ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಏನು ಬೇಕಾದರೂ ಆಗುತ್ತದೆ ಎಂದು ಸಾಮಾನ್ಯವಾಗಿ ರೂಢಿಯಿಂದ ಬಂದಿರುವ ಮಾತು. ಅಂಥದ್ದೇ ಒಂದು ಪ್ರಸಂಗ ಇತ್ತೀಚೆಗೆ ನಡೆದಿತ್ತು.
ಅಕ್ರಮ ಜೂಜಾಟದ ಆರೋಪದ ಮೇಲೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಅವರ ಜತೆಗಿದ್ದ ಕತ್ತೆಯನ್ನೂ ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಎಫ್​ಐಆರ್​ನಲ್ಲಿ ಆರೋಪಿಗಳ ಜತೆಗೆ ಕತ್ತೆಯ ಹೆಸರನ್ನೂ ಪೊಲೀಸರು ಉಲ್ಲೇಖ ಮಾಡಿದ್ದರಿಂದ ಅದನ್ನೂ ಜೈಲಿನಲ್ಲಿಯೇ ಇರಿಸಲಾಗಿತ್ತು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಸಿಟಿಯಲ್ಲಿ ಈ ಘಟನೆ ನಡೆದಿತ್ತು. ಕತ್ತೆಯ ಮೇಲೂ ರೇಸ್​ ಕಟ್ಟುವ ಮೂಲಕ ಜೂಜಾಟ ಆಯೋಜಿಸಲಾಗಿತ್ತು. ಈಕುರಿತು ಬಂದಿದ್ದ ದೂರನ್ನು ಆಧರಿಸಿ ಜೂಜು ತಡೆ ಕಾಯ್ದೆ ಪ್ರಕಾರ ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಎಫ್​ಐಆರ್​ನಲ್ಲಿ ಕತ್ತೆಯ ಉಲ್ಲೇಖವೂ ಇದ್ದ ಕಾರಣ ಪೊಲೀಸರು ಎಂಟು ಆರೋಪಿಗಳ ಜತೆಗೆ ಕತ್ತೆಯನ್ನೂ ಬಂಧಿಸಿದ್ದರು. ಜೂಜು ನಡೆಯುತ್ತಿತ್ತು ಎನ್ನಲಾದ ಸ್ಥಳದಿಂದ 1.2 ಲಕ್ಷ ಪಾಕಿಸ್ತಾನಿ ರೂಪಾಯಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು. ಇದನ್ನು ಜೂಜಿಗಾಗಿ ಬಳಸಲಾಗುತ್ತಿತ್ತು.
ಇದನ್ನೂ ಓದಿ:ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ ಅಪಹರಿಸಿದ ಪಾಕಿಸ್ತಾನ; ಸೇಡಿನ ಕ್ರಮ ಶಂಕೆ
ಕತ್ತೆಯನ್ನು ನಾಲ್ಕು ದಿನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ನಂತರ ಇದೀಗ ಕೋರ್ಟ್​ ಅದಕ್ಕೆ ಜಾಮೀನು ಕೊಟ್ಟಿರುವ ಕಾರಣ, ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಕತ್ತೆಯ ಜತೆ ಜೂಜಾಟಕ್ಕಾಗಿ ಬಂಧಿಸಲ್ಪಟ್ಟ ಎಂಟು ಜನರನ್ನು ಸಹ ಬಿಡುಗಡೆ ಮಾಡಲಾಗಿದೆ.
ಆರೋಪಿಗಳನ್ನು ಜೈಲಿನ ಒಳಗೆ ಒಟ್ಟಿದ್ದರೆ, ಕತ್ತೆಯನ್ನು ಜೈಲಿನ ಆವರಣದಲ್ಲಿ ಕಟ್ಟಿಹಾಕಲಾಗಿತ್ತು. ಕತ್ತೆಯನ್ನು ಅದರ ಮಾಲೀಕ ಗುಲಾಮ್ ಮುಸ್ತಫಾಗೆ ಹಿಂದಿರುಗಿಸುವಂತೆ ಪೊಲೀಸರಿಗೆ ಕೋರ್ಟ್​ ಆದೇಶಿಸಿದೆ ಮತ್ತು ವಿಷಯ ಇತ್ಯರ್ಥವಾಗುವವರೆಗೂ ಅದನ್ನು ಸುರಕ್ಷಿತವಾಗಿಡುವಂತೆ ಸೂಚಿಸಿದೆ.ಹೊರಗಡೆ ಕಟ್ಟಿ ಹಾಕಿದ್ದ ಕತ್ತೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಪಾಕ್​ನ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಗುರಿಯಾಗಿದ್ದಾರೆ.(ಏಜೆನ್ಸೀಸ್​)
Donkey arrested for participating in a gambling racing in Rahim Yar Khan. Eight humans also rounded up, Rs 120,000 recovered.https://t.co/RIULiecduwpic.twitter.com/1FipntTR60
— Naila Inayat (@nailainayat)June 7, 2020

ಬ್ಯಾಂಕ್​ನಲ್ಲೂ ಖಾತೆ ತೆರೆದ ಕರೊನಾ: ಎಸ್​ಬಿಐ ಶಾಖೆಗಳು ಕ್ಲೋಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seventeen =
Remember me
