ನವದೆಹಲಿ :ಕಳೆದ ವರ್ಷ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಗ್ಯಾಂಗ್​ಸ್ಟರ್​ ಒಬ್ಬ ಇದೀಗ ದೆಹಲಿ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದಾನೆ. ಹಲವು ಕೊಲೆ ಪ್ರಕರಣಗಳಲ್ಲಿ ಅವನು ಭಾಗಿಯಾಗಿರುವ ಸುಳಿವು ಸಿಕ್ಕಿದ್ದು, ಪೊಲೀಸರು ಅವನನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗಿದೆ.
ದಕ್ಷಿಣ ದೆಹಲಿಯ ನಿವಾಸಿಯಾದ ಶಾಹ್​ರುಖ್ ಎಂಬಾತನೇ ಆ ವಾಂಟೆಡ್​​ ಕ್ರಿಮಿನಲ್. ಈತ ಹಲವು ಕೊಲೆಗಳು, ಕೊಲೆ ಯತ್ನ ಮತ್ತು ಒಂದು ಗ್ಯಾಂಗ್ ವಾರ್​ನಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋ ಒಂದರಲ್ಲಿ ಮದುವೆ ಸಮಾರಂಭದಲ್ಲಿ ಮಕ್ಕಳು ಮತ್ತು ಇತರರ ಮಧ್ಯೆ ನಿಂತು ಶಾಹ್​ರುಖ್​, ಗಾಳಿಯಲ್ಲಿ ಮೂರ್ನಾಲ್ಕು ಬಾರಿ ಗುಂಡು ಹಾರಿಸಿದ್ದುದು ಬೆಳಕಿಗೆ ಬಂದಿತ್ತು.
ಪೂರ್ವ ದೆಹಲಿಯಲ್ಲಿ ಗ್ಯಾಂಗ್​ ವಾರ್​ ಒಂದರಲ್ಲಿ ಹಲವು ರೌಂಡ್​ಗಳ ಗುಂಡುಗಳನ್ನು ಹಾರಿಸಿದ್ದ ಎನ್ನಲಾದ ಶಾಹ್​ರುಖ್​, ಹಾಲಿ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್​ಸ್ಟರ್​ ಹಶೀಂ ಬಾಬಾನ ಹತ್ತಿರದ ಸಹಚರನಾಗಿದ್ದಾನೆ. ಈತನನ್ನು ಶೀಘ್ರವಾಗಿ ಬಂಧಿಸಲು ದೆಹಲಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಚೀನಾ ಪ್ರಜೆ ಪತ್ತೆ!

ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
