ನವದೆಹಲಿ:ಭಾರತದಲ್ಲಿ 137 ಜನರಿಗೆ ಕರೊನಾ ವೈರಸ್​ ತಗಲಿದೆ. ಈ ಸಂಖ್ಯೆಗಿಂತ ಇರಾನ್​ನಲ್ಲಿರುವ ಕರೊನಾ ಪೀಡಿತ ಭಾರತೀಯರ ಸಂಖ್ಯೆಯೇ ಹೆಚ್ಚಾಗಿದೆ.
ಇರಾನ್​ನ ಕ್ವೋಮ್​​, ತೆಹ್ರಾನ್​ಗಳಲ್ಲಿ ನೆಲೆಸಿರುವ ಸುಮಾರು 254 ಭಾರತೀಯರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದೆ. ಕ್ವೋಮ್​ನಲ್ಲಿರುವ ಭಾರತೀಯನೋರ್ವ ಅಲ್ಲಿನ ಸ್ಥಿತಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭಾರತ ಸರ್ಕಾರ ಇರಾನ್​ಗೆ ಪುಣೆಯಿಂದ ನುರಿತ ವೈದ್ಯರ ತಂಡವೊಂದನ್ನು ಕಳಿಸಿದ್ದು, ಅವರು ಭಾರತೀಯರನ್ನು ತಪಾಸಣೆಗೆ ಒಳಪಡಿಸಿ, ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಇದುವರೆಗೆ ಒಟ್ಟು 254 ಜನರಲ್ಲಿ ಸೋಂಕು ದೃಢಪಟ್ಟಿದೆ.
ಭಾರತೀಯ ವೈದ್ಯರ ತಂಡ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತೀಯ ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರು ಸೇರಿದ್ದಾರೆ. ಅದರಲ್ಲಿ ಹಲವರು ತೆಹ್ರಾನ್​ನಲ್ಲಿ ಇದ್ದರೆ, ಇನ್ನೊಂದಷ್ಟು ಜನರು ಕ್ವೋಮ್​ ನಗರದಲ್ಲಿ ಸಿಲುಕಿಕೊಂಡಿದ್ದಾರೆ. ಹೋಟೆಲ್​ಗಳಲ್ಲಿ ಉಳಿದುಕೊಂಡು, ಅಲ್ಲಿಯೇ ವೈರಸ್ ಸೋಂಕಿತರಾದವರೂ ಇದ್ದಾರೆ.ಇರಾನ್​ಗೆ ಹೋಗಿ ಕರೊನಾ ಸೋಂಕಿತನಾಗಿರುವ ಯಾತ್ರಾರ್ಥಿಯಲ್ಲೋರ್ವರಾದ ಅಸಗರ್​ ಅಲಿ ಎಂಬುವರು ಇಂಡಿಯಾ ಟುಡೆಯೊಂದಿಗೆ ಮಾತನಾಡಿ, ಕರೊನಾ ಪೀಡಿತರನ್ನು ಭಾರತೀಯ ಸರ್ಕಾರ ಅಲ್ಲಿಂದ ಕರೆತರಲು ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ಅದರಲ್ಲೂ ಇರಾನ್​ಗೆ ತೆರಳಿರುವ ಭಾರತೀಯ ವೈದ್ಯರ ತಂಡ 254 ಜನರಿಗೆ ಕರೊನಾ ತಗುಲಿದೆ ಎಂದು ಹೇಳಿದೆ. ಆದರೆ ನಾವು ಇರಾನ್​ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿದರೆ ಅಲ್ಲಿನ ವೈದ್ಯರು, ನಿಮಗೆ ಕರೊನಾ ಇಲ್ಲ. ಇದು ಕೋವಿಡ್​-19ರ ಲಕ್ಷಣಗಳಲ್ಲ ಎಂದು ತಿಳಿಸಿದ್ದಾರೆ. ನಮಗೆ ಗೊಂದಲವಾಗುತ್ತಿದೆ. ಆದಷ್ಟು ಬೇಗ ಭಾರತಕ್ಕೆ ವಾಪಸ್​ ಕರೆಸಿಕೊಳ್ಳಿ ಎನ್ನುತ್ತಿದ್ದಾರೆ.
ಇನ್ನು ಕಾರ್ಗಿಲ್​ನ ವಕೀಲ ಹಾಜಿ ಮುಸ್ತಾಫಾ ಎಂಬುವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇರಾನ್​ನಲ್ಲಿರುವ ನನ್ನ ಸಂಬಂಧಿಕರು ಸೇರಿ ಹಲವರಿಗೆ ಕರೊನಾ ವೈರಸ್ ತಗುಲಿದೆ. ಅಲ್ಲಿನ ಆಡಳಿತ ಕಾಳಜಿ ವಹಿಸುತ್ತಿಲ್ಲ. ಇರಾನ್ ಆಸ್ಪತ್ರೆಗಳಲ್ಲಿ ಭಾರತೀಯ ಕರೊನಾ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಕೂಡ ಮಾಡುತ್ತಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)
ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಒಪ್ಪಿಕೊಂಡಿದ್ದಕ್ಕೆ ಕಾರಣ ತಿಳಿಸಿದ ಮಾಜಿ ಸಿಜೆಐ ರಂಜನ್​ ಗೊಗೊಯ್​…

ದೇಶದಲ್ಲಿ ಕರೊನಾ ತಡೆ ಸುಲಭವಲ್ಲ; ಸರ್ಕಾರದ ಮುಂದಿದೆ ಸಾಲು ಸಾಲು ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
