ನವದೆಹಲಿ:ಭಾರತದಲ್ಲಿ ಮೊಬೈಲ್​ ಫೋನ್​ ಬಳಕಕೆದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಎರಡು ತಿಂಗಳ ಅವಧಿಯಲ್ಲಿ ಅಂದಾಜು 1.48 ಕೋಟಿ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಸಂಶೋಧನೆ ಹಾಗೂ ಸಮೀಕ್ಷಾ ಸಂಸ್ಥೆಯೊಂದು ಈ ವರದಿ ನೀಡಿದೆ.
ಇಂಡಿಯಾ ರೇಟಿಂಗ್​ ಆ್ಯಂಡ್​ ರಿಸರ್ಚ್​ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಕಲೆ ಹಾಕಲಾಗಿದೆ. ಭಾರತದಲ್ಲಿ ಮೊಬೈಲ್​ ಹಾಗೂ ಲ್ಯಾಂಡ್​ಲೈನ್​ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ. ಅದರಲ್ಲೂ ಕೋವಿಡ್​ ಮಹಾಮಾರಿ ಟೆಲಿಕಾಂ ಕ್ಷೇತ್ರದ ಮೇಲೆ ಭಾರಿ ಪರಿಣಾಮವನ್ನೇ ಉಂಟು ಮಾಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ;ರಕ್ಷಣಾ ಇಲಾಖೆ ಭೂಮಿ ಮೆಟ್ರೋಗೆ ಮಾರಾಟ; ಚರ್ಚ್​ ಆಫ್​ ಸೌತ್​ ಇಂಡಿಯಾದ 59.52 ಕೋಟಿ ರೂ. ಇ.ಡಿ. ವಶಕ್ಕೆ
ಎಪ್ರಿಲ್​ನಲ್ಲಿ 82 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು. ಇದೇ ರೀತಿ, ಮೇ ತಿಂಗಳಲ್ಲೂ ಇಳಿಕೆ ಮುಂದುವರಿದು ಮತ್ತೆ 56 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂಬುದು ಗೊತ್ತಾಗಿದೆ.
ಮೊಬೈಲ್​ ಬಳಕೆ ಮಾತ್ರವಲ್ಲದೇ, ಇಂಟರ್​ನೆಟ್​, ವೈರ್​​ಲೆಸ್​ ಇಂಟರ್​ನೆಟ್​ ಬಳಕೆದಾರರ ಸಂಖ್ಯೆ ಕೂಡ ಕುಸಿದಿದೆ. ಲಾಕ್​​ಡೌನ್​ ಸಮಯಕ್ಕೆ ಹೋಲಿಸಿದಲ್ಲಿ ಇನ್ನೂ ಕೆಳಕ್ಕಿಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಬಿಡುಗಡೆಗೆ ತರಾತುರಿ ಇಲ್ಲ; 9 ಕಂಪನಿಗಳ ಜಂಟಿ ಹೇಳಿಕೆ; ವರ್ಷಾಂತ್ಯಕ್ಕೂ ಅನುಮಾನ…!
ಕರೊನಾ ಸಂಕಷ್ಟದ ಕಾರಣದಿಂದಾಗಿ ನಗರಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಜನರೆಲ್ಲ ತಮ್ಮೂರುಗಳಿಗೆ ಮರಳಿದ್ದರಿಂದ ಮೊಬೈಲ್​ ಬಳಕೆಯಿಂದ ದೂರವೇ ಉಳಿದಿದ್ದಾರೆ. ಉದ್ಯೋಗ ಕಡಿತ, ಆದಾಯ ಕುಸಿತ ಮೊದಲಾದ ಕಾರಣಗಳಿಂದ ಹೆಚ್ಚುವರಿ ಮೊತ್ತ ಭರಿಸಲಾಗದೆ ಟೆಲಿಕಾಮ್​ ಬಳಕೆದಾರರು ಕಡಿಮೆಯಾಗಿದ್ದಾರೆಂದು ವಿಶ್ಲೇಷಿಸಲಾಗಿದೆ.ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್​) ಕೂಡ ಪುಷ್ಠೀಕರಿಸಿದೆ.
ಇಳಿಕೆಯಾಯ್ತಾ ಪಿಎಫ್​ ಬಡ್ಡಿದರ? ಈ ಬಾರಿ ಸಿಗೋದು ಎಷ್ಟು? ಸಭೆಯ ನಿರ್ಧಾರವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + four =
Remember me
