ಚೆನ್ನೈ:ಇತ್ತೀಚೆಗೆ ಎಲೆಕ್ಟ್ರಿಕ್​ ಬೈಕ್​​ ಗುಣಮಟ್ಟ ಕುರಿತು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈಗಾಗಲೇ ಖರೀದಿಸಿರುವ ಗ್ರಾಹಕರಿಗೆ ಮಾತ್ರ ಹಣವೂ ಇಲ್ಲ, ಬೈಕೂ ಇಲ್ಲದಂತಾಗಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಬೈಕ್​​ ಕೆಟ್ಟುಹೋಗುತ್ತಿರುವುದರಿಂದ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಗುಣಮಟ್ಟ ಚೆನ್ನಾಗಿದೆ ಎಂದು ನಂಬಿಸಿ ಖರೀದಿಸಿದ ಕೆಲವೇ ತಿಂಗಳಲ್ಲಿ ಎಲೆಕ್ಟ್ರಿಕ್​ ಬೈಕ್​​ ಕೆಟ್ಟುಹೋಗಿದ್ದರಿಂದ ಮಾಲೀಕ ಬೈಕಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.
ಇತ್ತೀಚೆಗೆ ಓಲಾ ಕಂಪನಿಯ ಎಲೆಕ್ಟ್ರಿಕ್​ ಬೈಕ್​ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ಸ್ವತಃ ಸಂಸ್ಥೆಯೇ 1400 ಕ್ಕೂ ಅಧಿಕ ಬೈಕನ್ನು ಹಿಂಪಡೆದಿದೆ. ಈ ಬೆನ್ನಲ್ಲೇ ಗ್ರಾಹಕರೂ ಕೂಡ ಇಷ್ಟಪಟ್ಟು ಖರೀದಿಸಿದ ಬೈಕ್​​ ಅಲ್ಪ ದಿನವೂ ಬಾಳಿಕೆ ಬರಲಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿದ ಫೃಥ್ವಿರಾಜ್​ ಎಂಬ ವ್ಯಕ್ತಿ ಜನವರಿಯಲ್ಲಿ ಎಲೆಕ್ಟ್ರಿಕ್​ ಬೈಕ್​ ಖರೀದಿಸಿದ್ದಾರೆ. ಆ ವೇಳೆ ಸಂಸ್ಥೆ ಬೈಕ್​ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿತ್ತು. ಖರೀದಿಸಿದ ಮೂರೇ ತಿಂಗಳಿಗೆ ಬಣ್ಣ ಬಯಲಾಗಿದ್ದು, ಹಾಗಾಗಿ ಬೈಕನ್ನೇ ಸುಟ್ಟಾಕುತ್ತಿದ್ದೇನೆ ಎಂದು ಹೇಳಿದ್ದಾರೆ.
PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
