ಜೈಪುರ:ಬಿಜೆಪಿಯೊಂದಿಗೆ ಸಖ್ಯ ಬಳಸಿ ಸ್ವತ: ಸಚಿನ್​ ಪೈಲಟ್​ ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್​ ನೇರವಾಗಿ ಆರೋಪಿಸಿರುವುದು ಪೈಲಟ್​ ಬಣದ ಶಾಸಕರನ್ನು ಕೆರಳಿಸಿದೆ.
ನಮಗೆ ಖುದ್ದು ಅಶೋಕ್​ ಗೆಹ್ಲೋಟ್​ ಹಣ ನೀಡಿದ್ದರು ಎಂದು ಬಹುಜನ ಸಮಾವಾದಿ ಪಕ್ಷದಿಂದ (ಬಿಎಸ್​ಪಿ) ಕಾಂಗ್ರೆಸ್​ಗೆ ಬಂದಿರುವ ಶಾಸಕರು ಹೇಳಿದ್ದಾರೆ. ಎರಡು ಬಾರಿಯೂ ಬಿಎಸ್​ಪಿ ಶಾಸಕರು ಅಶೋಕ್​ ಗೆಹ್ಲೋಟ್​ಗಾಗಿಯೇ ಕಾಂಗ್ರೆಸ್​ ಸೇರಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ;ಖುದ್ದು ಸಚಿನ್​ ಪೈಲಟ್​ ನಡೆಸಿದ್ದರು ಶಾಸಕರ ಕುದುರೆ ವ್ಯಾಪಾರ; ಬಂಡಾಯಕ್ಕೆ ಕಾರಣವಾಗಿದ್ದು ಅವಮಾನವೇ?
ಬಿಎಸ್​ಪಿಯಿಂದ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಶಾಸಕ ಹಾಗೂ ಮಾಜಿ ಸಚಿವ ರಮೇಶ್​ ಮೀನಾ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.ಅಶೋಕ್​ ಗೆಹ್ಲೋಟ್​ ಮೊದಲ ಅವಧಿಯಲ್ಲಿ ಬಿಎಸ್​ಪಿಯ ನಾಲ್ವರು ಶಾಸಕರನ್ನು ಗೆಹ್ಲೋಟ್​ ಖರೀದಿಸಿದ್ದರು. ಇನ್ನು ಎರಡನೇ ಅವಧಿಯಲ್ಲಿ ಆರು ಬಿಎಸ್​ಪಿ ಶಾಸಕರನ್ನು ಕಾಂಗ್ರೆಸ್​ ಜತೆಗೆ ವಿಲೀನಗೊಳಿಸಿದ್ದರು ಎಂದು ರಮೇಶ್​ ಮೀನಾ ಹೇಳಿದ್ದಾರೆ.
ಇನ್ನೊಬ್ಬ ಬಿಎಸ್​ಪಿ ಶಾಸಕ ಕೂಡ ಇದೇ ಪ್ರಶ್ನೆ ಕೇಳಿದ್ದಾನೆ. ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವುದರಿಂದ ಬೇಸರವಾಗಿದೆ. ಬಿಎಸ್​ಪಿಯಿಮದ ನಾವು ಕಾಂಗ್ರೆಸ್​ಗೆ ಬಂದಾಗ ನಮಗೆಷ್ಟು ಹಣ ಕೊಡಲಾಗಿತ್ತು ಎಂಬುದನ್ನೇ ಗೆಹ್ಲೋಟ್​ ಬಹಿರಂಗ ಪಡಿಸಲಿ ಎಂದು ದೌಸಾ ಶಾಸಕ ಮುರಾರಿಲಾಲ್​ ಮೀನಾ ಸವಾಲು ಹಾಕಿದ್ದಾರೆ.
ಸಚಿನ್​ ಪೈಲಟ್​ ತಲೆದಂಡಕ್ಕೆ ಕಾರಣವಾದ ಮೂರು ಬೇಡಿಕೆಗಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 19 =
Remember me
