ಉತ್ತರಪ್ರದೇಶ:ಉತ್ತರಪ್ರದೇಶದ ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ 3,000ಕ್ಕೂ ಅಧಿಕ ಧ್ವನಿವರ್ಧಕಗಳು ನಿಗದಿತ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದ ಬೆನ್ನಲ್ಲೇ ಅವುಗಳನ್ನು ಇದೀಗ ತೆಗೆದುಹಾಕಲಾಗಿದೆ ಎಂದು ಉತ್ತರಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಗುವಾಹಟಿಯಲ್ಲಿ ಸಿಗುವುದೇ ಸರಣಿ ಗೆಲುವಿನ ಗ್ಯಾರಂಟಿ!: ಇಂದು ಆಸೀಸ್ ಎದುರು 3ನೇ ಟಿ20
ಧ್ವನಿವರ್ಧಕಗಳ ವಿರುದ್ಧದ ಒಂದು ತಿಂಗಳ ಅಭಿಯಾನದ ಭಾಗವಾಗಿ, ಸೋಮವಾರ (ನ.27) ಎಲ್ಲಾ ಜಿಲ್ಲೆಗಳಲ್ಲಿ ಬೆಳಗ್ಗೆ 5 ರಿಂದ 7 ರವರೆಗೆ 61,399 ಧ್ವನಿವರ್ಧಕಗಳನ್ನು ಪರಿಶೀಲಿಸಲಾಗಿದೆ. ನವೆಂಬರ್ 23ರಿಂದ ಡಿಸೆಂಬರ್ 23ರ ನಡುವೆ ರಾಜ್ಯ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮಾತನಾಡಿ, ನಿಯಮಗಳಿಗೆ ವಿರುದ್ಧವಾಗಿ ಅಥವಾ ನಿಗದಿತ ಡೆಸಿಬಲ್ ಮಿತಿಯನ್ನು ಮೀರಿ ಕಾರ್ಯನಿರ್ವಹಿಸುವ 3,238 ಧ್ವನಿವರ್ಧಕಗಳು ಅಥವಾ ಧ್ವನಿ ವರ್ಧಕಗಳನ್ನು ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ. 7,288 ಧ್ವನಿವರ್ಧಕಗಳು ಅಥವಾ ಆಂಪ್ಲಿಫೈಯರ್‌ಗಳ ಡೆಸಿಬಲ್ ಮಿತಿಯನ್ನು ಮಾನದಂಡಗಳಿಗೆ ಸಮನಾಗಿ ತರಲು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:‘ತಲೈವರ್​ 171’ ಚಿತ್ರಕ್ಕೆ ಖ್ಯಾತ ನಟನ ಎಂಟ್ರಿ!; ಯಾವ ಚಿತ್ರರಂಗದ ಸ್ಟಾರ್​ ಇವರು?
ನಿಗದಿಪಡಿಸಲಾಗಿರುವ ಶಬ್ದದ ಮಿತಿಯನ್ನು ಉಲ್ಲಂಘಿಸುವ ಜನರಿಗೆ ಸದ್ಯ ನೋಟಿಸ್ ನೀಡಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ,(ಏಜೆನ್ಸೀಸ್).
VIDEO | ಹ್ಯಾಂಡ್​ ಪಂಪ್‌ನಿಂದ ಹೊರಬಂತು ‘ಬಿಳಿನೀರು’!; ಹಾಲು ಎಂದು ಬಾಟಲಿ ಹಿಡಿದು ಮುಗಿಬಿದ್ದ ಜನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seven =
Remember me
