ನವದೆಹಲಿ:ಕೇಂದ್ರದಲ್ಲಿನ ಎನ್​ಡಿಎ ಸರ್ಕಾರ ಈ ವರ್ಷವೂ ತೆರೆಮರೆಯ ಸಾಧಕರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಮುಂದುವರಿಸಿದೆ. ಈ ಬಾರಿ 119 ಸಾಧಕರಿಗೆ ಪದ್ಮ ಪುರಸ್ಕಾರದ ಗೌರವ ಸಂದಿದೆ. ಈ ಪೈಕಿ ಬಹುತೇಕರು ಎಲೆಮರೆಯ ಕಾಯಂತಿದ್ದವರು. ಅನೇಕರ ಪರಿಚಯ ಇನ್ನಷ್ಟೇ ದೇಶದ ಜನರಿಗೆ ಆಗಬೇಕಾಗಿದೆ.
ಪದ್ಮ ಪುರಸ್ಕಾರ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದ್ದು, ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಸಾಧಕರನ್ನು ಗೌರವಿಸಲಾಗುತ್ತದೆ. ಈ ವರ್ಷ 119 ಸಾಧಕರನ್ನು ಪದ್ಮಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಇಬ್ಬರು ಒಂದು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. 7 ಸಾಧಕರು ಪದ್ಮವಿಭೂಷಣ, 10 ಸಾಧಕರು ಪದ್ಮ ಭೂಷಣ 102 ಸಾಧಕರು ಪದ್ಮ ಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪದ್ಮ ವಿಭೂಷಣ ಪುರಸ್ಕೃತರು1 ಶಿಂಜೋ ಅಬೆ, ಜಪಾನ್ ಮಾಜಿ ಪ್ರಧಾನಿ (ಸಾರ್ವಜನಿಕ ವ್ಯವಹಾರ)2 ದಿವಂಗತ ಎಸ್.ಪಿ.ಬಾಲಸುಬ್ರಮಣಿಯಂ (ಕಲೆ) ತಮಿಳುನಾಡು3 ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ವೈದ್ಯಕೀಯ) ಕರ್ನಾಟಕ4 ದಿವಂಗತ ನರಿಂದರ್ ಸಿಂಗ್ ಕಪನಿ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಅಮೆರಿಕ5 ಮೌಲಾನಾ ವಹಿದುದ್ದೀನ್ ಖಾನ್ (ಇತರೆ-ಆಧಾತ್ಮಿಕ) ದೆಹಲಿ6 ಬಿ.ಬಿ.ಲಾಲ್ (ಇತರೆ- ಆರ್ಕಿಯಾಲಜಿ) ದಹೆಲಿ7 ಸುದರ್ಶನ ಸಾಹೂ (ಕಲೆ) ಒಡಿಶಾ
