ನವದೆಹಲಿ:ಪಾಕಿಸ್ತಾನದಿಂದ ಬರುವ ಕಲುಷಿತ ಗಾಳಿಯು ದೆಹಲಿಯ ವಾಯು ಗುಣಮಟ್ಟವನ್ನು ಕೆಡಿಸುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ದೆಹಲಿ ವಾಯು ಮಾಲಿನ್ಯದ ಬಗೆಗಿನ ವಿಚಾರಣೆಯ ವೇಳೆ ಈ ಮಾತು ಹೇಳಿದ ಸರ್ಕಾರಿ ವಕೀಲರು, ತಮ್ಮ ರಾಜ್ಯದ ಕಾರ್ಖಾನೆಗಳು ರಾಷ್ಟ್ರ ರಾಜಧಾನಿಯ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿಲ್ಲ ಎಂದು ವಾದಿಸಿದರು.
ಯುಪಿ ಸರ್ಕಾರದ ವಕೀಲರಾದ ರಣಜಿತ್​ ಕುಮಾರ್​, ರಾಜ್ಯದ ಕಾರ್ಖಾನೆಗಳ ಹೊಗೆಯು ಡೌನ್​ವಿಂಡ್​ ಆಗಿ ಕೆಳಕ್ಕೆ ಸಂಚರಿಸುತ್ತವೆ. ದೆಹಲಿಯ ಕಡೆಗೆ ಹೋಗುವುದಿಲ್ಲ ಎಂದು ವಾದಿಸಿದರು. ದೆಹಲಿ ಎನ್​ಸಿಆರ್​ ಮತ್ತು ಸುತ್ತಮುತ್ತಲ ಪ್ರದೇಶಗಳ ಕೈಗಾರಿಕೆಗಳ ಮೇಲೆ ಎಂಟು ಗಂಟೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ನಿರ್ಬಂಧ ವಿಧಿಸಿ ಯುಪಿಯ ಸಕ್ಕರೆ ಮತ್ತು ಹಾಲಿನ ಕಾರ್ಖಾನೆಗಳಿಗೆ ತೊಂದರೆ ಉಂಟಾಗುತ್ತದೆ ಎಂದ ಅವರು, ಪಾಕಿಸ್ತಾನದ ಕಡೆಯಿಂದ ಬರುತ್ತಿರುವ ಕಲುಷಿತ ಗಾಳಿ ದೆಹಲಿಯ ಹವಾ ಹಾಳಾಗಲು ಕಾರಣವಾಗಿದೆ ಎಂದರು.
ಈ ವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, “ಹಾಗಿದ್ದರೆ, ನಾವು ಪಾಕಿಸ್ತಾನದ ಕಾರ್ಖಾನೆಗಳನ್ನು ನಿಷೇಧಿಸಬೇಕು ಎಂದು ಕೇಳುತ್ತಿದ್ದೀರಾ?” ಎಂದು ಕೇಳಿದರು.(ಏಜೆನ್ಸೀಸ್)
ವಿಕಿ-ಕತ್ರೀನಾ ಮದುವೆಗಾಗಿ ಸಿದ್ಧತಾ ಸಭೆ; ವೈರಲ್​ ಆಗಿದೆ ಜಿಲ್ಲಾಧಿಕಾರಿಯ ನೋಟೀಸ್​​

VIDEO| ಚಲಿಸುವ ರೈಲಿನಿಂದ ಜಿಗಿದು ಸಾವಿನ ಕದ ತಟ್ಟಿಬಂದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
