ನವದೆಹಲಿ:ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಈಗಾಗಲೇ 30 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 400ರ ಗಡಿ ದಾಟಿ 427ಕ್ಕೆ ತಲುಪಿದೆ.
ಇಂದು ಮಹಾರಾಷ್ಟ್ರದಲ್ಲಿ 15 ಜನರಲ್ಲಿ ಸೋಂಕಿರುವುದು ದೃಢವಾಗಿದ್ದು ರಾಜ್ಯದ ಸೋಂಕಿತರ ಸಂಖ್ಯೆ 89ಕ್ಕೆ ತಲುಪಿದೆ. ಗುಜರಾತ್​ನಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 29 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ ಎರಡು ನೂತನ ಪ್ರಕರಣಗಳು, ಬಿಹಾರ್​ನಲ್ಲಿ ಒಂದು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಕರೊನಾ ವೈರಸ್​ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಗುಣಮುಖನಾಗಿದ್ದು, ಆಸ್ಪತ್ರೆಯಲ್ಲಿ ಮರಣ ಹೊಂದಿರುವ ಘಟನೆ ಮುಂಬೈನಲ್ಲಿ ಇಂದು ವರದಿಯಾಗಿದೆ.
ಭಾನುವಾರದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಕರೊನಾ ದಾಳಿಗೆ ಒಳಗಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, 67 ಪ್ರಕರಣಗಳೊಂದಿಗೆ ಕೇರಳ ಎರಡನೇ ಸ್ಥಾನ, 29 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನ, 27 ಪ್ರಕರಣಗಳೊಂದಿಗೆ ರಾಜಸ್ಥಾನ ಮತ್ತು ತೆಲಂಗಾಣ ನಾಲ್ಕನೇ ಸ್ಥಾನ, 26 ಪ್ರಕರಣದೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ.(ಏಜನ್ಸೀಸ್​)
ಅಮೆರಿಕದಲ್ಲೇ ನಡೆಯಿತು ಬಾಲಿವುಡ್​ ಸೆಲೆಬ್ರಿಟಿಯ ಜನತಾ ಕರ್ಫ್ಯೂ; ವಿದೇಶದಿಂದಲೇ ದೇಶದ ವೈದ್ಯರಿಗೆ ನಮನ ಸಲ್ಲಿಸಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
