ಥಾಣೆ:50 ಮಂದಿ ಪ್ರಯಾಣಿಕರಿದ್ದ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಇದನ್ನೂ ಓದಿ:VIDEO | ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಧರ್ಮಗುರು..
45 ರಿಂದ 50 ಪ್ರಯಾಣಿಕರನ್ನು ಹೊತ್ತ ಥಾಣೆ ಮುನಿಸಿಪಲ್ ಟ್ರಾನ್ಸ್‌ಪೋರ್ಟ್ (ಟಿಎಂಟಿ) ಬಸ್ ನಾರ್ಪೋಲಿಯಿಂದ ಚೆಂದನಿ ಕೋಳಿವಾಡಕ್ಕೆ ತೆರಳುತ್ತಿದ್ದಾಗ ಇಲ್ಲಿನ ಸೆಂಟ್ರಲ್ ಮೈದಾನದ ಬಳಿ ಬೆಳಿಗ್ಗೆ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಬಸ್ ಚಾಲಕ ಮತ್ತು ಕಂಡಕ್ಟರ್ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
#WATCH| Maharashtra | Fire breaks out in the engine of a Thane Municipal Transport (TMT) bus near Central Ground in Thane. 40-50 passengers were travelling on the bus but they got off the vehicle on time. No injuries reported.
(Video: Thane Municipal Corporation)pic.twitter.com/IECuefbs35
— ANI (@ANI)July 30, 2023
ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ಘಟಕದ ತಂಡವು ಸುದ್ದಿಯನ್ನು ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ 15 ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದೆ. ಬಸ್‌ಗೆ ಭಾಗಶಃ ಹಾನಿಯಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಮೂಲಕ ಅದೃಷ್ಟವಶಾತ್​ ಭಾರಿ ದುರಂತವೊಂದು ತಪ್ಪಿದೆ.(ಏಜೆನ್ಸೀಸ್​)
Sign in to your account
Please enter an answer in digits:19 + four =
Remember me
