ನವದೆಹಲಿ:ಕರೊನಾ ವಾರಿಯರ್ಸ್​ಗೆಂದು ದೊಡ್ಡ, ದೊಡ್ಡ ಕಂಪನಿಗಳು ಚೀನಾದಿಂದ ತರಿಸಿಕೊಟ್ಟಿದ್ದ 50 ಸಾವಿರ ವೈಯಕ್ತಿಕ ರಕ್ಷಣಾ ಉಪಕರಣಗಳನ್ನು (ಪಿಪಿಇ) ವೈದ್ಯರು ತಿರಸ್ಕರಿಸಿದ್ದಾರೆ. ಇವುಗಳು ಗುಣಮಟ್ಟ ಕಳಪೆಯಾಗಿದೆ ಎಂಬ ಕಾರಣಕ್ಕಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿನ ದೊಡ್ಡ, ದೊಡ್ಡ ಕಂಪನಿಗಳು ಕರೊನಾ ವಾರಿಯರ್ಸ್​ಗಾಗಿ ಕೇಂದ್ರ ಸರ್ಕಾರಕ್ಕೆ ಒಟ್ಟು 1.7 ಲಕ್ಷ ಪಿಪಿಇಗಳನ್ನು ದೇಣಿಗೆಯಾಗಿ ಕೊಟ್ಟಿದ್ದರು. ಏಪ್ರಿಲ್​ 5ರಂದು ಇವು ಭಾರತವನ್ನು ತಲುಪಿದ್ದವು.ಇವುಗಳನ್ನು ಗ್ವಾಲಿಯರ್​ನಲ್ಲಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯದಲ್ಲಿ (ಡಿಆರ್​ಡಿಒ) ಪರಿಶೀಲಿಸಿದಾಗ
ಒಟ್ಟು 50 ಸಾವಿರ ಪಿಪಿಇಗಳ ಗುಣಮಟ್ಟ ಕಳಪೆಯಾಗಿರುವುದು ಖಚಿತಪಟ್ಟಿತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಿಇ/ಎಫ್​ಡಿಎ ಅನುಮೋದಿಸಿ, ಮುದ್ರೆಯೊತ್ತಿರುವ ಪಿಪಿಇಗಳನ್ನೇ ತರಿಸುತ್ತಿರುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಇದೀಗ ಪರೀಕ್ಷೆಗೆ ಒಳಪಡಿಸಿರುವ ದಾಸ್ತಾನು ದೇಣಿಗೆ ರೂಪದಲ್ಲಿ ಚೀನಾದಿಂದ ಬಂದಿದ್ದರು ಎಂದು ಹೇಳಲಾಗಿದೆ.
ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್​ಗೆ ಕರೊನಾ ಸೋಂಕು; 72 ಕುಟುಂಬಗಳಿಗೆ ಕ್ವಾರಂಟೈನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
