ನವದೆಹಲಿ:ಪಾಕಿಸ್ತಾನದ ಕರಾಚಿಯಲ್ಲಿರುವ ಸ್ಟಾಕ್ ಎಕ್ಸ್​ಚೇಂಜ್​ ಮೇಲಿನ ಉಗ್ರದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪ ಮಾಡಿರುವ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಉತ್ತರ ನೀಡಿದೆ. ನಿಮ್ಮ ದೇಶದೊಳಗೆ ಇರುವ ಸಮಸ್ಯೆಗಳಿಗೆ ಭಾರತದತ್ತ ಬೊಟ್ಟು ಮಾಡಬೇಡಿ ಎಂದು ಖಡಕ್​ ಪ್ರತಿಕ್ರಿಯೆ ನೀಡಿದೆ.
ಕರಾಚಿಯ ಷೇರುಪೇಟೆ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾಹ್​ ಮಹಮ್ಮದ್​ ಖುರೇಶಿ ಭಾರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ದಾಳಿಯ ಹಿಂದೆ ಭಾರತದ ಪಿತೂರಿ ಇದೆ ಎಂದು ಹೇಳಿದ್ದರು.ಪಾಕ್​ನ ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ನಮ್ಮ ದೇಶದ ವಿದೇಶಾಂಗ ವ್ಯವಹಾರಗಳ ಇಲಾಖೆ, ಖುರೇಶಿ ಅವರು ತಮ್ಮ ಸರ್ಕಾರ ಮಾಡುವುದನ್ನು ಇಲ್ಲಿಯೂ ಅನ್ವಯಿಸಿ ಹೇಳಿದ್ದಾರೆ. ಅವರ ಪ್ರಧಾನಿ ಇಮ್ರಾನ್​ ಖಾನ್​ ಅವರು ಜಾಗತಿಕ ಉಗ್ರನನ್ನು ಹುತಾತ್ಮ ಎನ್ನುತ್ತಾರೆ. ಅದೇ ರೀತಿಯ ಮನಸ್ಥಿತಿಯಲ್ಲಿಯೇ ಇದೀಗ ಮಾತನಾಡಿದ್ದಾರೆ ಎಂದು ತಿರುಗೇಟು ನೀಡಿದೆ.
ಕರಾಚಿ ಪಿಎಸ್​ಎಕ್ಷ್​ ಮೇಲೆ ಸೋಮವಾರ ಬೆಳಗ್ಗೆ ನಾಲ್ವರು ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಉಗ್ರರೂ ಸೇರಿ ಒಟ್ಟು 9 ಮಂದಿ ಮೃತರಾಗಿದ್ದರು. (ಏಜೆನ್ಸೀಸ್​)
ಸಿಡಿಲು ಬಡಿತಕ್ಕೆ ಇಂದು ಒಂದೇ ದಿನ 22 ಮಂದಿ ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ.ಪರಿಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 17 =
Remember me
