ರಾಂಚಿ:ವೇಗವಾಗಿ ಚಲಿಸುತ್ತಿದ್ದ ರೈಲೊಂದು ಹಠಾತ್​ ಎಂದು ಬ್ರೇಕ್​ ಹಾಕಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಾರ್ಖಂಡ್​ನ ಪರ್ಸಾಬಾದ್​ ಬಳಿ ನಡೆದಿದೆ.
ನವದೆಹಲಿ ಹಾಗೂ ಪುರಿ ನಡುವೆ ಸಂಚರಿಸುವ ಪುರುಷೋತ್ತಮ್​ ಎಕ್ಸ್​ಪ್ರೆಸ್​ನಲ್ಲಿ ಈ ಅವಘಡ ಸಂಭವಿಸಿದ್ದು, ಹಠಾತ್​ ಬ್ರೇಕ್​ ಹಾಕಿದ ಪರಿಣಾಮ ರೈಲಿನಲ್ಲಿ ಉಂಟಾದ ಜರ್ಕ್​ನಿಂದ ಇಬ್ಬರು ಪ್ರಯಾಣಿಕರು ಮರತಪಟ್ಟಿದ್ದಾರೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ಅಲ್ಲಮಪ್ರಭು ಸ್ವಾಮೀಜಿ ಲಿಂಗೈಕ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಪರುಷೋತ್ತಮ್​ ಎಕ್ಸ್​ಪ್ರೆಸ್​ ರೈಲು ಘಂಟೆಗೆ 130 ಕಿಲೋಮೀಟರ್​ ವೇಗದಲ್ಲಿ ಚಲಿಸುತ್ತಿತ್ತು. ಓವರ್​ಹೆಡ್​ ವಿದ್ಯುತ್​ ತಂತಿ ತುಂಡಾಗಿ ಬಿದ್ದ ಪರಿಣಾಮ ಲೋಕೋಪೈಲೆಟ್​ ತಕ್ಷಣವೇ ಎಚ್ಚೆತ್ತು ಬ್ರೇಕ್​ ಹಾಕಿದ್ದಾರೆ. ಇದರಿಂದ ಜರ್ಕ್​ ಉಂಟಾಗಿದ್ದು, ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಪರ್ಸಾಬಾದ್​ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವು ನಾಲ್ಕು ಘಂಟೆಗಳು ಸ್ಥಗಿತಗೊಂಡಿದ್ದು, ಆ ನಂತರ ಪುನಾರಂಭಗೊಂಡಿತ್ತು. ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ರಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + nine =
Remember me
