ನವದೆಹಲಿ:ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್​ ಭುಟ್ಟೋ ಜರ್ದಾರಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿಯ ವಕ್ತಾರರು ತಿಳಿಸಿದ್ಧಾರೆ.
ಮೇ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ಶಾಂಘೈ ಶೃಂಗ ಸಭೆ(SCO)ಯಲ್ಲಿ ಭಾಗವಹಿಸಲು ಭುಟ್ಟೋ ಭಾರತಕ್ಕೆ ಭೇಟಿ ನೀಡಲಿದ್ಧಾರೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನ ವಿದೇಶಾಂಗ ಸಚಿವರಾದ ಬಿಲಾವಲ್​ ಭುಟ್ಟೋ ಜರ್ದಾರಿ ಭಾರತದ ಗೋವಾದಲ್ಲಿ ನಡೆಯಲಿರುವ ಶಾಂಘೈ ಶೃಂಗ ಸಭೆಯಲ್ಲಿ ಮೇ 4-5ರಂದು ಭಾಗಿಯಾಗಲಿದ್ದಾರೆ.
FM@BBhuttoZardariwill lead 🇵🇰delegation to SCO-CFM meeting being held on 4-5 May 2023 in Goa,India. FM’s participation in Meeting reflects 🇵🇰’s continued commitment to SCO Charter & processes & the importance that Pakistan accords to the region in its foreign policy priorities.
ಇದನ್ನೂ ಓದಿ:ಮುಂದಿನ 15 ದಿನದೊಳಗೆ ಮಹತ್ವದ ರಾಜಕೀಯ ಬೆಳವಣಿಗೆ: ಸುಪ್ರಿಯ ಸುಲೆ
ಸಭೆಯಲ್ಲಿ ನಮ್ಮ ದೇಶದ ಪ್ರತಿನಿಧಿ ಭಾಗಿಯಾಗುವುದರಿಂದ SCO ಬಗ್ಗೆ ಪಾಕಿಸ್ತಾನಕ್ಕೆ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮುಮ್ತಾಜ್ ಜಹ್ರಾ​ ಬಲೋಚ್​ ತಿಳಿಸಿದ್ದಾರೆ.
2014ರಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿಯಾಗಿದ್ದ ನವಾಜ್​ ಷರೀಫ್​ ಭೇಟಿ ಬಳಿಕ ಯಾವ ನಾಯಕರು ಭಾರತಕ್ಕೆ ಭೇಟಿ ನೀಡಿರಲಿಲ್ಲ.
2016ರಲ್ಲಿ ಪಠಾಣ್​​​ಕೋಟ್​ ಸೇನಾ ನೆಲೆ ಮೇಲೆ ದಾಳಿ, 2019ರಲ್ಲಿ ಪುಲ್ವಾಮಾ ದಾಳಿ ಹಾಗೂ ಆಗಸ್ಟ್​ ತಿಂಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 3 =
Remember me
