ಮುಂಬೈ:ಕೇಂದ್ರ ಗೃಹ ಸಚಿವ ಅಮಿತ್​ ಷಾರ ಭೇಟಿಯ ಸಮಯದಲ್ಲೇ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಟಿ20 ವರ್ಲ್ಡ್​ ಕಪ್​ ಕ್ರಿಕೆಟ್​ ವಿಜಯವನ್ನು ಆಚರಿಸಲಾಗಿದೆ. ಭಾರತ ವಿರೋಧಿ ಘೋಷಣೆಗಳನ್ನು ಹಾಕಲಾಗಿದೆ ಎಂದು ಮಹಾರಾಷ್ಟ್ರದ ಶಿವ ಸೇನಾ ಸಂಸದ ಸಂಜಯ್​ ರಾವತ್ ಹೇಳಿದ್ದಾರೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
‘ವಿರಾಟ್​ ಕೊಹ್ಲಿಯ ಭಾರತ ತಂಡದ ವಿರುದ್ಧ ಪಾಕ್​ ತಂಡ ಗೆದ್ದುದಕ್ಕೆ ಸಂಭ್ರಮಾಚರಣೆ’ ಎಂದು ಯುವಕರು ಪಟಾಕಿಗಳನ್ನು ಸಿಡಿಸುತ್ತಿರುವ ವಿಡಿಯೋ ಒಂದನ್ನು ಟ್ವೀಟ್​ ಮಾಡಿರುವ ರಾವತ್​, “ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾಶ್ಮೀರದಲ್ಲೇ ಇರುವ ಸಮಯದಲ್ಲಿ ಟಿ20ಯಲ್ಲಿ ಪಾಕಿಸ್ತಾನಿ ತಂಡದ ಗೆಲುವು ಹಾಗೂ ಭಾರತದ ಸೋಲಿನ ಈ ರೀತಿಯಾದ ಸಂಭ್ರಮಾಚರಣೆ ಮಾಡಿದರೆ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರೆ, ಅದು ಖಂಡಿತವಾಗಿಯೂ ಚಿಂತೆಯ ವಿಷಯವಾಗಿದೆ. ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಬರೆದಿದ್ದಾರೆ. ಅವರ ಈ ಟ್ವೀಟ್​ನ ಕೊನೆಯಲ್ಲಿ ಜೈ ಹಿಂದ್​! ವಂದೇ ಮಾತರಂ! ಎಂದು ರಾಷ್ಟ್ರಭಕ್ತಿಯ ಘೋಷವಾಕ್ಯಗಳನ್ನೂ ನಮೂದಿಸಿದ್ದಾರೆ.(ಏಜೆನ್ಸೀಸ್)
ಶಾಲೆ ಆರಂಭದ ಮೊದಲ ದಿನವೇ ಅವಘಡ: ತರಗತಿಯಲ್ಲಿ ವಿದ್ಯಾರ್ಥಿಯನ್ನು ಕಚ್ಚಿದ ಹಾವು!

ಮುಂಬೈ ಡ್ರಗ್ಸ್​ ಕೇಸ್​: ‘ನನ್ನನ್ನು ಟಾರ್ಗೆಟ್​ ಮಾಡ್ತಿದಾರೆ, ಬೆದರಿಕೆ ಹಾಕ್ತಿದಾರೆ’ ಎಂದ ಎನ್​ಸಿಬಿ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
