ನವದೆಹಲಿ:ಅತಿಯಾದ ಆಂಟಿಬಯಾಟಿಕ್ ಔಷಧ ಸೇವನೆಯಿಂದ ದೀರ್ಘಕಾಲೀನ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಬಗ್ಗೆ ವೈದ್ಯರ ಎಚ್ಚರಿಕೆ ನಡುವೆಯೇ ಭಾರತೀಯರು ಅತೀ ಹೆಚ್ಚಿನ ಪ್ರಮಾಣದಲ್ಲಿ ಆಂಟಿಬಯಾಟಿಕ್​ಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನವೊಂದು ದೃಢಪಡಿಸಿದೆ. ಭಾರತೀಯರು ಅತಿಯಾದ ಪ್ರತಿಜೀವಕಗಳನ್ನು ಸೇವಿಸುತ್ತಿದ್ದು ಆ ಪೈಕಿ ಅಜಿಥ್ರೊಮೈಸಿನ್ ಅಗ್ರಸ್ಥಾನದಲ್ಲಿದೆ ಎಂದು ‘ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್​ಈಸ್ಟ್ ಏಷ್ಯಾ’ದಲ್ಲಿ ಪ್ರಕಟಗೊಂಡ ವರದಿ ಹೇಳಿದೆ. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ನಿಯಂತ್ರಣಾಧಿಕಾರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಆಂಟಿಬಯಾಟಿಕ್ಸ್ ಲಭ್ಯತೆ ಸಮಸ್ಯೆ ಸಂಕೀರ್ಣಗೊಳ್ಳುತ್ತಿದೆ ಎಂದು ಸೆ. 1ರಂದು ಪ್ರಕಟವಾಗಿರುವ ವರದಿ ಪ್ರತಿಪಾದಿಸಿದೆ.
ಕೋವಿಡ್-19 ಸಾಂಕ್ರಾಮಿಕತೆ ವೇಳೆ ಹಾಗೂ ಅದಕ್ಕಿಂತ ಮುನ್ನವೂ ಅಜಿಥ್ರೊಮೈಸಿನ್ ಸಹಿತ ಆಂಟಿ ಬಯೋಟಿಕ್​ಗಳನ್ನು ಭಾರತೀಯರು ಅತಿ ಯಾದ ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬ ಅಂಶವನ್ನು ಸಂಶೋಧಕರು ಎತ್ತಿ ತೋರಿಸಿದ್ದಾರೆ.
ಜನರು ಬಳಸುವ ಹೆಚ್ಚಿನ ಆಂಟಿಬಯಾಟಿಕ್​ಗಳು ಕೇಂದ್ರೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ಹೊಂದಿಲ್ಲ. ಹೀಗಾಗಿ ಅವುಗಳ ನಿಯಂತ್ರಣ ಕ್ಕಾಗಿ ಮಹತ್ವದ ನೀತಿ ರೂಪಿಸಬೇಕು ಹಾಗೂ ನಿಯಂತ್ರಣಾ ಸುಧಾರಣೆ ಜಾರಿಗೊಳಿಸಬೇಕು ಎಂದು ಲ್ಯಾನ್ಸೆಟ್ ಹೇಳಿದೆ.
ಶೇ.47 ಅನುಮೋದನೆಯಿಲ್ಲದ್ದು:ಭಾರತದಲ್ಲಿ 2019ರಲ್ಲಿ ಖಾಸಗಿ ಕ್ಷೇತ್ರದಲ್ಲಿ ಬಳಸಲಾದ ಆಂಟಿಬಯಾಟಿಕ್ ಸೂತ್ರಗಳ ಪೈಕಿ ಶೇಕಡ 47ಕ್ಕೆ ಸರ್ಕಾರದ ಅನುಮೋದನೆಯಿಲ್ಲ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ. ಸೆಫಾಲೊಸ್ಪೊರಿನ್ಸ್, ಮ್ಯಾಕ್ರೊಲೈಡ್ಸ್ ಮತ್ತು ಪೆನ್ಸಿಲಿನ್ಸ್ -ಅನá-ಮೋದನೆಯಿಲ್ಲದ ಮೂರು ಪ್ರಮುಖ ಆಂಟಿಬಯಾಟಿಕ್ ವಿಭಾಗಗಳಾಗಿವೆ.
