ನವದೆಹಲಿ:ಕೋವಿಡ್​ ಸೋಂಕಿಗೆ ಒಳಗಾದ ಮಕ್ಕಳಲ್ಲಿ ಇತ್ತೀಚಿನವರೆಗೂ ರೋಗ ನಿರೋಧಕ ಶಕ್ತಿ ಅಸ್ವಾಭಾವಿಕವಾಗಿ ವರ್ತಿಸುವ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ಕರೊನಾದ ಅಷ್ಟೇನೂ ಶಕ್ತಿಶಾಲಿಯಲ್ಲದ ವೈರಸ್​ ಮಕ್ಕಳಿಗೆ ತೊಂದರೆ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಹಜವಾಗಿಯೇ ಇದು ಪಾಲಕರನ್ನು ಚಿಂತೆಗೀಡು ಮಾಡಿದೆ.
ದೆಹಲಿ, ಮುಂಬೈನ ಆಸ್ಪತ್ರೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಕವಾಸಾಕಿ ಕಾಯಿಲೆ ಅಥವಾ ಬಹುವ್ಯವಸ್ಥೆ ಪ್ರಚೋದಕ ಸೋಂಕು ಎಂದು ಗುರುತಿಸಲಾಗುತ್ತಿದೆ.
ದೆಹಲಿಯ ಗಂಗಾರಾಮ್​ ಆಸ್ಪತ್ರೆ, ಕಲಾವತಿ ಸರಣ್​ ಹಾಗೂ ಬಿಎಲ್​ಕೆ ಆಸ್ಪತ್ರೆಯಲ್ಲಿ ಇಂಥ ಪ್ರಕರಣಗಳು ಕಂಡು ಬಂದಿವೆ.ಇದು ಹೆಚ್ಚಾಗಿ ಐದು ವರ್ಷಕ್ಕಿಂತ ಕೆಳಗಿರುವ ಮಕ್ಕಳನ್ನು ಬಾಧಿಸುತ್ತಿದೆ. ರಕ್ತ ಕಣಗಳನ್ನು ಪ್ರಚೋದಿಸುತ್ತದೆ. ಇದು ಸ್ಥಿತಿ ಎರಡರಿಂದ ಮೂರು ವಾರಗಳವರಗೆ ಇರುತ್ತದೆ. ಇದು ಕೋವಿಡ್​ನಿಂದಾದ ಪರಿಣಾಮ ಅಥವಾ ಪ್ರತಿರೋಧಕ ಶಕ್ತಿಯ ಅಸಾಧಾರಣ ವರ್ತನೆಯಿಂದ ಉಂಟಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಇದನ್ನೂ ಓದಿ;ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ
ಈ ಕಾಯಿಲೆಗೆ ತುತ್ತಾದ ಮಕ್ಕಳಿಗೆ 3-5 ದಿನ ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣು ಹಾಗೂ ತುಟಿಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಗಂಭೀರ ಪ್ರಕರಣಗಳಲ್ಲಿ ಜ್ವರ ಇನ್ನೂ ಹೆಚ್ಚಿನ ಅವಧಿಗೆ ಮುಂದುವರಿಯಬಹುದು. ರಕ್ತದೊತ್ತಡ ಕಡಿಮೆಯಾಗಬಹುದು ಎಂದು ವೈದ್ಯರು ವಿವರಿಸುತ್ತಾರೆ.
ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗಿ ಅದು ದೇಹದ ಹಲವು ವ್ಯವಸ್ಥೆಗಳನ್ನು ಪ್ರಭಾವಿಸುತ್ತದೆ. ದೇಹದಲ್ಲಿ ವೈರಸ್​ ಇಲ್ಲದಿದ್ದರೂ ಅದರ ಲಕ್ಷಣಗಳು ಮುಂದುವರಿಯುತ್ತವೆ. ಇದು ನರ ವ್ಯವಸ್ಥೆ ಹಾಗೂ ಹೃದಯ ಸಂಬಂಧಿ ತೊಂದರೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ;ಕರೊನಾ ಲಸಿಕೆಯ ಒಂದು ದಿನದ ಉತ್ಪಾದನೆ ಈ ಜನಾಂಗಕ್ಕೆ ಮೀಸಲು?
ದೆಹಲಿಯಲ್ಲಿ 13 ಹಾಗೂ 9 ವರ್ಷದ ಇಬ್ಬರು ಮಕ್ಕಳಿಗೆ ಜ್ವರ ಹೆಚ್ಚಾಗಿ ಶ್ವಾಸಕೋಶ ಸಂಬಂಧಿ ತೊಂದರೆ ಎದುರಾಯಿತು. ವೆಂಟಿಲೇಟರ್​ನಲ್ಲಿ ಇಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು. ಒಬ್ಬ ಬಾಲಕನಿಗೆ ಕೋವಿಡ್​ ಕೂಡ ಕಾಣಿಸಿಕೊಂಡಿತ್ತು. ಆದರೆ, ಇದಕ್ಕೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದು ಸಮಾಧಾನಕರ ವಿಷಯ. ಒಟ್ಟಿನಲ್ಲಿ ಈ ಕೋವಿಡ್​ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯದ ಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ವೈದ್ಯರು.
ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
