ನವದೆಹಲಿ: ಭಾರತದ ಸಮುದ್ರ ಭಾಗದಲ್ಲಿ ಸಾಗರ ಗಸ್ತಿಗೆ ಅನುಕೂಲವಾಗುವಂತಹ P-8A ಪೋಸೈಡನ್​ ಮಾದರಿಯ ನಾಲ್ಕು P-8I ಕಿಲ್ಲರ್ ಏರ್​ಕ್ರಾಫ್ಟ್​ಗಳು ಮುಂದಿನ ವರ್ಷ ಭಾರತಕ್ಕೆ ಬರಲಿವೆ. ಅದರ ಕಾರ್ಯಕ್ಷಮತೆ ನೋಡಿಕೊಂಡು ಮುಂದೆ ಆರು ಅಂತಹ ಏರ್​ಕ್ರಾಫ್ಟ್ ಖರೀದಿಸುವ ಚಿಂತನೆ ನಡೆಸಲಿದೆ ಭಾರತೀಯ ನೌಕಾಪಡೆ.
ಈ ವಿಮಾನದಲ್ಲಿ ಹರ್ಪೂನ್ ಬ್ಲಾಕ್ II ವಾಯುವಿನಲ್ಲೇ ಉಡಾಯಿಸುವ ಕ್ಷಿಪಣಿಗಳು, ಲಘುಭಾರದ ಟಾರ್ಪಿಡೋಗಳು(ನೀರಿನೊಳಗೆ ನುಗ್ಗಬಲ್ಲ ಕ್ಷಿಪಣಿಗಳು) ಕೂಡ ಸೇರಿಕೊಂಡಿವೆ. ಆ್ಯಂಟಿ ಶಿಪ್ ಮಿಸೈಲ್​ಗಳನ್ನೂ ಉಡಾಯಿಸುವ ಸಾಮರ್ಥ್ಯ ಇವಕ್ಕೆ ಇವೆ.
ಇದನ್ನೂ ಓದಿ:ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ
ಹಿಂದು ಮಹಾಸಾಗರದ ಭಾಗದಲ್ಲಿ ಭಾರತದ ಬಲವೃದ್ಧಿಗೆ ಇದು ನೆರವಾಗಲಿದ್ದು, ನಿಗಾ ಮತ್ತು ಇಲೆಕ್ಟ್ರಾನಿಕ್ ಜಾಮಿಂಗ್ ಸಾಮರ್ಥ್ಯವೂ ಹೆಚ್ಚಾಗಲಿದೆ. ಅಮೆರಿಕದಿಂದ ಬರಲಿರುವ P-8I ಏರ್​ಕ್ರಾಫ್ಟ್​ಗಳು ಮಲ್ಟಿ ಮಿಷನ್​ ಕಾರ್ಯಸಾಧಕವಾದವುಗಳಾಗಿದ್ದು, ಬೋಯಿಂಗ್ ಜತೆಗೆ ಇನ್ನೂ ಆರು ವಿಮಾನ ಖರೀದಿ ಬಗ್ಗೆ 2021ರಲ್ಲಿ ಮಾತುಕತೆ ನಡೆಯಲಿದೆ.
ಇದನ್ನೂ ಓದಿ:ವಾರ್ಡ್​ಬಾಯ್​ಗೆ ಕೊಡಲು 30 ರೂ. ಇಲ್ಲದ್ದಕ್ಕೆ ಸ್ಟ್ರೆಚರ್​ ದೂಡಿದ 6ರ ಬಾಲಕ
ಈ ವಿಮಾನದ ರೇಂಜ್ 2,200 ಕಿ.ಮೀ. ಆಗಿದ್ದು, ಗರಿಷ್ಠ ವೇಗ ಗಂಟೆಗೆ 490 ನಾಟ್ಸ್​(789 ಕಿ.ಮೀ). ಚೀನಾ  ಈಗಾಗಲೇ ಭಾರತದ ಸುತ್ತ ಪರ್ಲ್ ಆಫ್ ಸ್ಟಿಂಗ್ ರೀತಿಯಲ್ಲಿ ನೆರೆ ದೇಶಗಳ ಬಂದರುಗಳಲ್ಲಿ ತನ್ನ ನೆಲೆ ಸ್ಥಾಪಿಸಿರುವುದರಿಂದ ಭಾರತಕ್ಕೆ ನೌಕಾಪಡೆ ಬಲವೃದ್ಧಿಸುವುದು ಅತೀ ಅವಶ್ಯವಾಗಿದೆ. (ಏಜೆನ್ಸೀಸ್)
ಮಧ್ಯಪ್ರದೇಶದ ರಾಜ್ಯಪಾಲ ಲಾಲ್ಜಿ ಟಂಡನ್ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + fifteen =
Remember me
