ನವದೆಹಲಿ:ಸಂಟಿತ ಅಕ್ರಮ ಹೂಡಿಕೆಗಳು ಮತ್ತು ಟಾಸ್ಕ್​&ಆಧಾರಿತ ಅರೆಕಾಲಿಕ ಉದ್ಯೋಗ ವಂಚನೆಗಳಿಗೆ ವೇದಿಕೆಯಾಗಿದ್ದ, ವಿದೇಶೀಯರು ನಡೆಸುತ್ತಿದ್ದ 100ಕ್ಕೂ ಹೆಚ್ಚು ವೆಬ್​ಸೈಟ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್​ ಮಾಡಿದೆ.
ಭಾರತೀಯ ಸೈಬರ್​ ಕ್ರೈಂ ಸಮನ್ವಯ ಕೇಂದ್ರ (ಐ4ಸಿ) ತನ್ನ ನ್ಯಾಷನಲ್​ ಸೈಬರ್​ ಕ್ರೈಂ ಥ್ರೆಟ್​ ಅನಾಲಿಟಿಕ್ಸ್​ ಯುನಿಟ್​ (ಎನ್​ಸಿಟಿಎಯು) ಮೂಲಕ ಪತ್ತೆ ಹಚ್ಚಿ ಅವುಗಳನ್ನು ಬ್ಲಾಕ್​ ಮಾಡಲು ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ, ಇಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾನೂನಿನ ಅಧಿಕಾರ ಬಳಸಿ ಈ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡಿದೆ.
ಮಾಹಿತಿ ತಂತ್ರಜ್ಞಾನ ಕಾನೂನನ್ನು ಬದಲಾಯಿಸುವ ಡಿಜಿಟಲ್​ ಇಂಡಿಯಾ ಕಾನೂನನ್ನು ಮುಂದಿನ ವರ್ಷದ ಲೋಕಸಭೆ ಚುನಾವಣೆಗೂ ಮುನ್ನ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುವ ಸಂಭವ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್​ ಚಂದ್ರಶೇಖರ್​ ಹೇಳಿದ್ದಾರೆ. ಸಮಾಲೋಚನೆಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ವಿಳಂಬಗೊಳ್ಳಬಹುದು ಎಂದು ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಅವರು ಅಭಿಪ್ರಾಯಪಟ್ಟರು. ಆದರೆ, ಡಿಜಿಟಲ್​ ವೈಯಕ್ತಿಕ ಡೇಟಾ ರಕ್ಷಣಾ ಕಾನೂನಿನ ನಿಯಮಗಳು ಈ ತಿಂಗಳ ಕೊನೆಯಲ್ಲಿ ಹೊರಬೀಳಬಹುದು.
ಮಾಸಾಂತ್ಯ ಅಥವಾ ಜನವರಿ ಆರಂಭದಲ್ಲಿ ಆ ಕುರಿತು ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಈಗ ಜಾರಿಯಲ್ಲಿರುವ ಐಟಿ ಕಾನೂನಿನಲ್ಲಿ ಇಂಟರ್​ನೆಟ್​ ಎಂಬ ಪದವೇ ಇಲ್ಲ. ಅದನ್ನು ಸುಲಭವಾಗಿ ಬದಲಾಯಿಸಿ ಬೇರೆ ಕಾನೂನು ತರುವ ಬಗ್ಗೆ ಸಹಮತ ಇದೆ ಎಂದು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
