ನವದೆಹಲಿ:ಕರೊನಾ ಲಸಿಕೆಗಿನ್ನು ಹೆಚ್ಚು ಕಾಯಬೇಕಿಲ್ಲ ಎನಿಸುತ್ತಿದೆ. ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲೂ ಕರೊನಾ ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.
ಬ್ರೆಜಿಲ್​ನಲ್ಲಿ ಐದು ಸಾವಿರ ಕರೊನಾ ರೋಗಿಗಳ ಮೇಲೆ ವಿವಿ ಅಭಿವೃದ್ಧಿಪಡಿಸಿದ ಲಸಿಕೆ ಪ್ರಯೋಗಿಸಲಾಗಿದೆ. ಅಡೆನೊ ವೈರಸ್​ ವಿಧಾನದ ಮೂಲಕ ಲಸಿಕೆಯನ್ನು ತಯಾರಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲೂ ಇದು ಸುರಕ್ಷಿತವಾಗಿದೆ. ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾದ ರೋಗಿಗಳ ಮೇಲೂ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ.
ಇದನ್ನೂ ಓದಿ;ದೇವರೇ ಕಾಪಾಡಬೇಕು; ಕರೊನಾ ನಿವಾರಣೆ ಮಾನವ ಯತ್ನ ಮೀರಿದ್ದು ಎಂದ ಸಿಎಂ ಉದ್ಧವ್​
ಚಿಂಪಾಜಿಯಿಂದ ಪಡೆಯಲಾಗಿದ್ದ ಅಡೆನೊ ವೈರಸ್​ ಲಸಿಕೆಗಾಗಿ ಬಳಸಲಾಗಿದೆ. ಇದು ಮಾನವರಲ್ಲಿ ಹರಡುವುದಿಲ್ಲ. ಹೀಗಾಗಿ ಅತ್ಯಂತ ಸುರಕ್ಷಿತವಾಗಿದೆ. ಇದಕ್ಕೆ ಕರೊನಾ ವೈರಸ್​ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಉಂಟು ಮಾಡಬಲ್ಲ ಕೆಲ ಜೀನ್​ಗಳನ್ನು ಸೇರಿಸಲಾಯಿತು ಎಂದು ಸಂಶೋಧನಾ ತಂಡದ ಮುಖ್ಯಸ್ಥೆ ಪ್ರೊ. ಸಾರಾ ಗಿಲ್ಬರ್ಟ್​ ಹೇಳಿದ್ದಾರೆ.
ಇದೇ ತಂತ್ರ ಬಳಸಿ ಹಲವು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಕೂಡ ಉತ್ತಮ ವಿಷಯವೇ ಆಗಿದೆ. ಲಸಿಕೆಯಲ್ಲಿ ಒಬ್ಬರೇ ಪಾರಮ್ಯ ಪಡೆಯುವ ಬದಲು ಹಲವು ಲಸಿಕೆಗಳು ತಯಾರಾಗುವುದು ಉತ್ತಮ ಎಂಬುದು ಅವರ ಅಭಿಪ್ರಾಯ. ವಿಶ್ವಸಂಸ್ಥೆಯ ರಾಯಭಾರಿಗಳೊಂದಿಗಿನ ಸಂವಾದದಲ್ಲಿ ಸಾರಾ ಈ ವಿಷಯವನ್ನು ತಿಳಿಸಿದ್ದಾರೆ. ಒಂದು ವೇಳೆ ಆಕ್ಸ್​ಫರ್ಡ್​ ವಿವಿ ಲಸಿಕೆ ಯಶಸ್ವಿಯಾದಲ್ಲಿ ಇತರ ಲಸಿಕೆಗಳು ಕೂಡ ಯಶಸ್ವಿಯಾಗಲಿವೆ ಎಂಬ ವಿಶ್ವಾಸ ಅವರದ್ದಾಗಿದೆ.
ಇದನ್ನೂ ಓದಿ;ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ
ಅಡೆನೊ ವೈರಸ್​ ವಿಧಾನದಲ್ಲಿಯೇ ಫ್ಲೂ, ಚಿಕುನ್​ಗುನ್ಯಾ, ಜೈಕಾ, ಈ ಮೊದಲಿನ ಕರೊನಾವೈರಸ್​ ಹಾಗೂ ಮಧ್ಯಪ್ರಾಚ್ಯದಲ್ಲಿ ಕಂಡು ಬಂದ ಎಂಇಆರ್​ಎಸ್​ ಕಾಯಿಲೆಗೂ ಲಸಿಕೆ ತಯಾರಿಸಲಾಗಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ, ಎಲ್ಲರಿಗೂ ಲಭ್ಯವಾಗುವಂಥ ಲಸಿಕೆ ತಯಾರಿಸಲು ಔಷಧ ಉತ್ಪಾದಕರೆಲ್ಲ ಒಂದಾಗಬೇಕು ಎನ್ನುವುದು ಸಾರಾ ಅಭಿಪ್ರಾಯ.
ಇನ್ನೊಂದು ಸಂತೋಷದ ವಿಷಯವೆಂದರೆ, ಆಕ್ಸ್​ಫರ್ಡ್​ ವಿವಿಯೊಂದಿಗೆ ಕೈಜೋಡಿಸಿರುವ ಆಸ್ಟ್ರಾಜೆನೆಕಾ ಕಂಪನಿ ಪ್ರಾಯೋಗಿಕ ಲಸಿಕೆಯನ್ನು ಉತ್ಪಾದಿಸಲು ಪುಣೆಯ ಸಿರಂ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕೆಲ ತಿಂಗಳಲ್ಲಿ ಭಾರತದಲ್ಲೂ ಈ ಲಸಿಕೆ ಉತ್ಪಾದನೆಯಾಗಿ, ದೊರೆಯುವುದು ಖಚಿತ.
ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
