ಹೈದರಾಬಾದ್​​:2022ರಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿ ತನ್ನ ಪತ್ನಿಯೊಂದಿಗೆ ನಗರದಲ್ಲಿ ವಾಸಿಸುತ್ತಿದ್ದ 24 ವರ್ಷದ ಪಾಕಿಸ್ತಾನಿ ಪ್ರಜೆಯನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪಾಕಿಸ್ತಾನದಿಂದ ಬಂದಿದ್ದ ಫಯಾಜ್ ಮೊಹಮ್ಮದ್​​, ಹೈದರಾಬಾದ್ ನಗರದ ಹಳೆಪೇಟೆಯ ನೇಹಾ ಫಾತಿಮಾ ಎಂಬ ಯುವತಿಯನ್ನು ಮದುವೆಯಾಗಿ ಅತ್ತೆಯ ಮನೆಯಲ್ಲಿ ಅಳಿಯನಾಗಿ ನೆಲೆಸಿದ್ದನು. ಫಯಾಜ್ ವೀಸಾ ಇಲ್ಲದೆ ನೇಪಾಳದ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದನು ಮತ್ತು ಹೈದರಾಬಾದ್‌ನಲ್ಲಿ ತನ್ನ ಪತ್ನಿಯ ನಿವಾಸದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ.
ನಡೆದಿದ್ದೇನು?:ಫಯಾಜ್ ಮೊಹಮ್ಮದ್​​ 2018ರಲ್ಲಿ, ಉದ್ಯೋಗಕ್ಕಾಗಿ ಶಾರ್ಜಾಕ್ಕೆ ಹೋಗಿದ್ದನು. ಅಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಸಿಕ್ಕಿತು. ಅಲ್ಲದೇ ಹೈದರಾಬಾದ್ ಬಹದ್ದೂರ್ ಪುರದ ನೇಹಾ ಫಾತಿಮಾ ಎಂಬ ಯುವತಿ ಕೂಡ ಉದ್ಯೋಗಕ್ಕಾಗಿ ಶಾರ್ಜಾಕ್ಕೆ ಹೋಗಿದ್ದಳು. ಅಲ್ಲಿ ಫಯಾಜ್ ಅವರನ್ನು ಭೇಟಿಯಾದರು. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ 2019 ರಲ್ಲಿ ಶಾರ್ಜಾದಲ್ಲಿ ವಿವಾಹವಾದರು. ಅವರಿಗೂ ಒಂದು ಮಗು ಜನಿಸಿತು. ಇದಾದ ನಂತರ ಫಯಾಜ್ ಪಾಕಿಸ್ತಾನಕ್ಕೆ ಹೋದ. ನೇಹಾ ಫಾತಿಮಾ ಹೈದರಾಬಾದ್‌ನಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದಳು. ಫಾತಿಮಾಳ ಪೋಷಕರು ಪಾಕಿಸ್ತಾನದಲ್ಲಿ ನೆಲೆಸಿರುವ ಅಳಿಯ ಫಯಾಜ್ ಜತೆ ಮಾತನಾಡಿ ಭಾರತಕ್ಕೆ ಬರಲು ಹೇಳಿದರು. ಹೀಗಾಗಿ ಪತ್ನಿಯನ್ನು ಭೇಟಿಯಾಗಲು ಹೈದರಾಬಾದ್​ಗೆ ಬಂದಿದ್ದಾನೆ. ಫಯಾಜ್ ಒಂಬತ್ತು ತಿಂಗಳಿನಿಂದ ಹೈದರಾಬಾದ್‌ನಲ್ಲಿ ನೆಲೆಸಿದ್ದಾನೆ.
