ನವದೆಹಲಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ಒಯೊ ಸಂಸ್ಥಾಪಕ ರಿತೇಶ್​ ಅಗರ್ವಾಲ್​ ಅವರಿಗೆ ಪಿತೃ ವಿಯೋಗವಾಗಿದೆ. ಶುಕ್ರವಾರ (ಮಾ.10) ಗುರುಗ್ರಾಮದಲ್ಲಿರುವ ಬಹುಮಹಡಿ ಕಟ್ಟಡದ 20 ಮಹಡಿಯಿಂದ ಕೆಳಗೆ ಬಿದ್ದು ರಮೇಶ್​ ಅಗರ್ವಾಲ್​ ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ಈ ವಾರದ ಆರಂಭದಲ್ಲಿ 29 ವರ್ಷದ ರಿತೇಶ್​ ಅಗರ್ವಾಲ್​ ಅವರು ಫಾರ್ಮೇಶನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಗೀತಾನ್ಶಾ ಸೂದ್​ ಅವರನ್ನು ವರಿಸಿದರು. ಅವರ ಅದ್ಧೂರಿ ರಿಸೆಪ್ಷನ್​ಗೆ ಪೇಟಿಎಂನ ವಿಜಯ್ ಶೇಖರ್ ಶರ್ಮಾ, ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್, ಮಾಜಿ ಭಾರತ್‌ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್, ಭಾರ್ತಿ ಏರ್‌ಟೆಲ್‌ನ ಸುನಿಲ್ ಮಿತ್ತಲ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ರಿತೇಶ್​ ಅವರಿಗೆ ಪಿತೃ ವಿಯೋಗ ಆಗಿದ್ದು, ಇಂತಹ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ರಿತೇಶ್​ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಹೊರರಾಜ್ಯಗಳಿಗೆ ನಂದಿನಿ ಹಾಲಿನ ಪೂರೈಕೆ ಸ್ಥಗಿತಗೊಳಿಸಿ; ಹೋಟೆಲ್​ ಮಾಲೀಕರಿಂದ ಕೆಎಂಎಫ್​ಗೆ ಪತ್ರ
ನಮ್ಮ ಕುಟುಂಬದ ಮಾರ್ಗದರ್ಶಕರಾಗಿದ್ದ ಮತ್ತು ಶಕ್ತಿಯಾಗಿದ್ದ ನಮ್ಮ ತಂದೆ ರಮೇಶ್ ಅಗರ್ವಾಲ್ ಮಾರ್ಚ್ 10 ರಂದು ನಿಧನರಾದರು ಎಂದು ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಮ್ಮ ತಂದೆ ಪೂರ್ಣ ಜೀವನವನ್ನು ನಡೆಸಿದರು ಮತ್ತು ನನಗೆ ಹಾಗೂ ನಮ್ಮಲ್ಲಿ ಅನೇಕರಿಗೆ ಪ್ರತಿದಿನ ಸ್ಫೂರ್ತಿ ತುಂಬಿದರು. ಅವರ ನಿಧನದಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ. ನನ್ನ ತಂದೆಯ ಸಹಾನುಭೂತಿ ಕಷ್ಟದ ಸಮಯದಲ್ಲಿ ನಮ್ಮನ್ನು ಮುನ್ನಡೆಸಿತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
ಈ ಘಟನೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ನಡೆದಿದೆ ಎಂದು ಗುರುಗ್ರಾಮದ ಪೂರ್ವ ಡಿಸಿಪಿ ತಿಳಿಸಿದ್ದಾರೆ. ಬಹುಮಡಿಯ ಕಟ್ಟದ 20 ಮಹಡಿಯಿಂದ ಬಿದ್ದು ರಮೇಶ್​ ಅಗರ್ವಾಲ್​ ಮೃತಪಟ್ಟಿದ್ದಾರೆ. ಸಾವಿನ ಸಮಯದಲ್ಲಿ ಅವರ ಪತ್ನಿ, ಮಗ ರಿತೇಶ್​ ಅಗರ್ವಾಲ್​ ಮತ್ತು ರಿತೇಶ್​ ಪತ್ನಿ ಮನೆಯಲ್ಲಿಯೇ ಇದ್ದರು. ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಈ ಘಟನೆ ಕುರಿತಾಗಿ ಕುಟುಂಬವು ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಹೋಟೆಲ್​ ಕ್ಲೀನ್​ ಮಾಡುತ್ತಿದ್ದವ ಈಗ ಸಾವಿರಾರು ಕೋಟಿಯ ಒಡೆಯ: ಓಯೋ ಸಂಸ್ಥಾಪಕನ ಕಥೆ

ತಮನ್ನಾ ಲೇಡಿ ರೌಡಿ ಗ್ಯಾಂಗ್​! ಹಣಕ್ಕಾಗಿ ನೀಚ ಕೃತ್ಯ, ಈಕೆಯ ಪುಂಡಾಟಿಕೆ ಒಂದೆರಡಲ್ಲ ಎಂದ ಪೊಲೀಸರು

ವಿವಾಹಕ್ಕೂ ಮುನ್ನ ಇಬ್ಬರ ಜತೆ ಪ್ರೀತಿ ; ಮಕ್ಕಳು ಹುಟ್ಟಿದ ನಂತರ ಮದುವೆಯಾದ ಜೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
