ನವದೆಹಲಿ:ಕರಾಚಿಯ ಷೇರು ವಿನಿಮಯ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸುತ್ತಿರುವ ಪಾಕಿಸ್ತಾನ, ಈ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲು ಹುನ್ನಾರ ನಡೆಸಿತ್ತು. ಅದರ ಈ ಹುನ್ನಾರಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಒತ್ತಾಸೆಯಾಗಿ ನಿಂತಿದ್ದರು. ಆದರೆ, ಭಾರತದ ಪರ ನಿಲುವು ತೆಳೆದಿರುವ ಅಮೆರಿಕ, ಕರಾಚಿ ದಾಳಿಯ ವಿಷಯವನ್ನು ಇಮ್ರಾನ್​ ಖಾನ್​ ರಾಜಕೀಯಕರಣಗೊಳಿಸದಂತೆ ತಡೆಯೊಡ್ಡಿದೆ.
ಇಂಥ ಘಟನೆಗಳು ನಡೆದಾಗಲೆಲ್ಲ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅದನ್ನು ಖಂಡಿಸುತ್ತದೆ. ಆದರೆ, ಈ ಬಾರಿ ಈ ದಾಳಿಗೆ ಭಾರತವನ್ನು ಹೊಣೆಯಾಗಿಲು ಪಾಕಿಸ್ತಾನ ಪ್ರಯತ್ನಿಸಿದ್ದರಿಂದ, ಆ ಘಟನೆ ಕುರಿತ ವಿಶ್ವಸಂಸ್ಥೆಯ ಹೇಳಿಕೆಯ ವಿಷಯ ಜಟಿಲಗೊಂಡಿತು ಎನ್ನಲಾಗಿದೆ.
ಇದನ್ನೂ ಓದಿ:ತಂಡೋಪತಂಡವಾಗಿ ಸೇನೆ ಹಿಂತೆಗೆತ; ಚೀನಾ ಮುಖವಾಣಿ ಗ್ಲೋಬಲ್​ ಟೈಮ್ಸ್​ ವರದಿ
ಮಂಗಳವಾರ ದಾಳಿಯ ಕುರಿತು ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಮಕ್ದುಮ್​ ಷಾ ಮೆಹಮೂದ್​ ಖುರೇಷಿ, ಈ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದರು. ಪಾಕ್​ನ ಸಂಸತ್​ ಅಧಿವೇಶನದ ವೇಳೆ ಈ ವಿಷಯ ಪ್ರಸ್ತಾಪಿಸಿದ್ದ ಪ್ರಧಾನಿ ಇಮ್ರಾನ್​ ಖಾನ್​ ತಮ್ಮ ವಿದೇಶಾಂಗ ಸಚಿವರ ಹೇಳಿಕೆಯನ್ನೇ ಪುನರುಚ್ಚರಿಸಿದ್ದರು. ಆದರೆ, ಈ ಬಲೂಚ್​ ಲಿಬರೇಷನ್​ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆದರೂ ಇದಕ್ಕೆ ಭಾರತವನ್ನೇ ಧೂಷಿಸುವ ಕಾಯಕದಿಂದ ಪಾಕಿಸ್ತಾನ ಹಿಂದೆಸರಿದಿರಲಿಲ್ಲ.
ಈ ವಿಷಯವಾಗಿ ಮೊದಲಿಗೆ ಭಾರತದ ಪರವಾಗಿ ಜರ್ಮನಿ ಧ್ವನಿಯೆತ್ತಿತು. ತನ್ಮೂಲಕ ಅದು ಚೀನಾದ ಸಹಕಾರದೊಂದಿಗೆ ಕರಾಚಿ ದಾಳಿಯ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸುವ ಇಮ್ರಾನ್​ ಖಾನ್​ ಉದ್ದೇಶಕ್ಕೆ ತಣ್ಣೀರೆರೆಚಿತ್ತು. ಅಮೆರಿಕ ಕೂಡ ಇದಕ್ಕೆ ಧ್ವನಿಗೂಡಿಸಿತು.
ಸದ್ಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜರ್ಮನಿ ಮತ್ತು ಅಮೆರಿಕ ಒತ್ತಡದಿಂದ ಕರಾಚಿ ದಾಳಿ ಕುರಿತ ತನ್ನ ಹೇಳಿಕೆಯನ್ನು ವಿಳಂಬ ಮಾಡಿರಬಹುದು. ಆದರೆ, ಇಂದಲ್ಲ ನಾಳೆ ಆ ಹೇಳಿಕೆಯನ್ನು ನೀಡಿಯೇ ತೀರುತ್ತದೆ. ಆದರೆ, ಈ ವಿಳಂಬದಿಂದಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಟ ಕಟ್ಟಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂಬ ಸಂಗತಿಯನ್ನು ಪಾಕಿಸ್ತಾನ ಮತ್ತು ಚೀನಾಕ್ಕೆ ಮನವರಿಕೆ ಮಾಡಿಕೊಡುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರ ನಷ್ಟದ ಅಪಾಯಕ್ಕೆ ಸಿಲುಕಿರುವ ಓಲಿ ಸಹಾಯಕ್ಕೆ ಒಂದಾದ ಇಮ್ರಾನ್​, ಜಿನ್​ಪಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
