ನವದೆಹಲಿ:ಏಪ್ರಿಲ್​​ನಿಂದ ಜೂನ್​ವರೆಗೆ ದೆಹಲಿ ಮೆಟ್ರೋ ಆವರಣದಲ್ಲಿ ರೀಲ್ಸ್​ ಸೇರಿದಂತೆ ಇನ್ನಿತರ ತೊಂದರೆಗಳನ್ನು ಮಾಡಿದ್ದಕ್ಕಾಗಿ 1,600ಕ್ಕೂ ಹೆಚ್ಚು ಜನರ ಮೇಲೆ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್​ ಪ್ರಕರಣಗಳನ್ನು ದಾಖಲಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 3 ರಷ್ಟು ಕೇಸ್​ಗಳು ದಾಖಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರೀಲ್ಸ್​ ಮಾಡುವವರಿಗೆ ಪ್ರತ್ಯೇಕ ದಂಡವನ್ನು ವಿಧಿಸುವ ಯಾವುದೇ ಕ್ರಮವಿಲ್ಲ. ರೈಲಿನ ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ರೈಲಿನ ಒಳಗೆ ತಿನ್ನುವುದು ಕೂಡ ಮೆಟ್ರೋ ರೈಲಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಿರಿಯ ಡಿಎಂಆರ್‌ಸಿ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಮೆಟ್ರೋ ರೈಲ್ವೇಸ್​​ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್​ 59ರ ಅಡಿಯಲ್ಲಿ ಮೆಟ್ರೋದಲ್ಲಿ ಹುಚ್ಚಾಟ ಮೆರೆದ 1,647 ಮಂದಿಗೆ ದಂಡ ವಿಧಿಸಲಾಗಿದೆ. ಕಳೆದ ವರ್ಷವು ಕೂಡ 1,600 ಮಂದಿಗೆ ದಂಡ ವಿಧಿಸಲಾಗಿತ್ತು. ಕಳೆದ ಏಪ್ರಿಲ್​, ಮೇ ಮತ್ತು ಜೂನ್​ ತಿಂಗಳಲ್ಲಿ ಕ್ರಮವಾಗಿ 610, 518 ಮತ್ತು 519 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಡಿಎಂಆರ್​ಸಿ ತಿಳಿಸಿದೆ.
ಮೆಟ್ರೋ ಪ್ರದೇಶದಲ್ಲಿ ರೀಲ್ಸ್​ ಮುಂತಾದವುಗಳನ್ನು ಮಾಡಿ, ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಜನರಿಗೆ ದಂಡ ವಿಧಿಸಲಾಗಿದೆ ಎಂದು ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಸದ್ಯ ಮೆಟ್ರೋ ಆವರಣದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ನಿಗಾವಹಿಸಿದ್ದೇವೆ. ರೀಲ್ಸ್​ ಮಾಡುವುದು ನಮ್ಮ ಗಮನಕ್ಕೆ ಬಂದರೆ ದಂಡ ವಿಧಿಸುವ ಹಕ್ಕನ್ನು ನಾವು ಹೊಂದಿದ್ದೇವೆ. ಇದರಿಂದಾಗಿ ಅದೇಷ್ಟೋ ಜನರು ನಿರುತ್ಸಾಹಗೊಳ್ಳುತ್ತಿದ್ದಾರೆ. ಪ್ರತಿದಿನ 67 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದು, ಪ್ರತಿ ಮೂಲೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಲ್ಲಿ ಸಿಸಿಟಿವಿ ಹಾಗೂ ಪೋಸ್ಟರ್​ಗಳನ್ನು ಹಾಕಲಾಗಿದೆ ಎಂದು ವಿಕಾಸ್ ಕುಮಾರ್ ಹೇಳಿದರು.
ರೈಲಿನಲ್ಲಿ ಇಬ್ಬರು ಯುವತಿಯರು ಪರಸ್ಪರ ಬಣ್ಣ ಬಳಿದುಕೊಳ್ಳುವ ವಿಡಿಯೋ ಏಪ್ರಿಲ್​ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ವೇಳೆ ಆ ವಿಡಿಯೋ ಸಾಕಷ್ಟು ಪ್ರಯಾಣಿಕರಿಂದ ಟೀಕೆಗೆ ಒಳಗಾಗಿತ್ತು. ಸಹ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವಿವಿಧ ಅಭಿಯಾನಗಳನ್ನು ಸಹ ಆ ಸಂದರ್ಭದಲ್ಲಿ ನಡೆಸಲಾಯಿತು. ಅನುಚಿತವೆಂದು ಪರಿಗಣಿಸಲಾದ ಚಟುವಟಿಕೆಗಳನ್ನು ಪರಿಶೀಲಿಸಲು ಮೊಬೈಲ್ ತಪಾಸಣಾ ದಳಗಳನ್ನು ಸಹ ಕೆಲವೊಮ್ಮೆ ನಿಯೋಜಿಸಲಾಗುತ್ತದೆ ಎಂದು ಡಿಎಂಆರ್​ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.(ಏಜೆನ್ಸೀಸ್​)
ಮುಖದ ಅಂದಗೆಡಿಸುವ ಮೊಡವೆಗಳಿಗೆ ಹೇಳಿ ಗುಡ್​ಬೈ: ಕಾಂತಿಯುತ ತ್ವಚೆಗೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
