ಹೈದರಾಬಾದ್​:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಮಾತಿನ ತಿರುಗೇಟು ನೀಡಿದ್ದಾರೆ. ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರೇನು ನಿಮ್ಮ ಆಸ್ತಿ ಅಲ್ಲ ಎಂದು ಓವೈಸಿ ಮಮತಾ ಬ್ಯಾನರ್ಜಿ ಅವರಿಗೆ ಹೇಳಿದ್ದಾರೆ.
ಇದನ್ನೂ ಓದಿ:ಮದುವೆಯಾದ ಸ್ನೇಹಿತ ಪಾರ್ಟಿಗೆ ಕಡಿಮೆ ಹೆಂಡ ತಂದ! ನೀ ಬದುಕಲು ಯೋಗ್ಯನಲ್ಲ ಎಂದು ಕೊಂದೇ ಬಿಟ್ಟರು ಸ್ನೇಹಿತರು
ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಹೇಳಿದ್ದರು. ಈ ಮಾತಿನಿಂದಾಗಿ ಸಿಟ್ಟಿಗೆದ್ದಿರುವ ಓವೈಸಿ, ಮಮತಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. ‘ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಪೂರ್ತಿ ವಿಶ್ವದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈವರೆಗೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಮಮತಾ ಅವರು ಇದುವರೆಗೆ ಮಿರ್​ ಜಾಫರ್ಸ್ ಮತ್ತು ಸಾದಿಕ್‌ಗಳೊಂದಿಗೆ ಮಾತ್ರ ವ್ಯವಹರಿಸಿದ್ದಾರೆ. ತಮಗಾಗಿ ಯೋಚಿಸುವ ಮತ್ತು ಮಾತನಾಡುವ ಮುಸ್ಲಿಮರನ್ನು ಅವರು ಇಷ್ಟಪಡುವುದಿಲ್ಲ. ಅವರು ಬಿಹಾರದ ಮತದಾರರನ್ನು ಅವಮಾನಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:ಖತರ್​ನಾಕ್​ ಲೇಡಿಯಿಂದ ವಂಚನೆ; 34 ವಾಹನ ಜಪ್ತಿ, ಹತ್ತಕ್ಕೂ ಹೆಚ್ಚು ಪ್ರಕರಣ ದಾಖಲು…
ಮುಸ್ಲಿಂ ಮತದಾರರು ನಿಮ್ಮ ಆಸ್ತಿಯಲ್ಲ. ಈ ರೀತಿ ಮತ ವಿಭಜಿಸಲು ಬಂದವರಿಗೆ ಯಾವ ಪರಿಸ್ಥಿತಿ ಬಂದಿದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ನಿಮ್ಮ ಪಕ್ಷವನ್ನು ಭದ್ರವಾಗಿಟ್ಟುಕೊಳ್ಳಿ ಎಂದು ಓವೈಸಿ, ಮಮತಾ ಅವರಿಗೆ ಹೇಳಿದ್ದಾರೆ. (ಏಜೆನ್ಸೀಸ್​)
ಈ ಕೇಸ್​ ಸಾಲ್ವ್​ ಮಾಡೋಕೆ ಸಹಾಯ ಮಾಡಿದರೆ ನಿಮಗೆ ಸಿಗುತ್ತೆ 2.7 ಕೋಟಿ ರೂಪಾಯಿ!

ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
