ನವದೆಹಲಿ:ಭಾರತೀಯರಿಗೆ ವರ್ಷಾಂತ್ಯಕ್ಕೆ ಮೊದಲ ಕರೊನಾ ಲಸಿಕೆ ದೊರೆಯುವ ಎಲ್ಲ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಅದು ಭಾರತದ್ದಲ್ಲ…!
ಇದಕ್ಕೂ ಕಾರಣವಿದೆ. ಸದ್ಯ ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಹಂತದ ಪರೀಕ್ಷೆಯಲ್ಲಿವೆ. ಈ ದೇಶೀಯ ಭಾರತ್​ ಬಯೋಟೆಕ್​ನ ಕೊವಾಕ್ಸಿನ್​ ಲಸಿಕೆ ಮೊದಲ ಹಂತದ ಪರೀಕ್ಷೆ ನಡೆಸುತ್ತಿದ್ದರೆ, ಜೈಡಸ್​ ಕ್ಯಾಡಿಲಾ ಕಂಪನಿಯ ಜೈಕೊವ್​ ಡಿ ಔಷಧವನ್ನೂ ಮಾನವ ಮೇಲೆ ಪ್ರಯೋಗಿಸಲಾಗುತ್ತದೆ.
ಜಾಗತಿಕವಾಗಿ ಮುಂಚೂಣಿಯಲ್ಲಿರುವ ಆಕ್ಸ್​ಫರ್ಡ್​ ವಿವಿ ಹಾಗೂ ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಈಗಾಗಲೇ ಮೂರನೇ ಹಂತದ ಪರೀಕ್ಷೆ ನಡೆಸುತ್ತಿದೆ. ಬ್ರಿಟನ್​, ಅಮೆರಿಕ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಮಾನವರ ಮೇಲೆ ಅಂತಿಮ ಹಂತದ ಪ್ರಯೋಗ ನಡೆದಿದೆ.
ಇದನ್ನೂ ಓದಿ;ಕಾಂಗ್ರೆಸ್‌ ಮುಖಂಡೆಯ ಪುತ್ರಿಯ ನಿಗೂಢ ಸಾವು: ಅಮ್ಮ-ಮಗಳ ಜಗಳದ ಬೆನ್ನಲ್ಲೇ ಘಟನೆ?
ಎರಡು ಹಂತದ ಪರೀಕ್ಷೆಗಳಲ್ಲಿ ಈ ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಎನಿಸಿದೆ. ಜತೆಗೆ, ವೈರಸ್​ ಕಣಗಳನ್ನು ನಾಶಪಡಿಸುವ ಟಿ-ಸೆಲ್​ ಕೂಡ ಇದರಲ್ಲಿ ಅಭಿವೃದ್ಧಿಯಾಗಿದೆ. ಹೀಗಾಗಿ ಈ ಲಸಿಕೆ ಭಾರಿ ಭರವಸೆ ಮೂಡಿಸಿದೆ.
ಈ ಲಸಿಕೆಯನ್ನು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಭಾರತದಲ್ಲಿ ಉತ್ಪಾದಿಸುವ ಹಾಗೂ ಮಾರಾಟ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ಬಡ ರಾಷ್ಟ್ರಗಳಿಗೂ ಇಲ್ಲಿಂದಲೇ ಪೂರೈಕೆಯಾಗಲಿದೆ. ಕೋವಿಶೀಲ್ಡ್​​ ಹೆಸರಲ್ಲಿ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ;ಭಾರತದಲ್ಲಿ ಕ್ಯಾನ್ಸರ್‌ ಸ್ಥಿತಿಗತಿಯ ವರದಿ ಬಿಚ್ಚಿಟ್ಟ ಸಂಶೋಧಕರು
ಮುಂಬೈನ ಕೆಇಎಂ ಹಾಗೂ ನಾಯರ್​ ಆಸ್ಪತ್ರೆಯಲ್ಲಿ ಕೋವಿಶೀಲ್ಡ್​ನ ಎರಡನೇ ಹಂತದ ಪರೀಕ್ಷೆಗೆ ಚಾಲನೆ ನೀಡಲಾಗಿದೆ. ಅಂದಾಜು 1,600 ಜನರಿಗೆ ಈ ಲಸಿಕೆ ನೀಡಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ವರ್ಷಾಂತ್ಯಕ್ಕೆ ಲಸಿಕೆ ಭಾರತೀಯರಿಗೆ ಲಭ್ಯವಾಗುವುದು ಖಚಿತ. ಈಗಾಗಲೇ ಬ್ರಿಟನ್​ನಲ್ಲಿ ಇದು ಯಶಸ್ವಿಯಾಗಿರುವುದರಿಂದ ಕಾನೂನಾತ್ಮಕ ಕಾರಣಗಳಿಗಾಗಿ ಇದನ್ನು ಪ್ರಯೋಗ ಮಾಡಲಾಗುತ್ತಿದೆ.
ಇನ್ನೊಂದು ವಿಚಾರವೆಂದರೆ, ಬಿಲ್​ ಹಾಗೂ ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನ ಸಿರಂ ಇನ್​ಸ್ಟಿಟ್ಯೂಟ್​ಗೆ ಆರ್ಥಿಕ ನೆರವು ನೀಡಿರುವುದರಿಂದ ಈ ಲಸಿಕೆ ಕೇವಲ 225 ರೂ.ಗಳಿಗೆ ಲಭ್ಯವಾಗಲಿದೆ. ಜತೆಗೆ ವರ್ಷಾಂತ್ಯಕ್ಕೆ 40 ಕೋಟಿ ಡೋಸ್​​ ಉತ್ಪಾದನೆ ಗುರಿ ಹೊಂದಲಾಗಿದೆ.
https://www.vijayavani.net/toilets-liquor-shops-built-atop-demolished-masjid-in-china/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