ಇದನ್ನೂ ಓದಿ:ಚಪಾತಿ ಬೇಯಿಸುವಾಗ ಮೂಡಿದ ಜಗನ್ನಾಥ! ಅಚ್ಚರಿಗೊಂಡ ಕುಟುಂಬ, ದೇವರ ಕೋಣೆಯಲ್ಲಿಟ್ಟು ನಿತ್ಯ ಪೂಜೆ
ಫಯಾಜ್‌ನನ್ನು ಇಲ್ಲಿ ಸ್ಥಳೀಯ ನಿವಾಸಿ ಎಂದು ತೋರಿಸಲು ಮಾಸ್ಟರ್​​ ಪ್ಲ್ಯಾನ್​ ಮಾಡಿದ್ದಾರೆ. ನಾಗಮ್‌ನಲ್ಲಿರುವ ಆಧಾರ್ ಕೇಂದ್ರಕ್ಕೆ ಕರೆದೊಯ್ದು, ಫಯಾಜ್ ತಮ್ಮ ಮಗ ಎಂದು ಹೇಳಿಕೊಂಡು ಆಧಾರ್ ಕಾರ್ಡ್ ಪಡೆಯಲು ಪತ್ನಿ ಮನೆಯವರು ಪ್ರಯತ್ನಿಸಿದರು. ಇದಕ್ಕಾಗಿ ನಕಲಿ ಕಾಗದ ಪತ್ರಗಳನ್ನು ನೀಡಲಾಗಿತ್ತು. ಆದರೆ ಫಯಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದು, ಅವಧಿ ಮುಗಿದಿರುವುದು ಕಂಡುಬಂದಿದೆ. ಫಯಾಜ್​​ನನ್ನು ಪೊಲೀಸರು ವಶಕ್ಕೆ ಪಡೆದ ನಂತರ ಫಾತಿಮಾಳ ಪೋಷಕರಾದ ಜುಬೇರ್ ಮತ್ತು ಅಫ್ಜಲ್ ಬೇಗಂ ಪರಾರಿಯಾಗಿದ್ದಾರೆ. ಫಯಾಜ್ ಭಾರತದಲ್ಲಿ ಅಕ್ರಮವಾಗಿ ಉಳಿದುಕೊಂಡಿರುವುದರ ಹಿಂದೆ ಏನಾದರೂ ಷಡ್ಯಂತ್ರವಿದೆಯೇ? ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ಪೊಲೀಸ್​​ ಅಧಿಕಾರಿಯೊಬ್ಬರು ಮಾತನಾಡಿ, ಹೈದರಾಬಾದ್‌ಗೆ ಬಂದಿದ್ದ ವ್ಯಕ್ತಿಯನ್ನು ಬಂಧಿಸಿ ಆತನ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದೆ. ಆತನ ಅತ್ತೆಯಂದಿರಾದ ಶೇಖ್ ಜುಬೇರ್ ಮತ್ತು ಅಫ್ಜಲ್ ಬೇಗಂ ವಿರುದ್ಧವೂ ಪ್ರಕರಣ ದಾಖಲಾಗಿದೆ. ಫಯಾಜ್ ನನ್ನು ಪೊಲೀಸರು ವಶಕ್ಕೆ ಪಡೆದ ವಿಷಯ ತಿಳಿದ ತಕ್ಷಣ ಶೇಖ್ ಜುಬೇರ್ ಮತ್ತು ಅಫ್ಜಲ್ ಬೇಗಂ ಓಡಿ ಹೋಗಿದ್ದಾರೆ. ಫೈಜ್ ವಿರುದ್ಧ ಐಪಿಸಿ ಮತ್ತು ವಿದೇಶಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾದ ವ್ಯಕ್ತಿಯ ಅತ್ತೆಯಂದಿರು ತಲೆಮರೆಸಿಕೊಂಡಿದ್ದಾರೆ.
VIDEO | ಇನ್ಮುಂದೆ ನನ್ನ ಫಾತಿಮಾ ಅಂತಾ ಕರೆಯಿರಿ ಎಂದ ಬಾಲಿವುಡ್​​ ನಟಿ ರಾಖಿ ಸಾವಂತ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
