ನವದೆಹಲಿ :ಕರೊನಾ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ದೆಹಲಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್​​ಗಳ ಕಾಳದಂಧೆ ನಡೆಸುತ್ತಿದ್ದ ನಾಲ್ಕು ಜನ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯಲ್ಲಿರುವ ಕಾನ್ಸಂಟ್ರೇಟರ್​ಗಳನ್ನು ತಲಾ 70 ಸಾವಿರ ರೂ.ಗಳಿಗೆ ಮಾರುತ್ತಾ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಒಟ್ಟು 419 ಉಪಕರಣಗಳನ್ನು ದೆಹಲಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ದೆಹಲಿ ಪೊಲೀಸ್​​ ಸಿಬ್ಬಂದಿಯು ನಗರದ ಲೋಧಿ ಕಾಲೊನಿಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ನೆಗೆ ಜು ರೆಸ್ಟೊರೆಂಟ್ ಅಂಡ್​ ಬಾರ್​​ನಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ, ಒಬ್ಬ ವ್ಯಕ್ತಿ ಲ್ಯಾಪ್​ಟಾಪ್​ ಹಿಡಿದು ಆನ್​ಲೈನ್​ ಪೋರ್ಟಲ್​ ಮೂಲಕ ಆಕ್ಸಿಜನ್ ಕಾನ್ಸಂಟ್ರೇಟರ್​ಗಳಿಗೆ ಆರ್ಡರ್ ಪಡೆಯುತ್ತಿದ್ದುದು ಕಂಡಿದೆ.
ಇದನ್ನೂ ಓದಿ:ಆರ್​ಟಿಪಿಸಿಆರ್​ ಪರೀಕ್ಷೆಗೆ 500 ರೂ. ದರ ನಿಗದಿ : ಸರ್ಕಾರಿ ಆದೇಶಕ್ಕೆ ತಡೆ ಇಲ್ಲ
ರೆಸ್ಟೊರೆಂಟ್​ನ ಶೋಧ ನಡೆಸಿದಾಗ 9 ಲೀಟರ್ ಮತ್ತು 5 ಲೀಟರ್ ಸಾಮರ್ಥ್ಯದ ಕಾನ್ಸಂಟ್ರೇಟರ್​​ಗಳಿರುವ 32 ಬಾಕ್ಸ್​​​ಗಳು, ಥರ್ಮಲ್​ ಸ್ಕಾನರ್​ ಮತ್ತು ಎನ್​-95 ಮಾಸ್ಕ್​​ಗಳ ಎರಡು ಬಾಕ್ಸ್​ಗಳು ಸಿಕ್ಕಿವೆ ಎನ್ನಲಾಗಿದೆ. ನವ್​​ನೀತ್​ ಕಾಲ್ರ ಎಂಬುವರು ರೆಸ್ಟೋರೆಂಟ್​​ನ ಮಾಲೀಕರೆಂದು ತಿಳಿದುಬಂದಿದೆ. ಈ ಕೃತ್ಯದಲ್ಲಿ ತೊಡಗಿದ್ದ ದೆಹಲಿ ನಿವಾಸಿಗಳಾದ ಗೌರವ್ ಸಿಂಗ್, ಸತೀಶ್ ಸೇಠಿ, ವಿಕ್ರಾಂತ್​ ಮತ್ತು ಹಿತೇಶ್ ಎಂಬ ನಾಲ್ಕು ಜನರನ್ನು ದೆಹಲಿ ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದಾಗ ಮಂಡಿ ಗ್ರಾಮದ ಖುಲ್ಲರ್​ ಫಾರ್ಮ್​​ನಲ್ಲಿ ಅವರದೊಂದು ವೇರ್​​ಹೌಸ್​ ಇರುವುದು ತಿಳಿದುಬಂದಿದ್ದು, ಅಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ದುಬಾರಿ ಬೆಲೆಗೆ ಮಾರಾಟ ಮಾಡುವುದಕ್ಕೆ ಶೇಖರಿಸಿಟ್ಟಿದ್ದ ಇನ್ನೂ 387 ಉಪಕರಣಗಳು ಲಭಿಸಿದವು. ಉಪಕರಣಗಳ ಅಸಲಿ ಬೆಲೆಗೆ ಎಷ್ಟೋ ಪಟ್ಟು ಹೆಚ್ಚಾಗಿ, ತಲಾ 70,000 ರೂ.ಗಳಿಗೆ, ಇನ್​​ವಾಯ್ಸ್​​ ಬರೆದು ಮಾರುತ್ತಿದ್ದರು ಎನ್ನಲಾಗಿದೆ.(ಏಜೆನ್ಸೀಸ್)
ಬಾಲಿವುಡ್​ ನಟಿ ಶಿಲ್ಪ ಶೆಟ್ಟಿ ಕುಟುಂಬದ ಆರು ಜನಕ್ಕೆ ಕರೊನಾ

ಕರೊನಾದಿಂದ ಚೇತರಿಸಿಕೊಂಡ ಮೇಲೆ ಟೂತ್​ಬ್ರಶ್​ ಬದಲಿಸಿ : ತಜ್ಞರ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + thirteen =
Remember me