ಭಾರತದಲ್ಲಿ ಬಳಕೆಯಾಗುವ ಒಟ್ಟು ಪ್ರತಿಜೀವಕಗಳಲ್ಲಿ ಶೇಕಡ 85ರಿಂದ 90ರಷ್ಟು ಖಾಸಗಿ ಕ್ಷೇತ್ರದ ಬಳಕೆಯಾಗಿದೆ ಎನ್ನುವುದು ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯ ಮತ್ತು ನವದೆಹಲಿಯ ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಸಂಶೋಧಕರ ಅಧ್ಯಯನದಿಂದ ತಿಳಿದು ಬಂದಿದೆ.
ನಿಯಮಿತವಾಗಿ ಆಂಟಿ ಬಯೋಟಿಕ್ಸ್ ಔಷಧ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಗ್ರಾ್ಯಸ್ಟಿಕ್ ಉಂಟಾಗುತ್ತದೆ, ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಜತೆಗೆ ಯಕೃತ್ತು ಮತ್ತು ಕಿಡ್ನಿಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆ ಇರಲಿ ವೈದ್ಯರ ಸಲಹೆ ಇಲ್ಲದೆ ಔಷಧೋಪಚಾರ ಮಾಡಿಕೊಳ್ಳಬಾರದು.
|ಡಾ. ಶ್ರೀಕಾಂತ್ಬೌರಿಂಗ್ ಆಸ್ಪತ್ರೆ ಸಮನ್ವಯ ಅಧಿಕಾರಿ
ಎಲ್ಲ ಆರೋಗ್ಯ ಸಮಸ್ಯೆಗೆ ಒಂದೇ ಔಷಧ ಇರುವುದಿಲ್ಲ. ಹಾಗೆಯೇ ಎಲ್ಲ ರೋಗಗಳಿಗೂ ಒಂದೇ ವೈರಾಣು ಕಾರಣವಾಗಿರುವುದಿಲ್ಲ. ಒಂದೊಂದು ಕಾಯಿಲೆಗೆ ಒಂದೊಂದು ವೈರಾಣು ಇಲ್ಲವೆ ಬ್ಯಾಕ್ಟೀರಿಯಾ ಕಾರಣವಾಗಿರುತ್ತದೆ. ಅದು ಎಷ್ಟು ಪ್ರಮಾಣದಲ್ಲಿ ಇದೆ ಎಂಬುದನ್ನು ತಿಳಿದು, ರೋಗಿಯ ದೇಹತೂಕವನ್ನು ಆಧರಿಸಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದ್ದರಿಂದ ಸ್ವಯಂ ಚಿಕಿತ್ಸೆ ಮಾಡದೆ, ವೈದ್ಯರಲ್ಲಿ ತಪಾಸಣೆ ಮಾಡಿಸಿ ಅವರ ಸಲಹೆ ಮೇರೆಗೆ ಔಷಧ ಸೇವನೆ ಒಳ್ಳೆಯದು.
|ಡಾ. ಶಿವಕುಮಾರ್ವಿಕ್ಟೋರಿಯಾ ಆಸ್ಪತ್ರೆ
9,000 ಸಂಗ್ರಾಹಕರು:ಅಂದಾಜು 5,000 ಔಷಧ ಕಂಪನಿಗಳಿಂದ ಉತ್ಪನ್ನಗಳನ್ನು ಖರೀದಿಸಿ ಸಂಗ್ರಹಿಸುವ 9,000 ಸ್ಟಾಕಿಸ್ಟ್​ಗಳಿಂದ ಪಡೆದ ಅಂಕಿ-ಅಂಶಗಳನ್ನು ಈ ಅಧ್ಯಯನಕ್ಕಾಗಿ ವಿಶ್ಲೇಷಿಸಲಾಗಿದೆ.
10,000ಕ್ಕೂ ಅಧಿಕ ಉತ್ಪನ್ನ:ಭಾರತದಲ್ಲಿ ಆಂಟಿಬಯಾಟಿಕ್​ನ 1,098 ವಿಶಿಷ್ಟ ಸೂತ್ರಗಳು ಹಾಗೂ 10,100 ಉತ್ಪನ್ನಗಳಿವೆ ಎಂದು ಲ್ಯಾನ್ಸೆಟ್ ಅಧ್ಯಯನ ಬೆಳಕು ಚೆಲ್ಲಿದೆ. ಆದಾಗ್ಯೂ, ಬೇರೆ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಂಟಿಬಯಾಟಿಕ್​ನ ಖಾಸಗಿ ಕ್ಷೇತ್ರದ ತಲಾ ಸೇವನೆ ಕಡಿಮೆಯಿದೆ ಎಂದು ವರದಿ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
