ಬೆಂಗಳೂರು:ರಾಜ್ಯದಲ್ಲಿ ಆಮ್ಲಜನಕ ಸರಬರಾಜು ಕಂಪನಿಗಳು ಕಾಳಸಂತೆಯಲ್ಲಿ ಈ ಹಿಂದಿಗಿಂತ ದುಪ್ಪಟ್ಟು, ಮೂರುಪಟ್ಟು ದರ ಹೆಚ್ಚಿಸಿ ಆಮ್ಲಜನಕ ಮಾರಾಟ ಮಾಡುತ್ತಿವೆ. ಒಂದು ಸಿಲಿಂಡರ್ ಆಮ್ಲಜನಕವನ್ನು 500 ರೂ.ನಿಂದ 1,600 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆ ಇಲ್ಲವೆಂದು ಸರ್ಕಾರ ಹೇಳುತ್ತಿದ್ದರೂ, ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜಿನಲ್ಲಿ ಭಾರಿ ವ್ಯತ್ಯಯ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ, ಕಾಳಸಂತೆಯಲ್ಲಿ ಆಮ್ಲಜನಕವನ್ನು ಸರಬರಾಜು ಮಾಡುವ ಕಂಪನಿಗಳು 3-4 ಪಟ್ಟು ಬೆಲೆ ಹೆಚ್ಚಿಸಿ ಬಡ ಕೋವಿಡ್ ರೋಗಿಗಳ ಮೂಲಕ ವಸೂಲಿ ಮಾಡಲು ಮುಂದಾಗಿವೆ. ಸಾಮಾನ್ಯ ದಿನಗಳಲ್ಲಿ 400 ರೂ.ಗಳಿಂದ 500 ರೂ.ಗಳಿಗೆ ಒಂದು ಸಿಲಿಂಡರ್ ಲಭ್ಯ ಆಗುತ್ತಿತ್ತು. ಈಗ 1,500ರಿಂದ 1,600 ರೂ.ಗೆ ಮಾರಲಾಗುತ್ತಿದೆ. ಬಿಲ್​ನಲ್ಲಿ ನೇರವಾಗಿ ಹಣ ನಮೂದಿಸದೆ, ಸೇವಾ ಶುಲ್ಕವೆಂದು ಪಡೆಯಲಾಗುತ್ತದೆ ಎಂದು ಆಕ್ಸಿಜನ್ ಖರೀದಿ ಮಾಡುವ ಆಸ್ಪತ್ರೆ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ಆಂಬುಲೆನ್ಸ್ಗಳಲ್ಲಿ ಕಳ್ಳಾಟ: ರಾಜಧಾನಿಯಲ್ಲಿ 30ಕ್ಕೂ ಕಡಿಮೆ ಹಾಸಿಗೆ ಹೊಂದಿರುವ ಸಣ್ಣ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್​ಗಳು ಆಮ್ಲಜನಕ ಸಿಲಿಂಡರ್ ಹೊಂದಿವೆ. ಸಣ್ಣ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಬಾರದು ಎಂಬ ನಿಯಮವಿದ್ದರೂ, ಕೆಲ ಆಸ್ಪತ್ರೆಗಳು ಸೋಂಕಿತರನ್ನು ದಾಖಲಿಸಿಕೊಂಡು ಆಮ್ಲಜನಕ ಕೊಡುತ್ತಿವೆ. ಇನ್ನು ಆಂಬುಲೆನ್ಸ್ಗಳು ಕೂಡ ಸಿಲಿಂಡರ್ ಹೊಂದಿದ್ದು, ತೀವ್ರ ಉಸಿರಾಟ ತೊಂದರೆ ಇರುವ ಸೋಂಕಿತರು ಸಿಕ್ಕಿದಲ್ಲಿ ಆಮ್ಲಜನಕ ಕೊಟ್ಟು ಎಲ್ಲ ಆಸ್ಪತ್ರೆಗೆ ಸುತ್ತಾಡಿಸಿ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಒಂದೇ ಕಂಪನಿ ಸಿಲಿಂಡರ್ ಬೇಕು: ಆಮ್ಲಜನಕ ಪೂರೈಕೆ ಮಾಡುವ ಸಂಸ್ಥೆಗಳು ತಮ್ಮ ಕಂಪನಿಯ ಸಿಲಿಂಡರ್ ಅನ್ನೇ ತರುವಂತೆ ಕೇಳುತ್ತವೆ. ಖಾಲಿ ಸಿಲಿಂಡರ್ ಕೊಟ್ಟು, ತುಂಬಿದ ಸಿಲಿಂಡರ್ ತೆಗೆದುಕೊಂಡು ಹೋಗಬಹುದು. ಸಿಲಿಂಡರ್ ತುಂಬಿಕೊಡಲು 4-5 ಗಂಟೆ ವಿಳಂಬ ಆಗುತ್ತದೆ. ಜತೆಗೆ ಬೇರೆ ಕಂಪನಿ ಸಿಲಿಂಡರ್​ಗೆ ಆಮ್ಲಜನಕ ಪೂರೈಕೆ ಮಾಡುವುದಿಲ್ಲ ಎಂದು ಹೇಳುತ್ತಿವೆ. ಇದರಿಂದ ಕೆಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಕಂಡುಬರುತ್ತಿದೆ.
ಖಾಸಗಿಯವರ ನಿಯಂತ್ರಣ ಅಗತ್ಯ
ರಾಜ್ಯದಲ್ಲಿ ಕೋವಿಡ್ ಆಕ್ಸಿಜನ್ ಮತ್ತು ರೆಮಿಡೆಸಿವಿರ್ ಔಷಧ ಸಹಾಯವಾಣಿ 8951755722 ಗೆ ಕರೆ ಮಾಡಿದರೆ, ಯಾವುದೇ ಸಿಲಿಂಡರ್ ಅಥವಾ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಆಕ್ಸಿಜನ್ ಪೂರೈಕೆ ಆಗುತ್ತಿರುವುದು ಮತ್ತು ಕೆಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿದೆ ಎಂದು ಸೋಂಕಿತರಿಂದ ಲಕ್ಷಾಂತರ ಹಣ ವಸೂಲಿ ಮಾಡುತ್ತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
