ನವದೆಹಲಿ:ಪಾಕಿಸ್ತಾನ ಭಯೋತ್ಪಾದಕರ ಜಾಗತಿಕ ರಾಜಧಾನಿಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್​. ತಿರುಮೂರ್ತಿ ಆಯೋಪಿಸಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿ ನೇಮಕಗೊಂಡಿರುವ ತಿರುಮೂರ್ತಿ ಅವರು ಸೈಯದ್​ ಅಕ್ಬರುದ್ದೀನ್​ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರ ಜಾಗತಿಕ ರಾಜಧಾನಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಜಾಗತಿಕವಾಗಿ ಭಯೋತ್ಪಾದಕರು ಎಂದು ಘೋಷಿಸಿರುವ ಉಗ್ರರು, ಜಾಗತಿಕವಾಗಿ ಭಯೋತ್ಪಾದನಾ ಸಂಸ್ಥೆಗಳು ಎಂದು ಘೋಷಿಸಲಾಗಿರುವ ಜಮಾತ್​ ಉದ್​ ದವಾ, ಲಷ್ಕರ್​ ಎ ತೊಯ್ಬಾ, ಜೈಷ್​ ಎ ಮೊಹಮ್ಮದ್​ ಮತ್ತು ಹಿಜ್ಬುಲ್​ ಮುಜಾಹಿದ್ದೀನ್​ ಸೇರಿ ಅನೇಕ ಭಯೋತ್ಪಾದನಾ ಸಂಸ್ಥೆಗಳ ಪಾಕಿಸ್ತಾನವನ್ನು ಸುರಕ್ಷಿತ ಅಡಗುತಾಣವನ್ನಾಗಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಸ್ವತಃ ತಮ್ಮ ರಾಷ್ಟ್ರದಲ್ಲಿ 40 ಸಾವಿರ ಉಗ್ರರು ಇರುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಅಲ್​ಖೈದಾ ಮತ್ತು ಐಸಿಸ್​ ಸೇರಿ ಜಾಗತಿಕ ಭಯೋತ್ಪಾದನಾ ಸಂಸ್ಥೆಗಳಿಗೆ ಪಾಕಿಸ್ತಾನದಿಂದ ಧನಸಹಾಯ ಹೋಗುತ್ತದೆ ಎಂಬ ಸಂಗತಿಯನ್ನು ವಿಶ್ವಸಂಸ್ಥೆಯ ಅನಲಿಟಿಕಲ್​ ಸಪೋರ್ಟ್​ ಆ್ಯಂಡ್​ ಸ್ಯಾಂಕ್ಷನ್ಸ್​ ಮಾನಿಟರಿಂಗ್​ ಟೀಮ್​ನ 26ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:ಟಿಕ್‌ಟಾಕ್‌ ಮಾರಾಟಕ್ಕೆ ಗಡುವು- ಇಲ್ಲದಿದ್ದರೆ ಬ್ಯಾನ್‌: ಟ್ರಂಪ್‌ ಖಡಕ್ ವಾರ್ನಿಂಗ್‌
1267 ಸಮಿತಿಯ ವ್ಯಾಪ್ತಿಯಲ್ಲಿ ಐಸಿಸ್​ ಮತ್ತು ಅಲ್​ಖೈದಾ ಸಂಘಟನೆಗಳ ಬಗ್ಗೆ ಕಾಲಕಾಲಕ್ಕೆ ವರದಿಗಳನ್ನು ಸಲ್ಲಿಸಲಾಗುತ್ತದೆ. ಇಂಥ ಸಂಘಟನೆಗಳಿಗೆ ಆಶ್ರಯ ನೀಡಿ, ಪೋಷಿಸುವ ವಿಷಯದಲ್ಲಿ ಪಾಕಿಸ್ತಾನದ ನೇರ ಪಾಲ್ಗೊಳ್ಳುವಿಕೆ ಕುರಿತು ಈ ವರದಿಗಳಲ್ಲಿ ಪ್ರಸ್ತಾಪವಾಗುತ್ತಲೇ ಇವೆ ಎಂದು ತಿಳಿಸಿದ್ದಾರೆ.ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿವಾದಗಳನ್ನು ಜಾಗತಿಕರಣಗೊಳಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಿರುಮೂರ್ತಿ ಟೀಕಿಸಿದ್ದಾರೆ. ಪಾಕಿಸ್ತಾನದ ಈ ರೀತಿಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿವಾದವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುವ ಪಾಕ್​ನ ಪ್ರಯತ್ನಗಳು ಹೊಸದೇನಲ್ಲ. ಆದರೆ, ಪಾಕ್​ನ ವಿದೇಶಾಗ ಸಚಿವರು ಇತ್ತೀಚೆಗೆ ಈ ವಿಷಯವಾಗಿ ತೆಳೆದಿರುವ ವಿಷಯಕ್ಕೆ ವಿರುದ್ಧವಾಗಿ, 1965ರ ನಂತರದಲ್ಲಿ ಭಾರತ ಮತ್ತು ಪಾಕ್ ವಿವಾದಗಳ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಅಧಿಕೃತ ಮಾನ್ಯತೆ ಹೊಂದಿಲ್ಲದ ಅಪೌಚಾರಿಕ ಸಭೆಯಲ್ಲಿ ಇತ್ತಿಚೆಗೆ ಪಾಕಿಸ್ತಾನ ಹಲವು ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿತ್ತು. ಆದರೆ, ಅದರ ಪ್ರಯತ್ನಗಳು ವಿಫಲವಾದವು. ಕಳೆದ ಆಗಸ್ಟ್​ನಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅವರು ನೀಡಿರುವ ಹೇಳಿಕೆಯಲ್ಲಿ 1972ರ ಶಿಮ್ಲಾ ದ್ವಿಪಕ್ಷೀಯ ಒಪ್ಪಂದವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದ್ವಿಪಕ್ಷೀಯ ವಿವಾದಗಳನ್ನು ಪ್ರಸ್ತಾಪಿಸುವ ಪಾಕಿಸ್ತಾನದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಈ ವಿಷಯವಾಗಿ ಅದು ಏನೇ ಒತ್ತಡ ಹೇರಿದರೂ ಅದನ್ನು ವಿಶ್ವಸಂಸ್ಥೆ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ವಿದೇಶಿಗರಿದ್ದ 35 ಮನೆಗಳ ಮೇಲೆ ರಾತ್ರೋರಾತ್ರಿ ಸಿಸಿಬಿ ರೇಡ್​… ಬೆಚ್ಚಿ ಬೀಳಿಸುತ್ತೆ ಅಲ್ಲಿನ ಅಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