ಪದ್ಮ ಭೂಷಣ ಪುರಸ್ಕೃತರು1. ಕೃಷ್ಣನ್ ನಾಯರ್ ಶಾಂತ ಕುಮಾರಿ ಚಿತ್ರ (ಕಲೆ) ಕೇರಳ2 ದಿವಂಗತ ತರುಣ್ ಗೊಗೋಯ್ (ಸಾರ್ವಜನಿಕ ವ್ಯವಹಾರ) ಅಸ್ಸಾಂ ಮಾಜಿ ಸಿಎಂ3 ಚಂದ್ರಶೇಖರ ಕಂಬಾರ (ಸಾಹಿತ್ಯ, ಶಿಕ್ಷಣ) ಕರ್ನಾಟಕ4 ಸುಮಿತ್ರಾ ಮಹಾಜನ್ (ಸಾರ್ವಜನಿಕ ವ್ಯವಹಾರ) ಮಧ್ಯಪ್ರದೇಶ5 ನೃಪೇಂದ್ರ ಮಿಶ್ರಾ (ನಾಗರಿಕ ಸೇವೆ) ಉತ್ತರ ಪ್ರದೇಶ6 ದಿವಂಗತ ರಾಮ ವಿಲಾಸ್ ಪಾಸ್ವಾನ್ (ಸಾರ್ವಜನಿಕ ವ್ಯವಹಾರ) ಬಿಹಾರ7 ದಿವಂಗತ ಕೇಶೂಭಾಯ್ ಪಟೇಲ್ (ಸಾರ್ವಜನಿಕ ವ್ಯವಹಾರ) ಗುಜರಾತ್8 ದಿವಂಗತ ಕಲ್ಬೇ ಸಾದಿಕ್ (ಇತರೆ-ಆಧ್ಯಾತ್ಮ) ಉತ್ತರ ಪ್ರದೇಶ9 ರಜನಿಕಾಂತ್ ದೇವಿದಾಸ್ ಶ್ರಾಫ್ (ವಾಣಿಜ್ಯ,ಕೈಗಾರಿಕೆ) ಮಹಾರಾಷ್ಟ್ರ10 ತಾರಲೋಚನ್ ಸಿಂಗ್ (ಸಾರ್ವಜನಿಕ ವ್ಯವಹಾರ) ಹರಿಯಾಣ
ಪದ್ಮಶ್ರೀ (ಕಲಾ ಕ್ಷೇತ್ರ)1. ಗುಲ್ಪಾಮ್ ಅಹ್ಮದ್ (ಉತ್ತರ ಪ್ರದೇಶ)2 ರಾಮಸ್ವಾಮಿ ಅನ್ನವರಪು (ಆಂಧ್ರಪ್ರದೇಶ)3 ಸುಬ್ಬು ಆಮುಗಮ್ (ತಮಿಳುನಾಡು)4 ಭುರಿ ಬಾಯಿ (ಮಧ್ಯಪ್ರದೇಶ)5 ರಾಧೇ ಶ್ಯಾಮ್ ಬರ್ಲೆ (ಛತ್ತೀಸ್​ಗಢ)6 ಬಿರೇನ್ ಕುಮಾರ್ ಬಸಕ್ (ಪಶ್ಚಿಮ ಬಂಗಾಳ)7 ಪೀಟರ್ ಬ್ರೂಕ್ (ಯುನೈಟೆಡ್ ಕಿಂಗ್​ಡಂ)8 ಗೋಪಿರಾಮ್ ಬರ್ಗ್ಯಾನ್ ಬುರಾಭಕಟ್ (ಅಸ್ಸಾಂ)9 ನಾರಾಯಣ ದೇಬನಾಥ್ (ಪಶ್ಚಿಮ ಬಂಗಾಳ)10 ದುಲಾರಿ ದೇವಿ (ಬಿಹಾರ)11 ರಾಧೇ ದೇವಿ (ಮಣಿಪುರ)12 ವಯಾನ್ ದಿಬಿಯಾ (ಇಂಡೋನೇಷ್ಯಾ)13 ಪರಶುರಾಮ್ ಆತ್ಮಾರಾಮ್ ಗಂಗಾವನೆ (ಮಹಾರಾಷ್ಟ್ರ)14 ಪೂರ್ಣಮಸಿ ಜಾನಿ (ಒಡಿಶಾ)15 ಮಾತಾ ಬಿ.