ನವದೆಹಲಿ:ಮೈಕೈ ನೋವು ಬಂತೆಂದರೆ ಜನರು ಸ್ವತಃ ತಾವೇ ಪ್ಯಾರಸಿಟಮಾಲ್​ ಅಥವಾ ಐಬುಫ್ರೋಫೆನ್​ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಹಜ. ಆದರೆ, ಇಂಥ ನೋವು ನಿವಾರಕಗಳು ನೋವನ್ನು ನಿವಾರಿಸುವ ಬದಲು ಮತ್ತಷ್ಟು ಹಾನಿ ಮಾಡುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬ್ರಿಟನ್​ನ ದ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಫಾರ್​ ಹೆಲ್ತ್​ ಆ್ಯಂಡ್​ ಕೇರ್​ ಎಕ್ಸೆಲೆನ್ಸ್​ ಈ ವಿಷಯ ತಿಳಿಸಿದ್ದು, ಪ್ಯಾರಸಿಟಮಾಲ್​, ಐಬುಫ್ರೋಫೆನ್​, ಆಸ್ಪಿರಿನ್​ ಮತ್ತು ಓಪಿಯಾಯಿಡ್ಸ್​ ನೋವು ನಿವಾರಿಸುತ್ತವೆ ಎಂಬ ಬಗ್ಗೆ ಯಾವುದೇ ಗುರುತರವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಅದು ನೋವು ನಿವಾರಕಗಳು ವ್ಯಸನ ಸೇರಿ ಇನ್ನೂ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯ ಇರುವುದಾಗಿ ಹೇಳಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ವ್ಯಾಯಾಮವೇ ಸೂಕ್ತ: ತೀವ್ರ ತರದ ನೋವುಗಳು ಇದ್ದಾಗ ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಬದಲು ವ್ಯಾಯಾಮ ಮಾಡುವುದು, ಆಕ್ಯುಪಂಚರ್​ ಚಿಕಿತ್ಸೆ ಪಡೆಯುವುದು ಅಥವಾ ವೈದ್ಯರ ಸಲಹೆ ಮೇರೆಗೆ ಆ್ಯಂಟಿಡಿಪ್ರೆಸೆಂಟ್​ಗಳನ್ನು (ಖಿನ್ನತೆ ನಿವಾರಕಗಳು) ತೆಗೆದುಕೊಳ್ಳುವುದು ಒಳ್ಳೆಯದು ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಿದೆ.
ಯಾವುದೇ ನೋವು ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ನಿರಂತರವಾಗಿ ಬಾಧಿಸುತ್ತಿದ್ದರೆ ಅದನ್ನು ತೀವ್ರ ತರದ ನೋವು ಎಂದು ವೈದ್ಯರು ವರ್ಗೀಕರಿಸುತ್ತಾರೆ. ಭಾವನಾತ್ಮಕ ಒತ್ತಡ ಮತ್ತು ಕೆಲಸ ಮಾಡಲು ಆಗದ ಪರಿಸ್ಥಿತಿ ಹೊಂದಿರುವವರಿಗೆ ಚಿಕಿತ್ಸೆ ನೀಡಲು ಕಷ್ಟಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ಓದಿ:ಸುಶಾಂತ್​ನನ್ನು 3 ತಿಂಗಳು ಇಟ್ಟಿದ್ದೆಲ್ಲಿ ರಿಯಾ? ಆಕೆಯಿಂದಲೇ ಆಪತ್ತು; ನಾಲ್ಕು ತಿಂಗಳ ಮುನ್ನವೇ ಪೊಲೀಸರಿಗಿತ್ತು ಮಾಹಿತಿ
ಅವರ ಪ್ರಕಾರ ಅರ್ಧದಷ್ಟು ಜನರು ತೀವ್ರ ತರದ ನೋವಿನಿಂದ ಬಳಲುತ್ತಿದ್ದರೂ, ಇನ್ನರ್ಧ ಭಾಗದ ಜನರು ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಇವರಲ್ಲಿ 2ನೇ ಮೂರು ಭಾಗದಷ್ಟು ಜನರು ಇದರಿಂದಾಗಿ ಕೆಲಸ ಮಾಡಲು ಸಾಧ್ಯವಾಗದೆ ಪರದಾಡುತ್ತಾರೆ ಎಂದು ಹೇಳಿದ್ದಾರೆ.
ತೀವ್ರ ತರದ ನೋವಿನಿಂದ ಬಳಲುತ್ತಿರುವವರು ಸಾಮೂಹಿಕ ವ್ಯಾಯಾಮ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ ಆಕ್ಯುಪಂಕಚರ್​ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ನೋವು ನಿವಾರಣೆಗೆ ವ್ಯಾಯಾಮಗಳು ಸೂಕ್ತ ಎಂಬುದು 23 ಅಧ್ಯಯನಗಳಿಂದ ತಿಳಿದುಬಂದಿದೆ. ಎಲ್ಲಕ್ಕಿಂತ ಮಿಗಿಲಾಗಿ 22 ಅಧ್ಯಯನಗಳಲ್ಲಿ ವ್ಯಾಯಾಮ ಮಾಡುವುದರಿಂದ, ಜೀವನದ ಗುಣಮಟ್ಟ ಉತ್ತಮಗೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.ತೀವ್ರ ತರದ ನೋವು ಬಾಧಿಸುತ್ತಿರುವಾಗ ಎದ್ದುನಿಂತು ವ್ಯಾಯಾಮ ಮಾಡುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ, ನೋವಿನ ಚಿಕಿತ್ಸೆಗೆ ಕಾಗ್ನೈಟಿವ್​ ಬಿಹೇವಿಯರಲ್​ ಥೆರಪಿ (ಸಿಬಿಟಿ) ಕೊಡುವುದು ಒಳಿತು. ಇದು ಅಪಾಯಕಾರಿಯಲ್ಲ. ಬದಲಿಗೆ ಇದರಿಂದ ಜೀವನದ ಗುಣಮಟ್ಟ ಹೆಚ್ಚಾಗುತ್ತದೆ ಎಂಬುದು ಈಗಾಗಲೆ ಸಾಬೀತಾಗಿದೆ ಎಂದು ಹೇಳಿದ್ದಾರೆ.
‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
