ನವದೆಹಲಿ:ಕಳೆದ ಮಾರ್ಚ್​ನಲ್ಲಿ ದಕ್ಷಿಣ ದೆಹಲಿಯ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದಿದ್ದ ತಬ್ಲೀಘ್​ ಜಮಾತ್​ನಲ್ಲಿ ಪಾಲ್ಗೊಂಡಿದ್ದ 2,000 ಕ್ಕೂ ಅಧಿಕ ವಿದೇಶಿಗರು ಇನ್ನು 10 ವರ್ಷಗಳ ಕಾಲ ಭಾರತ ಪ್ರವೇಶಿಸುವಂತಿಲ್ಲ…!
ತಬ್ಲಿಘ್​ ಜಮಾತ್​ಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಕ್ರೈಂ ಬ್ರ್ಯಾಂಚ್​ ಪೊಲೀಸರು ಮತ್ತೆ 12 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದು, 541 ವಿದೇಶಿಗರನ್ನು ಹೆಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿಗರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಈ ಹಿಂದೆಯೂ ತಬ್ಲೀಘ್​ ಜಮಾತ್​ನಲ್ಲಿ ಪಾಲ್ಗೊಂಡಿದ್ದ ವಿದೇಶಿಗರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದ ಪರಿಣಾಮ 1,750 ಜನರ ವೀಸಾಗಳನ್ನು ಕೇಂದ್ರ ಗೃಹ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸಿತ್ತು. ಹೊಸ ಚಾರ್ಜ್​ಶೀಟ್​ ಬಳಿಕ ಕ್ರಮಕ್ಕೆ ಗುರಿಯಾದ ವಿದೇಶಿಗರ ಸಂಖ್ಯೆ 2,083ಕ್ಕೆ ಏರಿದಂತಾಗಿದೆ.
ಇದನ್ನೂ ಓದಿ;ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…!
ತಬ್ಲೀಘ್​ ಜಮಾತ್​ನಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ವಿದೇಶಿಗರು ಆಗಮಿಸಿದ್ದರು. ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತದ ವಿವಿಧೆಡೆ ತೆರಳಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪಕ್ಕೆ ಗುರಿಯಾಗಿದ್ದರು. ಅಲ್ಲದೇ. ಕರೊನಾ ವ್ಯಾಪಿಸಲು ಕಾರಣರಾಗಿದ್ದಾರೆ ಎಂದು ವಿವಿಧ ರಾಜ್ಯಗಳಲ್ಲಿ ಇವರ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಟೂರಿಸ್ಟ್​ ವೀಸಾ ಪಡೆದು ಆಗಮಿಸುವ ವಿದೇಶಿಗರು ವೀಸಾ ನಿಯಮ ಉಲ್ಲಂಘಿಸಿದ್ದಲ್ಲದೇ, ಕರೊನಾ ಹಬ್ಬಲು ತಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಬೇಕೆಂದೇ ಪಾಲಿಸದೇ, ರೋಗ ಹರಡಲು ಕಾರಣರಾಗಿದ್ದಾರೆ ಎಂದು ಪೊಲೀಸರು ದಾಖಲಿಸಿದ್ದ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ;ಭಯೋತ್ಪಾದಕರು ಬಿಲಗಳಲ್ಲಿ ಅವಿತಿದ್ದರೂ ಪಾರಾಗುವುದು ಸಾಧ್ಯವಿಲ್ಲ…!
ಇದಲ್ಲದೇ. ಕ್ವಾರಂಟೈನ್​ನಲ್ಲಿದ್ದಾಗಲೂ ವಿಕೃತಿ ಮೆರೆದು, ವೈದ್ಯರಿಗೆ ಹಾಗೂ ಅಧಿಕಾರಿಗಳಿಗೆ ಸಂಕಷ್ಟ ತಂದಿಟ್ಟಿದ್ದರು. ಈ ಬಗ್ಗೆಯೂ ದೆಹಲಿಯ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ಕರೊನಾ ಲಸಿಕೆಗೆ ಇನ್ನೊಂದೇ ಹೆಜ್ಜೆ…! ಜುಲೈನಲ್ಲಿ 30 ಸಾವಿರ ಜನರ ಮೇಲೆ ಅಂತಿಮ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
