ಪೇಶಾವರ (ಪಾಕಿಸ್ತಾನ):ಕರೊನಾ ವೈರಸ್‌ನ ಈ ಬಿಕ್ಕಟ್ಟಿನ ಸಮಯದಲ್ಲಿ ಟಿ.ವಿ.ಪತ್ರಕರ್ತರದ್ದು ಕೂಡ ಒಂದು ರೀತಿಯಲ್ಲಿ ಭಯದ ಸ್ಥಿತಿಯೇ. ಕರೊನಾ ಹಾಟ್‌ಸ್ಪಾಟ್‌ ಜಾಗದಿಂದ ಹಿಡಿದು ಎಲ್ಲಾ ಕಡೆಗಳಿಗೂ ಹೋಗಿ ಸಂದರ್ಶನ ತೆಗೆದುಕೊಳ್ಳುವ, ಬ್ರೇಕಿಂಗ್‌ ಸುದ್ದಿ ಕೊಡುವ ಅನಿವಾರ್ಯ ಅವರದ್ದು.
ಇದೇ ಕಾರಣಕ್ಕೆ ವರದಿಗಾರರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಷ್ಟವೇ. ಅಂಥದ್ದರಲ್ಲಿ ಏನೂ ಎಚ್ಚರಿಕೆ ತೆಗೆದುಕೊಳ್ಳದೇ ಸಂದರ್ಶನಕ್ಕೆ ಮುಂದಾದರೆ ಏನಾಗುತ್ತದೆ? ಅದೂ ಪಾಕಿಸ್ತಾನದಲ್ಲಿ! ಇಲ್ಲಿದೆ ನೋಡಿ ವರದಿಗಾರನ ಪೇಚಿನ ಕಥೆ:
ಈ ವರದಿಗಾರನ ಹೆಸರು ಅದ್ನಾನ್ ರಫಿಕ್. ಪಾಕಿಸ್ತಾನದ “ಎಆರ್‌ವೈ ಚಾನೆಲ್‌ ರಿಪೋರ್ಟರ್ ಇವರು. ಕರೊನಾ ವೈರಸ್‌ನಿಂದಾಗಿ ಪೇಶಾವರದಲ್ಲಿ ಪೆಟ್ರೋಲ್‌ ಅಭಾವ ಉಮಟಾಗಿದೆ. ಇದರ ಬಗ್ಗೆ ವರದಿ ಮಾಡಲು ಅದ್ನಾನ್‌ ತೆರಳಿದ್ದಾರೆ.
ಅಲ್ಲಿರುವ ಪೆಟ್ರೋಲ್‌ ಬಂಕ್‌ಗಳನ್ನೆಲ್ಲಾ ಸುತ್ತಾಡಿ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ವರದಿ ಮಾಡಿದ್ದಾರೆ. ಈ ಸಮಯದಲ್ಲಿ ಕೆಲವೊಂದು ವಾಹನ ಚಾಲಕರನ್ನು ಮಾತನಾಡಿಸುವುದು ಸಹಜ. ಅದ್ನಾಲ್‌ ಕೂಡ ಹೀಗೇ ಮಾಡಿದ್ದಾರೆ. ಆದರೆ ಅಲ್ಲಿಯೇ ಆಗಿರುವುದು ಎಡವಟ್ಟು!
Genuinely feel sorry for the ARY Reporter, Adnan Tariq – for better understanding, watch the video till the end.#covid19#Pakistanpic.twitter.com/pnzSDeGj6U
— Anas Mallick (@AnasMallick)July 18, 2020

ಅದ್ನಾಲ್‌ ಮಾಸ್ಕ್‌ ಇದ್ದರೂ ಅದನ್ನು ಮೂಗು-ಬಾಯಿಗೆ ಕಟ್ಟಿಕೊಂಡಿರಲಿಲ್ಲ. ಹೀಗೆ ಆಗಿದ್ದರೆ ಪರವಾಗಿರಲಿಲ್ಲವೇನೋ. ಆದರೆ ವಾಹನ ಸವಾರನೊಬ್ಬರನ್ನು ಮಾತನಾಡಿಸುವಾಗಲೂ ಇವರಿಗೂ ಮಾಸ್ಕ್‌ ಇರಲಿಲ್ಲ. ಆ ವ್ಯಕ್ತಿಗೂ ಮಾಸ್ಕ್‌ ಇರಲಿಲ್ಲ.
ಇಷ್ಟೇ ಆಗಿದ್ದರೆ ಈ ಸುದ್ದಿ ಇಷ್ಟೊಂದು ವೈರಲ್‌ ಆಗುತ್ತಲೇ ಇರಲಿಲ್ಲ. ಕೊನೆಯಾಗಿ ಆ ವ್ಯಕ್ತಿಯನ್ನು ವರದಿಗಾರ ಮಾತನಾಡಿಸಿದಾಗ, ಆತ “ಹೌದು ಪೇಶಾವರದಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಬಹಳ ಕೆಟ್ಟ ಪರಿಸ್ಥಿತಿ ಇದೆ. ನಾನು ಕರೊನಾ ಪಾಸಿಟಿವ್ ಪೇಷಂಟ್‌, ಆಸ್ಪತ್ರೆಗೆ ಹೋಗುತ್ತಿದ್ದೇನೆ” ಎಂದು ಉತ್ತರಿಸಿದ! ಇಬ್ಬರೂ ಮಾಸ್ಕ್‌ ಹಾಕಿರಲಿಲ್ಲ. ಹತ್ತಿರ ಹೋಗಿ ವರದಿಗಾರ ಮಾತನಾಡಿಸಿದ್ದಾನೆ. ಕರೊನಾ ಪಾಸಿಟಿವ್‌ ಎಂದು ಆರಾಮಾಗಿ ಆ ಆಸಾಮಿ ಹೇಳಿದಾಗ ವರದಿಗಾರ ಬೇಸ್ತು ಬಿದ್ದಿದ್ದಾರೆ!
ಈ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ವರದಿಗಾನ ಸ್ಥಿತಿಗೆ ನೆಟ್ಟಿಗರು ಕನಿಕರ ಪಟ್ಟುಕೊಂಡಿದ್ದಾರೆ. #ಕೋವಿಡ್ -19 #ಪಾಕಿಸ್ತಾನ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಪತ್ರಕರ್ತ ಹಾಗೂ ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕ ಅನಾಸ್ ಮಲ್ಲಿಕ್ ಟ್ವೀಟ್ ಮಾಡಿದ್ದಾರೆ. ಜು.19 ರಂದು 12.57 ಕ್ಕೆ ಅಪ್ ಲೋಡ್ ಆದ ವಿಡಿಯೋವನ್ನು ಇದುವರೆಗೆ 85 ಸಾವಿರಕ್ಕೂ ಅಧಿಕ ಮಂದಿ ‌ವೀಕ್ಷಿಸಿದ್ದಾರೆ. 1.7 ಸಾವಿರ ಜನರು ಲೈಕ್ ಮಾಡಿದ್ದಾರೆ.
ಗಂಡನ ತೊರೆದ ಅಕ್ಕನಮಗಳ ಮದುವೆಯಾಗಿ ಪೆಟ್ರೋಲ್‌ ಸುರಿದು ಕೊಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + thirteen =
Remember me
