ಬೆಂಗಳೂರು:ಓಯೊ ಮುಖ್ಯಸ್ಥ ರಿತೇಶ್ ಅಗರ್​ವಾಲ್​ ಮುಂದಿನ ತಿಂಗಳು ಮದುವೆಯಾಗಲು ಸಜ್ಜಾಗಿದ್ದು ಇಂದು (ಫೆ.18) ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಅವರನ್ನು ಆಹ್ವಾನಿಸಿದ್ದಾರೆ.
ರಿತೇಶ್ ಅಗರ್​ವಾಲ್​, ಪ್ರಧಾನಿ ನಿವಾಸಕ್ಕೆ ತಮ್ಮ ತಾಯಿ ಮತ್ತು ಅವರ ಭಾವಿ ಪತ್ನಿಯೊಂದಿಗೆ ತೆರಳಿ ಆಮಂತ್ರಿಸಿದ್ದು ಭೇಟಿಯ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಿತೇಶ್​ ಅಗರ್​ವಾಲ್​ ಹಂಚಿಕೊಂಡಿರುವ ಫೋಟೋಗಳಲ್ಲಿ ಭಾವಿ ದಂಪತಿ ಪ್ರಧಾನಿಯ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಈ ಸಂದರ್ಭ ಅಗರ್ವಾಲ್ ಕೂಡ ಪ್ರಧಾನಿಯವರ ಭುಜಕ್ಕೆ ಶಾಲು ಹೊದಿಸಿದರು.
ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಓಯೊ ಮುಖ್ಯಸ್ಥ “ಪ್ರಧಾನ ಮಂತ್ರಿ ಅವರ ಆಶೀರ್ವಾದದೊಂದಿಗೆ, ನಾವು ಹೊಸ ಜೀವನಕ್ಕೆ ಸಿದ್ಧರಾಗಿದ್ದೇವೆ” ಎಂದು ಅವರು ಬರೆದಿದ್ದಾರೆ. “ಅವರು ನಮ್ಮನ್ನು ಸ್ವೀಕರಿಸಿದ ರೀತಿಯನ್ನು ಪದಗಳು ಬಣ್ಣಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಇನ್ನು ಈ ಪೊಸ್ಟ್​ನ ಕಾಮೆಂಟ್​ ವಿಭಾಗದಲ್ಲಿ ಬಹುತೇಕ ಜನರು ಶುಭವನ್ನು ಹಾರೈಸಿದ್ದಾರೆ. ಇನ್ನೂ ಕೆಲವರು ಪ್ರೇಮಿಗಳನ್ನು ತಮ್ಮ ಹೋಟೇಲುಗಳ ಮೂಲಕ ಒಂದಾಗಿಸಿದ ಓಯೊವನ್ನು ಪ್ರಶಂಸಿದ್ದಾರೆ.


A post shared by Ritesh Agarwal (@riteshagar)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 1 =
Remember me
