ಮುನ್ನಾರ್​:ಚಿರತೆಯನ್ನು ಕೊಂದ ಆರೋಪದಲ್ಲಿ 34 ವರ್ಷದ ವ್ಯಕ್ತಿಯನ್ನು ಕೇರಳದ ಮುನ್ನಾರ್​ನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಕುಮಾರ್​ ಎಂದು ಗುರುತಿಸಲಾಗಿದೆ.
ವರ್ಷಗಳ ಹಿಂದೆ ತನ್ನ ಹಸುವನ್ನು ಬೇಟೆಯಾಡಿ ಕೊಂದಿದ್ದಕ್ಕೆ ಪ್ರತಿಕಾರವಾಗಿ ಚಿರತೆಯನ್ನು ಕುಮಾರ್​ ಬೇಟೆಯಾಡಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್​ 8ರಂದು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಚಿರತೆಯನ್ನು ಕನ್ನಿಮಾಲಾ ಎಸ್ಟೇಟ್​ನ ಕೆಳಭಾಗದಲ್ಲಿ ಬೇಟೆಯಾಡಲಾಗಿದೆ.
ಇದನ್ನೂ ಓದಿ:‘ಗೂಗಲ್’​ನಲ್ಲಿ ಇದೇನಿದು ಪೇಟಿಎಂ ‘ಪ್ಲೇ’? ಇಲ್ಲ ಎಂದ ಕೆಲವೇ ಗಂಟೆಗಳಲ್ಲೇ ಇದೆ!
ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಹಸು ಕೊಂದ ಪ್ರತಿಕಾರಕ್ಕಾಗಿ ಚಿರತೆ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹಗಲಿನ ವೇಳೆಯಲ್ಲೇ ಹಸುವಿನ ಮೇಲೆ ದಾಳಿ ಮಾಡಿ ಚಿರತೆ ಕೊಂದು ಹಾಕಿತ್ತು. ಈ ಹಸು ಕುಮಾರ್​ ಜೀವನದ ಆಧಾರವಾಗಿತ್ತು. ಹೀಗಾಗಿ ಸೇಡು ತೀರಿಸಿಕೊಂಡಿದ್ದಾನೆ.
ಚಿರತೆಯನ್ನು ಕೊಂದಿದ್ದು ಹೇಗೆ?ಚಿರತೆಯು ಸಾಮಾನ್ಯವಾಗಿ ಓಡಾಡುತ್ತಿದ್ದ ಏರಿಯಾದಲ್ಲಿ ಕುಮಾರ್​ ಬಲೆಯನ್ನು ಅಳವಡಿಸಿದ್ದ. ಆಗಾಗ ಬಲೆಯನ್ನು ಪರಿಶೀಲಿಸುತ್ತಿದ್ದ. ಕೊನೆಗೊಂದು ದಿನ ಬಲೆಗೆ ಬಿದ್ದ ಚಿರತೆಯನ್ನು ಕುಮಾರ್​ ಚಾಕುವಿನಿಂದ ತಿವಿದು ಕೊಂದು ಹಾಕಿದ್ದಾನೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಪ್ರಧಾನಿ ಮೋದಿ ಬರ್ತಡೇ ಆಚರಿಸಲು 24 ಗಂಟೆ ಯೂಟ್ಯೂಬ್​ ನೇರಪ್ರಸಾರ: ಅಭಿಮಾನಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