ಮಂಜಮ್ಮ ಜೋಗತಿ (ಕರ್ನಾಟಕ)16 ದಾಮೋದರನ್ ಕೈತಪ್ರಂ (ಕೇರಳ)17 ಮಹೇರ್ಶ ಭಾಯ್, ದಿವಂಗತ ನರೇಶ್ ಭಾಯ್ ಕನೋಡಿಯಾ (ಗುಜರಾತ್)18 ಕೆ.ಕೇಶವ ಸ್ವಾಮಿ (ಪುದುಚೆರಿ)19 ಗುಲಾಂ ರಸೂಲ್ ಖಾನ್ (ಜಮ್ಮು-ಕಾಶ್ಮೀರ)20 ಲಖಾ ಖಾನ್ (ರಾಜಸ್ಥಾನ)21 ಸಂಜಿದಾ ಖಟುನ್ (ಬಾಂಗ್ಲಾದೇಶ)22 ವಿನಾಯಕ ವಿಷ್ಣು ಖೇಡೆಕರ್ (ಗೋವಾ)23 ಲಜ್​ವಂತಿ (ಪಂಜಾಬ್)24 ರಾಮಚಂದ್ರ ಮಾಂಜಿ (ಬಿಹಾರ)25 ದುಲಾಲ್ ಮಾನ್ಕಿ (ಅಸ್ಸಾಂ)26 ರ್ಯೂಬೆನ್ ಮಶಂಗ್ವಾ (ಮಣಿಪುರ)27 ಕೆ.ಕೆ.ರಾಮಚಂದ್ರ ಪುಲವರ್ (ಕೇರಳ)28 ಬಾಂಬೆ ಜಯಶ್ರೀ ರಾಮನಾಥ್ (ತಮಿಳುನಾಡು)29 ಕನಕ ರಾಜು (ತೆಲಂಗಾಣ)30 ಸತ್ಯರಾಮ ರಿಯಾಂಗ್ (ತ್ರಿಪುರಾ)31 ಕರ್ತಾರ್ ಪಾರಸ್ ರಾಮ್ ಸಿಂಗ್ (ಹಿಮಾಚಲ ಪ್ರದೇಶ)32 ಕರ್ತಾರ್ ಸಿಂಗ್ (ಪಂಜಾಬ್)33 ದಿವಂಗತ ಕೆ.ಸಿ.ಶಿವಶಂಕರ್ (ತಮಿಳುನಾಡು)34 ನಿಡುಮೋಳ್ ಸುಮತಿ (ಆಂಧ್ರಪ್ರದೇಶ)
ಪದ್ಮಶ್ರೀ (ಕ್ರೀಡಾ ಕ್ಷೇತ್ರ)1. ಪಿ.ಅನಿತಾ (ತಮಿಳುನಾಡು)2.ಮೌಮಾ ದಾಸ್ (ಪಶ್ಚಿಮ ಬಂಗಾಳ)3 ಅಂಶು ಜಮ್ೇನ್ಪಾ (ಅರುಣಾಚಲ ಪ್ರದೇಶ)4 ಮಾಧವ ನಂಬಿಯಾರ್ (ಕೇರಳ)5 ಸುಧಾ ಹರಿ ನಾರಾಯಣ ಸಿಂಗ್ (ಉತ್ತರ ಪ್ರದೇಶ)6 ವೀರೇಂದ್ರ ಸಿಂಗ್ (ಹರಿಯಾಣ)7 ಕೆ.ವೈ.ವೆಂಕಟೇಶ್ (ಕರ್ನಾಟಕ)
