ಮೊರ್ಬಿ:ಗುಜರಾತ್​ನ ಮೊರ್ಬಿಯಲ್ಲಿ ನಡೆದ ಸೇತವೆ ಕುಸಿತದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್​ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು. ಅಗತ್ಯವಿದ್ದಲ್ಲಿ ಗ್ರೀಸಿಂಗ್​ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ. ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು.
‘ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್, ಈ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದಿದ್ದಾರೆ’ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಈ ಮಾಹಿತಿಯನ್ನು ನೀಡಿದ್ದಾರೆ. ಒವೆರಾ ಕಂಪನಿಯ ಇಬ್ಬರು ಮ್ಯಾನೇಜರ್​ರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರು ಈ ಹೇಳಿಕೆಯನ್ನು ನೀಡಿದ್ದಾರೆ.
ಇಂದು ಪೊಲೀಸ್ ಕಸ್ಟಡಿಗೆ ಕಳುಹಿಸಲಾದ ಆರೋಪಿಗಳ ವಿವರವನ್ನು ಕೇಳಿದಾಗ ವಕೀಲ ಪಾಂಚಾಲ್, ‘ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ಮ್ಯಾನೇಜರ್‌ಗಳು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದವರು. ಉಳಿದ ಐವರು ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿಗಳಾಗಿದ್ದರು’ ಎಂದರು.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + 18 =
Remember me
