ನವದೆಹಲಿ:ಕೊವಿಡ್​-19 ಲಾಕ್​ಡೌನ್​ನಿಂದಾಗಿ ಬೇರೆ ದೇಶಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದ ಭಾರತೀಯರನ್ನು ವಂದೇ ಭಾರತ್​ ಯೋಜನೆಯಡಿ, ವಿಮಾನಗಳ ಮೂಲಕ ವಾಪಸ್​ ಕರತರಲಾಗಿದೆ.
ಮೇ 7ರಿಂದ ಶುರು ಮಾಡಿ ಒಟ್ಟು ನಾಲ್ಕು ಹಂತದ ಕಾರ್ಯಾಚರಣೆ ನಡೆಸಲಾಗಿದ್ದು, ಇಲ್ಲಿಯವರೆಗೆ ವಂದೇ ಭಾರತ್​ ಯೋಜನೆಯಡಿ ಸುಮಾರು 8.78 ಲಕ್ಷ ಭಾರತೀಯರದನ್ನು ವಿದೇಶಗಳಿಂದ ವಾಪಸ್​ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
849 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 234 ಫೀಡರ್​ ಫ್ಲೈಟ್ ಸೇರಿ ಒಟ್ಟು 1083 ವಿಮಾನಗಳ ಮೂಲಕ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ನಡೆದಿದೆ ಎಂದು ಇಲಾಖೆ ವಕ್ತಾರ ಅನುರಾಗ್​ ಶ್ರೀವಾಸ್ತವ್​ ತಿಳಿಸಿದ್ದಾರೆ.ಇದನ್ನೂ ಓದಿ:ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ ಯುವಕ!
ಏರ್​ ಇಂಡಿಯಾ, ಇಂಡಿಗೋ, ಸ್ಪೈಸ್​ಜೆಟ್​ ಮತ್ತು ಗೋ ಏರ್​ ಸಂಸ್ಥೆಗಳ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ವಂದೇ ಭಾರತ್​ ಮಿಶನ್​​ನ 4ನೇ ಹಂತದಿಂದ 5ನೇ ಹಂತವನ್ನು ಪ್ರಾರಂಭಿಸಲಾಗಿದೆ. ಜು.29ರವರೆಗೆ 8,78,921 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ.
ನೇಪಾಳ, ಭೂತಾನ್​, ಮಯನ್ಮಾರ್​, ಪಾಕಿಸ್ತಾನ, ಬಾಂಗ್ಲಾದೇಶ, ಯುಎಸ್​ಎ, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್​, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಥೈಲ್ಯಾಂಡ್​, ಚೀನಾ, ಇಸ್ರೇಲ್​, ಉಕ್ರೇನ್​, ಕರ್ಜಿಸ್ತಾನ್​​ಗಳಿಂದ ವಾಪಸ್​ ಆಗಿದ್ದಾರೆ. 5ನೇ ಹಂತ ಆಗಸ್ಟ್​ 1ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
ಲಾಕ್​ಡೌನ್ ವರದಾನವಾಯ್ತು ಈ 51 ವರ್ಷದ ವ್ಯಕ್ತಿಗೆ; 33 ವರ್ಷದಿಂದ ಸಾಧ್ಯವಾಗದ್ದು ಈಗ ಫಲಿಸಿತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
