಕೇಯನ್​ ನೆರವಿನಿಂದ ದಂಪತಿ ಕೇರಳದ ಇಡುಕ್ಕಿ ಜಿಲ್ಲೆಯ ವ್ಯಾಗಮೋನ್​ ಟೀ ಎಸ್ಟೇಟ್​ನಲ್ಲಿ ಸುಂದರ ಫೋಟೊಶೂಟ್​ ಮಾಡಿಸಿದ್ದಾರೆ. ಹನಿಮೂನ್​ ಹಿನ್ನೆಲೆಯಲ್ಲಿ ದಂಪತಿ ಕಳೆದವಾರ ಇಡುಕ್ಕಿಗೆ ತೆರಳಿದ್ದಾಗ ಅದರ ನಡುವೆಯೇ ಫೋಟೋಶೂಟ್ ನಡೆದಿದೆ.
ಇದನ್ನೂ ಓದಿ:‘ನೀ ಹುಟ್ಟಿದಾಗ ಕುಣಿದಾಡಿದ್ದೆ ಮಗನೇ’; ಚಿರು ನೆನೆದು ಭಾವುಕ ಪೋಸ್ಟ್ ಹಾಕಿದ ಅರ್ಜುನ್​ ಸರ್ಜಾ

ಇದೇ ಖುಷಿಯಲ್ಲೇ ದಂಪತಿ ತಮ್ಮ ಫೇಸ್​ಬುಕ್​ನಲ್ಲಿ ಫೋಟೋಗಳನ್ನು ಶೇರ್​ ಮಾಡುತ್ತಿದ್ದಂತೆ ಸಾಕಷ್ಟು ಅಶ್ಲೀಲ ಕಾಮೆಂಟ್​ಗಳು ಹರಿದುಬಂದಿವೆ. ಕೆಲವೇ ಮಂದಿ ದಂಪತಿ ಫೋಟೋಗಳನ್ನು ಮೆಚ್ಚಿಕೊಂಡರೆ, ಬಹುತೇಕರು ಕೆಟ್ಟದ್ದಾಗಿ ಕಾಮೆಂಟ್​ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫೋಟೋಶೂಟ್​ ಮಾಡಿಸಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂಬಿತ್ಯಾದಿ ಟೀಕೆಗಳು ದಂಪತಿ ವಿರುದ್ಧ ಕೇಳಿಬಂದಿವೆ.
ಟ್ರೋಲಿಗರ ಕಾಮೆಂಟ್​ ವಿರುದ್ಧ ಸಿಡಿದೆದ್ದ ದಂಪತಿ, ನಮ್ಮ ಫೋಟೋ, ನಮ್ಮಿಷ್ಟ ನೀವ್ಯಾರೂ ಕೇಳುವುದಕ್ಕೆ ಎಂದಿದ್ದಾರೆ. ಈ ರೀತಿ ಫೋಟೋಶೂಟ್​ ಮಾಡಿಸಲು ನಮ್ಮ ಮನೆಯವರೇ ನಮ್ಮನ್ನು ವಿರೋಧಿಸಲಿಲ್ಲ ಎಂದು ಸಮರ್ಥನೆಯನ್ನೂ ನೀಡಿದ್ದಾರೆ.
ತುಂಡುಡುಗೆ ಧರಿಸುವುದು ಅಶ್ಲೀಲವೇನು ಅಲ್ಲ. ತುಂಬಾ ಅಸಹ್ಯ ಎನಿಸುವ ಕಾಮೆಂಟ್​ಗಳು ಬಂದವು. ಆರಂಭದಲ್ಲಿ ಕೆಲವೊಂದಕ್ಕೆ ಉತ್ತರ ನೀಡಿದೆವು. ಆದರೆ, ರಾಶಿ ರಾಶಿ ಕಾಮೆಂಟ್​ಗಳು ಬರಲು ಆರಂಭಿಸಿತು. ಫೋಟೋಗಳು ವೈರಲ್​ ಆಗುತ್ತಿದ್ದಂತೆ ಟ್ರೋಲ್ ಮಾಡಲಾರಂಭಿಸಿದರು. ಬಳಿಕ ನಾವು ಗಂಭೀರವಾಗಿ ತೆಗೆದುಕೊಳ್ಳದೇ ಎಲ್ಲವನ್ನು ಕಡೆಗಣಿಸಿದೆವು ಎಂದು ದಂಪತಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.(ಏಜೆನ್ಸೀಸ್​)

1 ಕೋಟಿ ರೂ. ವಂಚನೆ: ಮಾಜಿ ಸಚಿವರ ಮೊಮ್ಮಗಳ ವಿರುದ್ಧ ಪ್ರಕರಣ ದಾಖಲು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
