ನವದೆಹಲಿ: ಕರೊನಾ ವೈರಸ್ ಹರಡುತ್ತಿರುವ Covid19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ವ್ಯಾಪಕವಾಗಿ ಜಗತ್ತಿನ ಗಮನಸೆಳೆಯಿತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಡೇಟಾ ಪ್ರಕಾರ 190 ರಾಷ್ಟ್ರಗಳಲ್ಲಿ 3,34,981 ಸೋಂಕು ಪೀಡಿತರು ಮತ್ತು 14,652 ಮರಣ ಪ್ರಮಾಣ ದಾಖಲಾಗಿದೆ. ಈ ನಡುವೆ, ಜಗತ್ತಿನ ಗಮನಸೆಳೆಯುತ್ತಿರುವ ಇನ್ನೊಂದು ಅಂಶ ಕರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಎಂಬುದು. ಈ ಪೈಕಿ ಭಾರತದ 37 ಜನರೂ ಸೇರಿದ್ದಾರೆ.
ವರದಿಯೊಂದರ ಪ್ರಕಾರ ಜಾಗತಿಕ ಮಟ್ಟದಲ್ಲಿ ಮಂಗಳವಾರದ ತನಕ 1,02,069 ಜನ ಕರೊನಾ ಸೋಂಕಿನಿಂದ ಮುಕ್ತರಾಗಿ ಆರೋಗ್ಯ ಸುಧಾರಿಸಿಕೊಂಡಿದ್ದಾರೆ. ಇದೇ ವೇಳೆ ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 500ರ ಗಡು ಸಮೀಪವಿದ್ದು, 37 ಜನರ ಆರೋಗ್ಯ ಸುಧಾರಿಸಿಕೊಂಡಿದ್ದಾರೆ. COVID19 ಆರಂಭವಾದ ಚೀನಾದಲ್ಲೇ ಗರಿಷ್ಠ ಅಂದರೆ 73,159 ಜನರ ಆರೋಗ್ಯ ಸುಧಾರಿಸಿದೆ. ಇಟೆಲಿಯಲ್ಲಿ ಸಾವಿನ ಸಂಖ್ಯೆ6 ಸಾವಿರದ ಗಡಿ ದಾಟಿದ್ದರೂ, 7,432 ಜನರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇಲ್ಲಿ ಇದುವರೆಗೆ 63,927 ಜನರಿಗೆ ಸೋಂಕು ತಗಲಿದ್ದು ಪತ್ತೆಯಾಗಿತ್ತು.ಆದಾಗ್ಯೂ, ಗುಣಮುಖರಾಗಿದ್ದೇವೆ ಎಂದು ಬೀಗುವಂತಿಲ್ಲ. ಗುಣಮುಖರಾದವರಿಗೆ ವೈರಾಣು ತೀವ್ರತರವಾಗಿ ಎರಡನೇ ಬಾರಿ ಅಟ್ಯಾಕ್ ಮಾಡಿ ಪ್ರಾಣಕ್ಕೇ ಎರವಾದ ಉದಾರಹಣೆಗಳಿವೆ. ಇದೇ ಕಾರಣಕ್ಕೆ ಗುಣಮುಖರಾದರೂ ಮತ್ತೆ 14 ದಿನ ಕ್ವಾರಂಟೈನ್ ಮಾಡಬೇಕು ಎಂದು ಪರಿಣತರು ಶಿಫಾರಸು ಮಾಡುತ್ತಿರುವುದು.
ಭಾರತದಲ್ಲಿ ಇದೀಗ ಮುಂಜಾಗ್ರತಾ ಕ್ರಮವಾಗಿ ಲಾಕ್​ಡೌನ್ ಘೋಷಿಸಿದ್ದು, ಕೆಲವೆಡೆ ಕರ್ಫ್ಯೂ ಹೇರಿದ್ದಾರೆ. ಕೇರಳದಲ್ಲಿ ಗರಿಷ್ಠ 87, ಮಹರಾಷ್ಟ್ರದಲ್ಲಿ 84 ಕೇಸ್​ಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಈ ಸಂಖ್ಯೆ 40ರ ಆಸುಪಾಸಿನಲ್ಲಿದೆ. (ಏಜೆನ್ಸೀಸ್)
ಇದು ಕೊನೆಯ ಎಚ್ಚರಿಕೆ ಮನೆಬಿಟ್ಟು ಹೊರಗಡೆ ಓಡಾಡಿದರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ: ಸಿಎಂ ಬಿಎಸ್​ವೈ ಎಚ್ಚರಿಕೆ

ಕರೊನಾ ಕಂಟಕ: ಇಂದು ರಾತ್ರಿ 8ಕ್ಕೆ ದೇಶವಾಸಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