ಪದ್ಮಶ್ರೀ (ಸಾಹಿತ್ಯ-ಶಿಕ್ಷಣ )1 ಪ್ರಕಾಶ್ ರಾವ್ ಅಸವಡಿ (ಆಂಧ್ರ ಪ್ರದೇಶ)2 ಧರ್ಮ ನಾರಾಯಣ ಬರ್ವ(ಪಶ್ಚಿಮ ಬಂಗಾಳ)3 ಸುಜಿತ್ ಛಟ್ಟೋಪಾಧ್ಯಾಯ್ (ಪಶ್ಚಿಮ ಬಂಗಾಳ)4 ಶ್ರೀಕಂಠ ದಾತಾರ್ (ಅಮೆರಿಕ)5 ಚಂದ್ರಕಾಂತ ಮೆಹ್ತಾ (ಗುಜರಾತ್)6 ನಂದಾ ಪ್ರುಷ್ಠಿ (ಒಡಿಶಾ)7 ಬಾಲನ್ ಪುತೇರಿ (ಕೇರಳ)8 ದಿವಂಗತ ಚಮನ್​ಲಾಲ್ ಸಪ್ರು (ಜಮ್ಮು-ಕಾಶ್ಮೀರ)9 ಸೊಲೊಮನ್ ಪಾಪ್ಪಯ್ಯ (ತಮಿಳುನಾಡು) ಪತ್ರಿಕೋದ್ಯಮ10ರೋಮನ್ ಸರ್ವಹ್ (ಅಸ್ಸಾಂ) ಪತ್ರಿಕೋದ್ಯಮ11 ಇಮ್ರಾನ್ ಷಾ (ಅಸ್ಸಾಂ)12 ಅರ್ಜುನ್ ಸಿಂಗ್ ಶೇಖಾವತ್ (ರಾಜಸ್ಥಾನ)13 ರಾಮ್ ಯತ್ನಾ ಶುಕ್ಲಾ (ಉತ್ತರ ಪ್ರದೇಶ)14 ದಿವಂಗತ ಮೃದುಲಾ ಸಿನ್ಹಾ (ಬಿಹಾರ)15 ಕಪಿಲ್ ತಿವಾರಿ (ಮಧ್ಯಪ್ರದೇಶ)16 ದಿವಂಗತ ಫಾದರ್ ವಲ್ಲೇಸ್ (ಸ್ಪೇನ್)17 ಉಷಾ ಯಾದವ್ (ಉತ್ತರ ಪ್ರದೇಶ)18 ದಡುದಾನ್ ಗಢವಿ (ಗುಜರಾತ್)19 ಜೈ ಭಗವಾನ್ ಗೋಯೆಲ್ (ಹರಿಯಾಣ)20 ಜಗದೀಶ್ ಚಂದ್ರ ಹಾಲ್ದೆರ್ (ಪಶ್ಚಿಮ ಬಂಗಾಳ)21 ಮಂಗಳ್ ಸಿಂಗ್ ಹಝೋವಾರಿ (ಅಸ್ಸಾಂ)22 ನಾಮ್ದೇವ್ ಸಿ ಕಾಂಬ್ಳೆ (ಮಹಾರಾಷ್ಟ್ರ)23 ರಜತ್ ಕುಮಾರ್ ಕರ್ (ಒಡಿಶಾ)24 ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ (ಕರ್ನಾಟಕ)25 ನಿಕೋಲಸ್ ಕಝಾನಾಸ್ (ಗ್ರೀಸ್)
ಪದ್ಮಶ್ರೀ (ಸಮಾಜ ಕಾರ್ಯ)1 ಲಕ್ಷ್ಮೀ ಬರುವಾ (ಅಸ್ಸಾಂ)2 ದಿವಂಗತ ಜಗದೀಶ್ ಚೌಧರಿ (ಉತ್ತರ ಪ್ರದೇಶ)3 ಸುಲ್​ತ್ರಿಮ್ ಛೋನ್​ಜೋರ್(ಲಡಾಕ್)4 ಚಟ್ನಿ ದೇವಿ (ಜಾರ್ಖಂಡ್)5 ಶಾಂತಿ ದೇವಿ (ಒಡಿಶಾ)6 ನಿರು ಕುಮಾರ್ (ದೆಹಲಿ)7 ಶ್ಯಾಮ್ ಸುಂದರ್ ಪಲಿವಾಲ್ (ರಾಜಸ್ಥಾನ)8 ಬಿರುಬಾಲಾ ರಭಾ (ಅಸ್ಸಾಂ)9 ಸಿಂಧು ತಾಯಿ ಸಪ್ಕಾಲ್ (ಮಹಾರಾಷ್ಟ್ರ)10 ಜಿತೇಂದ್ರ ಸಿಂಗ್ ಶುಂಠಿ (ದೆಹಲಿ)11 ಗುರು ಮಾ ಕಮಲೀ ಸೊರೇನ್ (ಪಶ್ಚಿಮ ಬಂಗಾಳ)12 ಮಾರಾಚ್ಚಿ ಸುಬ್ಬುರಾಮನ್ (ತಮಿಳುನಾಡು)13 ಸಂಗ್​ಖುಮಿ ಬುಲಾಛುಕ್ (ಮಿಜೋರಾಂ)14 ಗಿರೀರ್ಶ ಪ್ರಭುನೆ (ಮಹಾರಾಷ್ಟ್ರ)
