ಬೆಂಗಳೂರು:ನಗರ ಮೂಲದ ಹಾರ್ಸಸ್ ಸ್ಟೇಬಲ್ ನ್ಯೂಸ್ ಎಂಬ ಸ್ಟಾರ್ಟ್ಅಪ್ ಸಂಸ್ಥೆಯೊಂದು ವಿಭಿನ್ನ ಉಪಕ್ರಮವನ್ನು ಆರಂಭಿಸಿದೆ.ಈ ಸಂಸ್ಥೆಯಲ್ಲಿರುವ ಮುಟ್ಟಾಗುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವ ವಿಭಿನ್ನ ಮತ್ತು ವಿಶಿಷ್ಟ ಉಪಕ್ರಮ ಕೈಗೊಂಡಿದೆ ಎಂದು ಸಂಸ್ಥೆಯ ಅಧಿಕಾರಿ ಬುಧವಾರ ತಿಳಿಸಿದ್ದಾರೆ.ಅಷ್ಟೇ ಅಲ್ಲದೆ ‘ಆ ದಿನಗಳ’ಲ್ಲಿ ತಮ್ಮ ಹೆಂಡತಿಯರನ್ನು ಬೆಂಬಲಿಸಲು ಪುರುಷ ಉದ್ಯೋಗಿಗಳಿಗೂ ಈ ಸೌಲಭ್ಯ ನೀಡಿದೆ.
ಇದನ್ನೂ ಓದಿ:ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​
“ಈ ಉಪಕ್ರಮವು ಮಹಿಳೆಯರಿಗೆ ಎರಡು ದಿನಗಳ ವೇತನ ರಜೆ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಆ ನಿರ್ದಿಷ್ಟ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ 250 ರೂ.ಗಳ ಭತ್ಯೆಯನ್ನು ನೀಡುತ್ತದೆ” ಎಂದು ಸ್ಟಾರ್ಟ್​​​ಅಪ್​​ನ ಅಧಿಕಾರಿ ತಿಳಿಸಿದ್ದಾರೆ.ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷ ಉದ್ಯೋಗಿಗಳಿಗೆ ಈ ಸಮಯದಲ್ಲಿ ಅವರ ಹೆಂಡತಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಒಂದು ದಿನದ ರಜೆ ನೀಡಲಾಗುತ್ತದೆ.
ಇದನ್ನೂ ಓದಿ:ಸುಶಾಂತ್ ಸಿಂಗ್​ ಆತ್ಮಹತ್ಯೆ, 8 ಜನರ ವಿರುದ್ಧ ಕೇಸ್
“ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ತೀವ್ರ ನೋವು ಅನುಭವಿಸುತ್ತಾರೆ ಮತ್ತು ಅವರಿಗೆ ಈ ಅವಧಿ ತುಂಬ ಪ್ರಯಾಸಕರವಾಗಿರುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಮುಟ್ಟಿನ ರಜೆ ನೀತಿಯ ಅನುಷ್ಠಾನ ಸಂಸ್ಥೆಯ ಕೊಡುಗೆ ಎಂದು ಪರಿಗಣಿಸುವಂತಿಲ್ಲ. ಏಕೆಂದರೆ ಅಭಿವೃದ್ಧಿ ವಿಷಯದಲ್ಲಿ ಪುರುಷ ಮತ್ತು ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸುವುದು ಈ ಸಂಸ್ಥೆಯ ಗುರಿ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಸಲೋನಿ ಅಗರ್​ವಾಲ್ ಹೇಳಿದರು. ಇತರ ದೊಡ್ಡ ಸಂಸ್ಥೆಗಳಿಗೆ ಅಂತಹ ಉದ್ಯೋಗಿ ಸ್ನೇಹಿ ನೀತಿಗಳನ್ನು, ಲಿಂಗ ಸಮಾನತೆಗಾಗಿ ಕ್ರಮ ಕೈಗೊಳ್ಳಲು ಪ್ರೇರೇಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಸುಶಾಂತ್​​ಗೆ ನಿರ್ಮಾಪಕ ಅಭಿಷೇಕ್ ದಂಪತಿ ಹೇಗೆ ವಿಶೇಷ ಗೌರವ ಸಲ್ಲಿಸಲಿದ್ದಾರೆ ಗೊತ್ತಾ?
ಈ ಉಪಕ್ರಮದಿಂದ, ಮುಟ್ಟಿನ ನಿಷೇಧವನ್ನು ಮುರಿಯಲು ನಾವು ಆಶಿಸುತ್ತೇವೆ ಎಂದು ಅವರು ಹೇಳಿದರು.  ಈ ಎರಡು ದಿನಗಳ ರಜೆಯನ್ನು ಅನಾರೋಗ್ಯ ರಜೆ ಎಂದು ಸಂಸ್ಥೆ ಪರಿಗಣಿಸುವುದಿಲ್ಲ.  ಆದರೆ ಸಂಸ್ಥೆ ಅಲ್ಲಿ ಕೆಲಸ ಮಾಡುವ ನೌಕರರ ಸಂಖ್ಯೆಯನ್ನು ಬಹಿರಂಗಪಡಿಸಿಲ್ಲ. ಈ ಸ್ಟಾರ್ಟ್​​ ಅಪ್​​ ತಂಡದಲ್ಲಿ ಶೇ 60 ಮಹಿಳೆಯರು ಹಾಗೂ ಶೇ 40 ಪುರುಷರಿದ್ದಾರೆ ಎಂದು ತಿಳಿಸಿದೆ.
LIVE| ದೇಶದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಉದ್ಘಾಟಿಸಿ ಪ್ರಧಾನಿ ಮೋದಿ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
