ಇಸ್ಲಮಾಬಾದ್​:ಮದುವೆಯಲ್ಲಿ ಭಾರತೀಯ ಉಡುಗೆ ಧರಿಸಿದ್ದಕ್ಕೆ ಪಾಕಿಸ್ತಾನದ ನಟಿಯೊಬ್ಬಳು ತೀವ್ರ ಟೀಕೆಗೆ ಗುರಿಯಾಗಿದ್ದಾಳೆ.
ನಟಿ ಉಷ್ನಾ ಶಾ ಅವರು ತನ್ನ ಮದುವೆಯಲ್ಲಿ ಭಾರತೀಯ ಉಡುಗೆ ಧರಿಸಿದ್ದನ್ನು ವಿರೋಧಿಸಿ ಪಾಕ್​ನಲ್ಲಿ ಹಲವಾರು ಜನರು ಆಕೆಯನ್ನು ನಿಂದಿಸಿರುವುದಲ್ಲದೆ, ಅಪಹಾಸ್ಯ ಮಾಡಿದ್ದಾರೆ. ಉಷ್ನಾ ಅವರು ಗಾಲ್ಫ್ ಆಟಗಾರ ಹಮ್ಜಾ ಅಮೀನ್ ಅವರನ್ನು ವಿವಾಹವಾದರು. ಈ ಜೋಡಿಯ ವಿವಾಹದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ವಿವಾದ ಭುಗಿಲೆದ್ದಿತು.
ಇದನ್ನೂ ಓದಿ:ಹೈರಾಣಾಗಿಸುವ ನೆಗೆಟಿವ್ ಬಾಡಿ ಇಮೇಜ್: ಆಕಾರ-ವಿಕಾರಗಳಿಗೆ ಅಂಟಿಕೊಳ್ಳದೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳೋಣ
A post shared by Ushna Shah (@ushnashah)

ಉಷ್ನಾ ಅವರು ಸಾಂಪ್ರದಾಯಿಕ ಭಾರತೀಯ ಉಡುಪುಗಳು ಮತ್ತು ಆಭರಣಗಳನ್ನು ಧರಿಸಿದ್ದಾರೆ ಎಂದು ಅನೇಕ ಮಂದಿ ಉಷ್ನಾ ಪೋಸ್ಟ್​ ಮಾಡಿರುವ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ, ಹಲವಾರು ಪಾಕಿಸ್ತಾನಿ ಹುಡುಗಿಯರು ತಮ್ಮ ಮದುವೆಗೆ ಇದೇ ರೀತಿಯ ಭಾರತೀಯ ಉಡುಗೆಗಳನ್ನು ಧರಿಸುತ್ತಿದ್ದಾರೆ. ಈ ಪ್ರವೃತ್ತಿ ಸರಿಯಲ್ಲ ಮತ್ತು ಪಾಕಿಸ್ತಾನದಲ್ಲಿರುವ ಜನರು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಬಾರದು ಎಂದು ಅವರು ಪಾಕಿಸ್ತಾನದ ನೆಟ್ಟಿಗರು ವಾದಿಸಿದರು.
ಇದನ್ನೂ ಓದಿ:ಮುಳ್ಳುಹಂದಿಯ ಆಸೆಗೆ ಪ್ರಾಣವನ್ನೇ ಕಳೆದುಕೊಂಡ್ರು; ಗುಹೆಯೊಳಗೆ ಉಸಿರುಗಟ್ಟಿ ಇಬ್ಬರ ಸಾವು
A post shared by Ushna Shah (@ushnashah)

ತನ್ನ ಮದುವೆಯ ಉಡುಗೆಯ ಬಗ್ಗೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಎಲ್ಲ ಟೀಕೆಗಳಿಗೆ ಉಷ್ನಾ ಸ್ವತಃ ಉತ್ತರವನ್ನು ನೀಡಿದ್ದಾರೆ. ತನ್ನ ಮದುವೆಯ ಉಡುಗೆ, ಉಂಗುರ ಮತ್ತು ಮೆಹಂದಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬೇಸಿಗೆಗೆ ಬೆಸ್ಟ್ ಫೇಸ್ ಮಿಸ್ಟ್: ತ್ವಚೆಗೆ ಏನೆಲ್ಲ ಲಾಭಗಳಿವೆ? ಯಾವ ಸಮಯದಲ್ಲಿ ಬಳಸಬೇಕು?
ನನ್ನ ಡ್ರೆಸ್‌ ಬಗ್ಗೆ ಅಸಮಾಧಾನ ಹೊಂದಿರುವವರಿಗೆ ನಾನು ಹೇಳುವುದೇನೆಂದರೆ, ನಾನು ನಿಮ್ಮನ್ನು ಮದುವೆಗೆ ಆಹ್ವಾನಿಸಿಲ್ಲ ಅಥವಾ ನನ್ನ ಉಡುಗೆಗೆ ನೀವೇನು ಹಣ ಪಾವತಿಸಿಲ್ಲ. ನನ್ನ ಆಭರಣ, ನನ್ನ ಜೋರಾ ಎಲ್ಲವೂ ಸಂಪೂರ್ಣ ಪಾಕಿಸ್ತಾನಿ ಸಂಪ್ರದಾಯದ್ದಾಗಿದೆ. ನನ್ನ ಹೃದಯವೂ ಕೂಡ. ಆದರೆ, ನಾನು ಅರ್ಧ ಆಸ್ಟ್ರಿಯನ್ ಎಂದು ಉಷ್ನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
Ushna Shah Respond to trolls on her wedding day Which sad thing happens on her Blessed day, Everyone has own rights to wear whatever they want💔#ushnashah#wedding#LollywoodFilmIndustrypic.twitter.com/IQKckH7lpA
— Mohsin Mirza (@mohsinali7781)February 26, 2023

ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

ಕೆಸಿಸಿಗೆ ಸುರೇಶ್​ ರೈನಾ ಫಿದಾ: ಟ್ರೋಫಿ ಗೆಲುವಿನ ಬಳಿಕ ಕಿಚ್ಚನಿಗೆ ಧನ್ಯವಾದ ತಿಳಿಸಿದ ರೈನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 7 =
Remember me
