ಪಾಕಿಸ್ತಾನ:ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗುತ್ತಿದೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ಎಲ್ಲಿಯೂ ಹಬ್ಬದ ವಾತಾವರಣವಿಲ್ಲ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.  ಬಡ ಮತ್ತು ಮಧ್ಯಮ ಆದಾಯ ವರ್ಗದ ಜನರು ಅಗತ್ಯ ವಸ್ತುಗಳ ಖರೀದಿಗೂ ಪರದಾಡುವಂತಾಗಿದೆ ಎಂದು ದೂರಿದ್ದಾರೆ.

ತರಕಾರಿ, ಹಾಲು, ಸಕ್ಕರೆ, ಅಡುಗೆ ಎಣ್ಣೆ, ತುಪ್ಪ, ಮಾಂಸ, ಮೊಟ್ಟೆ ಮತ್ತು ಬೇಳೆಕಾಳುಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳು ಮತ್ತು ಉತ್ಪನ್ನಗಳು ದುಬಾರಿಯಾಗುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ.

ಕೆಲವು ತಿಂಗಳ ಹಿಂದೆ, ಪಾಕಿಸ್ತಾನದಾದ್ಯಂತ ತರಕಾರಿಗಳು ಮತ್ತು ಸರಕುಗಳ ಸರಾಸರಿ ಹೆಚ್ಚಳವು ಶೇಕಡಾ 31.5 ರಷ್ಟಿತ್ತು. ಆದರೆ ಹಬ್ಬದ ತಿಂಗಳಲ್ಲಿ ಶೇ.60ಕ್ಕೆ ಏರಿಕೆಯಾಗಿದೆ. ತರಕಾರಿಗಳ ಬೆಲೆಯೊಂದಿಗೆ ವಿವಿಧ ಹಣ್ಣುಗಳ ಬೆಲೆಯೂ ಭಾರಿ ಏರಿಕೆಯಾಗಿದೆ.
ಸದ್ಯ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಕೆಜಿಗೆ 150 ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ರಂಜಾನ್‌ಗೆ ಮೊದಲು ಕೆಜಿಗೆ 50 ರೂಪಾಯಿ ಇದ್ದ ಆಲೂಗಡ್ಡೆ ಬೆಲೆ ಈಗ 80 ರೂಪಾಯಿಗೆ ಏರಿಕೆಯಾಗಿದೆ. ಪಾಕಿಸ್ತಾನಿ ಕರೆನ್ಸಿ(pkr) ಪ್ರಕಾರ ಎಲೆಕೋಸು ಬೆಲೆ 80-100 ನಿಂದ 150 pkr ಗೆ ಹೆಚ್ಚಾಗಿದೆ.

ಹಸಿಮೆಣಸಿನಕಾಯಿ ಕೆಜಿಗೆ 200 ರಿಂದ 320 ರೂ. ಕ್ಯಾಪ್ಸಿಕಂ ಬೆಲೆ ಕೆಜಿಗೆ 400 ರೂ. ಸಾಮಾನ್ಯವಾಗಿ ರಂಜಾನ್ ತಿಂಗಳಲ್ಲಿ ಹಣ್ಣುಗಳ ಮಾರಾಟ ಹೆಚ್ಚುತ್ತದೆ. ಚಿಕ್ಕ ಗಾತ್ರದ ಬಾಳೆಹಣ್ಣಿನ ಬೆಲೆ ಡಜನ್ ಗೆ 80ರಿಂದ 120ಕ್ಕೆ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ದೊಡ್ಡ ಬಾಳೆಹಣ್ಣು ಡಜನ್‌ಗೆ 200 ರೂ.ಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಕೂಡ 150 ರಿಂದ 200 ರೂ. ಆಗಿದೆ.ಅಗತ್ಯ ವಸ್ತುಗಳ ಬೆಲೆಯಲ್ಲಿನ ಈ ಹಠಾತ್ ತೀವ್ರ ಏರಿಕೆಯು ಕಡಿಮೆ-ಮಧ್ಯಮ-ಆದಾಯದ ಗ್ರಾಹಕರ ಆರ್ಥಿಕ ತೊಂದರೆಗಳನ್ನು ಹೆಚ್ಚಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
