ತಿರುವನಂತಪುರ:ಕೇರಳದ ಆಲಪು್ಪಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರ (ಏವಿಯನ್ ಇನ್​ಫ್ಲುಂಜ- ಎಚ್5ಎನ್8 ) ಕಾಣಿಸಿಕೊಂಡಿರುವುದು ದೃಢ ಪಟ್ಟಿದೆ. ಮೃತ ಪಟ್ಟ ಹಕ್ಕಿಗಳ 8 ಮಾದರಿ (ಸ್ಯಾಂಪಲ್)ಯನ್ನು ಭೋಪಾಲ್​ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಐದರಲ್ಲಿ ಹಕ್ಕಿ ಜ್ವರದ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರದಿಂದ ಇರುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಹಕ್ಕಿ ಜ್ವರ ಕಾಣಿಸಿಕೊಂಡ ಸ್ಥಳದ 1 ಕಿ.ಮೀ.ಪ್ರದೇಶವನ್ನು ಸೋಂಕು ಪೀಡಿತವೆಂದು ಮಾರ್ಗಸೂಚಿ ಅನ್ವಯ ಪರಿಗಣಿಸಲಾಗುತ್ತದೆ. ಇಲ್ಲಿಂದ ಸೋಂಕು ಇತರೆಡೆಗೆ ಹಬ್ಬುವ ಅಪಾಯ ಕೂಡ ಇರುತ್ತದೆ. ಹೀಗಾಗಿ ಈ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಯಂತ್ರಣ ಕೇಂದ್ರ ತೆರೆದು, ತ್ವರಿತ ಸ್ಪಂದನಾ ತಂಡಗಳನ್ನು ಆಲಪು್ಪಳ ಮತ್ತು ಕೊಟ್ಟಾಯಂಗಳಲ್ಲಿ ನಿಯೋಜಿಸಲಾಗಿದೆ ಎಂದು ಸಚಿವ ಕೆ. ರಾಜು ಹೇಳಿದ್ದಾರೆ.
12 ಸಾವಿರ ಬಾತುಕೋಳಿ ಸಾವು:ಕೆಲವು ದಿನಗಳಿಂದ ಈ ಜಿಲ್ಲೆಗಳಲ್ಲಿ 12 ಸಾವಿರ ಬಾತುಕೋಳಿಗಳು ಸತ್ತಿದ್ದು, 36 ಸಾವಿರ ಹಕ್ಕಿಗಳಿಗೆ ಜ್ವರದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಬಾತುಕೋಳಿ ಸಾಕಾಣೆದಾರರಿಗೆ ಯಾವ ರೀತಿಯಲ್ಲಿ ಪರಿಹಾರ ಒದಗಿಸಬಹುದು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಜತೆ ರ್ಚಚಿಸಿ ನಿರ್ಧರಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ನೂರಾರು ಕಾಗೆಗಳು ಸತ್ತಿದ್ದು, ಮಧ್ಯಪ್ರದೇಶದ ಇಂದೋರ್​ನಲ್ಲೂ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಈ ರಾಜ್ಯಗಳಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲೂ ಆತಂಕ:ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪ್ರಖ್ಯಾತ ಸರೋವರದಲ್ಲಿ ಸುಮಾರು 1700 ವಲಸೆ ಹಕ್ಕಿಗಳು ನಿಗೂಢವಾಗಿ ಮೃತ ಪಟ್ಟಿವೆ. ಹೀಗಾಗಿ ಈ ಪ್ರದೇಶಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಹಕ್ಕಿಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈಗ ಹಿಮಾಚಲ ಪ್ರದೇಶದಲ್ಲೂ ಹಕ್ಕಿಜ್ವರ ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತ ಪ್ರದೇಶದಲ್ಲಿ ಕೋಳಿಗಳ ಮಾರಾಟ ನಡೆಸದಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + two =
Remember me