ಪದ್ಮಶ್ರೀ (ವಾಣಿಜ್ಯ ಮತ್ತು ಕೈಗಾರಿಕೆ)1 ರಜನಿ ಬೆಕ್ಟರ್ (ಪಂಜಾಬ್)2 ಜಸ್ವಂತಿಬೆನ್ ಜಮ್ನಾದಾಸ್ ಪೊಪಟ್ (ಮಹಾರಾಷ್ಟ್ರ)3 ದಿವಂಗತ ಪಿ.ಸುಬ್ರಮಣಿಯನ್ (ತಮಿಳುನಾಡು)4 ಶ್ರೀಧರ ವೆಂಬು (ತಮಿಳುನಾಡು)
ಪದ್ಮಶ್ರೀ (ಸಾರ್ವಜನಿಕ ವ್ಯವಹಾರ)1. ಬಿಜೋಯಾ ಚಕ್ರವರ್ತಿ (ಅಸ್ಸಾಂ)2 ಕರ್ನಲ್ ಖ್ವಾಝಿ ಸಾಜ್ಜದ್ ಅಲಿ ಝುಹೀರ್ (ಬಾಂಗ್ಲಾದೇಶ)
ಪದ್ಮಶ್ರೀ (ವಿಜ್ಞಾನ-ಎಂಜಿನಿಯರಿಂಗ್)1 ರತ್ತನ್ ಲಾಲ್ (ಅಮೆರಿಕ)
ಪದ್ಮಶ್ರೀ (ಇತರೆ )1. ಅಲಿ ಮಾಣಿಕ್​ಫಾನ್ (ತಳಮಟ್ಟದ ನವೋನ್ವೇಷಣೆ) ಲಕ್ಷದ್ವೀಪ2 ನಂದರಾವ್ ಬಿ. ಮಾರಕ್ (ಕೃಷಿ) ಮೇಘಾಲಯ3 ಪಾಪ್ಪಮ್ಮಾಳ್ (ಕೃಷಿ) ತಮಿಳುನಾಡು4 ಪ್ರೇಮ್ ಚಾಂದ್ ಶರ್ವ(ಕೃಷಿ) ಉತ್ತರಾಖಂಡ5 ಚಂದ್ರ ಶೇಖರ ಸಿಂಗ್ (ಕೃಷಿ) ಉತ್ತರ ಪ್ರದೇಶ
ಪದ್ಮಶ್ರೀ (ವೈದ್ಯಕೀಯ)1 ಡಾ. ರತ್ತನ್ ಲಾಲ್ ಮಿತ್ತಲ್ (ಪಂಜಾಬ್)2 ಡಾ.ಚಂದ್ರಕಾಂತ್ ಸಂಭಾಜಿ ಪಾಂಡವ್ (ದೆಹಲಿ)3 ದಿವಂಗತ ಡಾ.ಜೆ.ಎನ್.ಪಾಂಡೆ (ದೆಹಲಿ)4. ಡಾ.ಕೃಷ್ಣ ಮೋಹನ ಪಾಠಿ (ಒಡಿಶಾ)5 ಡಾ.ಧನಂಜಯ್ ದಿವಾಕರ್ ಸಗ್ದೇವ್ (ಕೇರಳ)6 ಭೂಪೇಂದ್ರ ಕುಮಾರ್ ಸಿಂಗ್ ಸಂಜಯ್ (ಉತ್ತರಾಖಂಡ)7 ಡಾ.ದಿಲೀಪ್ ಕುಮಾರ್ ಸಿಂಗ್ (ಬಿಹಾರ)8 ದಿವಂಗತ ಡಾ.ತಿರುವೆಂಗಡಮ್ ವೀರರಾಘವನ್ (ತಮಿಳುನಾಡು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
