ಇಸ್ಲಾಮಾಬಾದ್:ಪಾಕಿಸ್ತಾನ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಒಂದಲ್ಲಾ… ಎರಡಲ್ಲಾ… ಹಿಂದೊಮ್ಮೆ ಭಾರತಕ್ಕೆ ಬುದ್ಧಿ ಕಲಿಸಲು ಹೋಗಿ ತನ್ನ ಹವಾಮಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಡವಟ್ಟು ಮಾಡಿಕೊಂಡಿತ್ತು.
ನಂತರ ಭಾರತಕ್ಕೆ ಸೇರಿರುವ ಗಡಿ ಭಾಗದ ಕೆಲವೊಂದು ಊರುಗಳು ತನ್ನದೇ ಎಂದು ಸಾರಿಕೊಳ್ಳುತ್ತಿದ್ದ ಪಾಕ್‌, ನಕ್ಷೆಯಲ್ಲಿ ಅದನ್ನೂ ಎಡವಟ್ಟು ಮಾಡಿಕೊಂಡು, ಆ ಭಾಗಗಳೆಲ್ಲಾ ಭಾರತದ್ದೇ ಎಂದು ಸತ್ಯ ಸಾರಿ ಬಿಟ್ಟಿತ್ತು. ಇದರಿಂದಲೂ ಪಾಕಿಸ್ತಾನ ಟ್ರೋಲ್‌ ಆಗಿದ್ದು ಅಷ್ಟಿಷ್ಟಲ್ಲ.
ಈಗ ಅಂಥದ್ದೇ ಇನ್ನೊಂದು ಎಡವಟ್ಟನ್ನು ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಮಾಡಿದೆ. ಅದೇನೆಂದರೆ ತನ್ನ ದೇಶದ ಹೆಸರನ್ನು ಟ್ವಿಟರ್‌ ಖಾತೆಯಲ್ಲಿ ತಪ್ಪಾಗಿ ಬರೆದಿದೆ.
ಇದನ್ನೂ ಓದಿ:ಕುರಿಗಳಿಗೂ ಕ್ವಾರಂಟೈನ್​, ಮಾಂಸ ಪ್ರಿಯರೇ ಜಾಗ್ರತೆ!
ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಪಾಕಿಸ್ತಾನದ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ತೆರಳಿದೆ. ಈ ವಿಷಯವನ್ನು ತಿಳಿಸುವ ಭರದಲ್ಲಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತನ್ನ ದೇಶದ ಹೆಸರನ್ನೇ ತಪ್ಪಾಗಿ ಬರೆದುಕೊಂಡಿದೆ. Pakistan ಎಂದು ಬರೆಯುವ ಬದಲಾಗಿ Pakiatan ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಟ್ವೀಟ್ ಮಾಡಿದೆ.
ಟ್ವೀಟ್ ಮಾಡಿ ಒಂದು ಗಂಟೆ ಬಳಿಕ ಆದ ತಪ್ಪನ್ನು ಗಮನಿಸಿ ಟ್ವೀಟ್ ಡಿಲೀಟ್ ಮಾಡಲಾಗಿದೆ. ನಂತರವೂ ಟ್ವಿಟ್ಟರ್ ನಲ್ಲಿ ಹಾಸ್ಯ ಮುಂದುವರಿದಿದೆ. ಪಾಕಿಸ್ತಾನದ ಸರಿಯಾದ ಸ್ಪೆಲ್ಲಿಂಗ್ ತಿಳಿಯಲು ಒಂದು ಗಂಟೆ ಬೇಕಾಯಿತು ಎಂದು ಟ್ರೋಲಿಗರು ಹಾಸ್ಯ ಮಾಡುತತ್ತಿದ್ದಾರೆ.
ಮೂರು ಟೆಸ್ಟ್ ಮತ್ತು ಮೂರು ಟಿ-20 ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಪಾಕ್‌ ತಂಡ ಆಡಲಿದೆ. ಜುಲೈ 30ರಿಂದ ಸರಣಿ ಆರಂಭವಾಗಲಿದ್ದು, ಅದಕ್ಕಿಂತ ಮೊದಲು ಪಾಕ್ ತಂಡ 14 ದಿನಗಳ ಕ್ವಾರಂಟೈನ್‌ನಲ್ಲಿ ಇರುತ್ತಾರೆ.
ಅಡ್ಮಿಟ್‌ ವಿಳಂಬದಿಂದ ಸೋಂಕಿತನ ಸಾವು: ಆಸ್ಪತ್ರೆಗೆ ಬಿತ್ತು ₹ 77 ಲಕ್ಷ ಭಾರಿ ದಂಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
