ಮುಂಬೈ:ಭಾರತದ ಶ್ರೀಮಂತರ ಪಟ್ಟಿಯ ಮೊದಲಿಗ ಮುಕೇಶ್​ ಅಂಬಾನಿ ಅವರ ಆಂಟಿಲಿಯಾ ಮನೆ ಬಳಿ ಪತ್ತೆಯಾಗಿದ್ದ ನಿಗೂಢ ಕಾರಿನ ಮಾಲೀಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಸ್ಫೋಟಕ ವಸ್ತು ತುಂಬಿದ್ದ ಕಾರಿನ ಮಾಲೀಕನ ಸಾವು ಇದೀಗ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಆಂಟಿಲಿಯಾ ಬಳಿ 20 ಜೆಲೆಟಿನ್​ ಸ್ಟಿಕ್​ಗಳಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಅದರ ಜತೆ ಒಂದು ಇನ್ನೋವಾ ಕಾರು ಸಾಕಷ್ಟು ಗಂಟೆಗಳ ಕಾಲ ಅದೇ ಮನೆಯ ಬಳಿ ನಿಂತಿದ್ದರಿಂದ ಅನುಮಾನ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಗೊತ್ತಾಗಿತ್ತು. ಕಾರಿನಲ್ಲಿ ಒಂದು ಬೆದರಿಕೆ ಪತ್ರ ಮತ್ತು ಕೆಲವು ವಾಹನಗಳ ನಂಬರ್​ ಪ್ಲೇಟ್​ ಕೂಡ ಸಿಕ್ಕಿತ್ತು. ಮುಕೇಶ್​ ಬೈಯಾ​ ಹಾಗೂ ನೀತಾ ಬಾಬಿ, ಇದಿನ್ನೂ ಟ್ರೇಲರ್​.. ಮುಂದಿನ ಬಾರಿ ಇದು ಕಂಪ್ಲೀಟ್​ ಆಗಿರಲಿದೆ. ಅದಕ್ಕೆ ಎಲ್ಲ ತಯಾರಿ ಆಗಿದೆ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿತ್ತು. ಈ ಪ್ರಕರಣವನ್ನು ಮುಂಬೈ ಕ್ರೈಂ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.
ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಹೈರೆನ್​ ಮನ್ಸುಖ್​. ಆದರೆ ಆತ ಶುಕ್ರವಾರದಂದು ಹೆಣವಾಗಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬಂದಿದೆ. ಆದರೆ ಅದು ಆತ್ಮಹತ್ಯೆಯೋ ಅಥವಾ ಪೂರ್ವ ನಿಯೋಜಿತ ಕೊಲೆಯೋ ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಅತ್ತೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಳಿಮಯ್ಯ!

ಚಿನ್ನ​ ಕಳ್ಳಸಾಗಣೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್​ ಪಾತ್ರ! ಇವರ ಕಳ್ಳತನಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಸ್ವಪ್ನಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + 11 =
Remember me
