ಪೇಶಾವರ:ದುಷ್ಕರ್ವಿುಗಳು ಬೆಂಕಿ ಹಚ್ಚಿದ್ದರಿಂದ ಹಾಳಾಗಿದ್ದ ಹಿಂದು ದೇವಾಲಯವನ್ನು ಮರುನಿರ್ವಣ ಮಾಡಲಾಗಿದ್ದು, ಪಾಕಿಸ್ತಾನದ ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಗುಲ್ಜರ್ ಅಹ್ಮದ್ ಮಂಗಳವಾರ ಇದನ್ನು ಉದ್ಘಾಟಿಸಿದರು.
ಅಲ್ಪಸಂಖ್ಯಾತರ ರಕ್ಷಣೆಗೆ ಪಾಕ್ ಬದ್ಧವಾಗಿದೆ ಮತ್ತು ಭವಿಷ್ಯದಲ್ಲೂ ಇದನ್ನು ಮುಂದುವರಿಸಲಿದೆ. ದೀಪಾವಳಿ ಸಂದರ್ಭದಲ್ಲಿ ದೇಗುಲ ಸಿದ್ಧವಾಗಿರುವುದು ಹಿಂದುಗಳಿಗೆ ಕೊಡುಗೆಯಾಗಿದೆ ಎಂದರು. ದೇವಾಲಯ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ್ದ ಮು.ನ್ಯಾ. ಅಹ್ಮದ್, ಇಂಥ ಕೃತ್ಯಗಳಿಂದ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ದೇಗುಲವನ್ನು ಮರುನಿರ್ವಣ ಮಾಡುವಂತೆ ಮತ್ತು ಇದಕ್ಕೆ ತಗುಲುವ ವೆಚ್ಚವನ್ನು ದುಷ್ಕರ್ವಿುಗಳಿಂದ ವಸೂಲು ಮಾಡುವಂತೆ ಆದೇಶ ನೀಡಿದ್ದರು. ಕರಾಕ್ ಜಿಲ್ಲೆಯ ತೇರಿ ಗ್ರಾಮದಲ್ಲಿ ಶತಮಾನಕ್ಕೂ ಹಳೆಯದಾದ್ದ ಶ್ರೀ ಪರಮಹಂಸಜಿ ಮಹರಾಜ್ ದೇಗುಲವನ್ನು ಕಳೆದ ವರ್ಷ ಡಿಸೆಂಬರ್​ನಲ್ಲಿ ದುಷ್ಕರ್ವಿುಗಳ ಗುಂಪು ಹಾಳುಗೆಡವಿತ್ತು.
ಇಸ್ಲಾಮಾಬಾದ್: ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ನಲ್ಲಿ ಪ್ರಥಮ ಹಿಂದು ದೇವಾಲಯ ನಿರ್ವಿುಸುವುದಕ್ಕಾಗಿ ಮಂಜೂರು ಮಾಡಿದ್ದ ಜಮೀನನ್ನು ಅಧಿಕಾರಿಗಳು ಮಂದಿರದ ಆಡಳಿತ ಮಂಡಳಿಗೆ ಮರಳಿಸಿದ್ದಾರೆ. ಜಮೀನು ಮಂಜೂರಾತಿಯನ್ನು ರದ್ದುಪಡಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಜಮೀನನ್ನು ಹಿಂದು ಸಮುದಾಯಕ್ಕೆ ಮರಳಿಸಲಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್​ನಲ್ಲಿ ಸೋಮವಾರ ವಿಚಾರಣೆಯೊಂದರ ವೇಳೆ, ಜಾಗವನ್ನು ರದ್ದುಪಡಿಸಿದ್ದ ವಿಚಾರವನ್ನು ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಅಧಿಕಾರಿಗಳು ಬಹಿರಂಗ ಪಡಿಸಿದ್ದರು. ಮಂಜೂರಾದ 0.5 ಎಕರೆ ಜಾಗದಲ್ಲಿ ಮಂದಿರ ನಿರ್ಮಾಣ ಕಾರ್ಯ ಆರಂಭವಾಗದ್ದರಿಂದ ಅದನ್ನು ಈ ವರ್ಷದ ಫೆಬ್ರವರಿಯಲ್ಲೇ ರದ್ದುಪಡಿಸಲಾಗಿದೆ ಎಂದು ಸಿಡಿಎ ವಕೀಲ ಜಾವೇದ್ ಇಕ್ಬಾಲ್ ಕೋರ್ಟ್​ಗೆ ತಿಳಿಸಿದ್ದರು. ದೇವಸ್ಥಾನ, ರುದ್ರಭೂಮಿ ಮತ್ತು ಸಮುದಾಯ ಕೇಂದ್ರ ಸ್ಥಾಪನೆಗಾಗಿ 2016ರಲ್ಲಿ ಜಮೀನು ಮಂಜೂರು ಮಾಡಲಾಗಿತ್ತು.
ಮೂರು ದಿನ ತಮಿಳುನಾಡಿನಲ್ಲಿ ರೆಡ್ ಅಲರ್ಟ್: 12 ಜಿಲ್ಲೆಗಳಲ್ಲಿ ರಜೆ ಘೋಷಣೆ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × 1 =
Remember me
